” ರತ್ನನ್ ಪ್ರಪಂಚ ” ಚಿತ್ರದ ಯಶಸ್ಸಿನ ಬಳಿಕ ಡಾಲಿ ಧನಂಜಯ ಮತ್ತು ಕೆಆರ್ ಜಿ ಸ್ಟುಡಿಯೋ ಸಂಸ್ಥೆ ಕಾರ್ತಿಕ್ ಗೌಡ ಮತ್ತು ಯೋಗಿ ಜಿ. ರಾಜ್ ನಿರ್ಮಾಣದ ಎರಡನೇ ಚಿತ್ರ ” ಗುರುದೇವ್ ಹೊಯ್ಸಳ” ದೇಶ ವಿದೇಶಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ.
ರಾಜ್ಯವಲ್ಲದೆ ವಿವಿಧ ರಾಜ್ಯಗಳು ಮತ್ತು ಹೊರ ದೇಶದಲ್ಲಿ ಏಕಕಾಲಕ್ಕೆ ಕನ್ನಡದ ಭಾಷೆಯಲ್ಲಿಯೇ ಘರ್ಜಿಸಲು ಸಿದ್ದವಾಗಿದ್ದಾನೆ. ಡಾಲಿ ಧನಂಜಯ್ ಅವರ 25 ನೇ ಚಿತ್ರ. ಜೊತೆಗೆ ಡಾಲಿ ಧನಂಜಯ, ಅಮೃತ್ ಅಯ್ಯಂಗಾರ್ ಮುದ್ದಾದ ಜೋಡಿಯ ಮೂರನೇ ಚಿತ್ರ.ಹೀಗಾಗಿ ಅಭಿಮಾನಿಗಳಲ್ಲಿ ಸಹಜವಾಗಿಯೇ ಕುತೂಹಲ ಹೆಚ್ಚುವಂತೆ ಮಾಡಿದೆ.
ಚಿತ್ರ ನಾಳೆ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ಮಾಪಕರಲ್ಲಿ ಒಬ್ಬರಾದ ಯೊಗಿ ಜಿ.ರಾಜ್, ” ಗುರುದೇವ್ ಹೊಯ್ಸಳ ” ಅಪ್ಪಟ ಮಣ್ಣಿನ ಸೊಗಡಿರುವ ಚಿತ್ರ. ಎಲ್ಲರಿಗೂ ಇಷ್ಟವಾಗುವ ಚಿತ್ರ ಎನ್ನುವ ಭರವಸೆ ವ್ಯಕ್ತಪಡಿಸಿದರು.
ಗುರುದೇವ್ ಹೊಯ್ಸಳ ಚಿತ್ರದವನ್ನು ಕನ್ನಡ ಭಾಷೆಯಲ್ಲಿ ಎಲ್ಲಾ ರಾಜ್ಯಗಳು ಮತ್ತು ವಿದೇಶದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸರಿ ಸುಮಾರು 450ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ ಎಂದರು
ಚಿತ್ರದಲ್ಲಿ ಡಾಲಿ ಧನಂಜಯ್ ಕಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿತ್ಯದ ಜೀವನದಲ್ಲಿ ನಡೆಯಲಿರುವ ಒಂದಷ್ಟು ವಿಷಯಗಳನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡಲಾಗಿದೆ ಎನ್ನುವ ವಿವರ ಅವರದು.
ಹೊಸತನದ ನಿರೂಪಣೆ ಮತ್ತು ಕಥೆಯೊಂದಿಗೆ ನಿರ್ದೇಶಕ ವಿಜಯ್ ಎನ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಅಚ್ಯುತಕುಮಾರ್,ಅವಿನಾಶ್, ನವೀನ್ ಶಂಕರ್, ಪ್ರತಾಪ್ ನಾರಾಯಣ್, ಮಾನಸಿ ಸುಧೀರ್, ಅನಿರುದ್ದ್ ,ಮಯೂರಿ ಸೇರಿದಂತೆ ಹಿರಿ ಕಿರಿಯ ಕಲಾವಿದರ ದೊಡ್ಡ ದಂಡೇ ಚಿತ್ರದಲ್ಲಿದೆ ಎಂದರು
ಉತ್ತರ ಖಾಂಡ ಶೀಘ್ರ
ಡಾಲಿ ಧನಂಜಯ ಅವರೊಂದಿಗೆ ಇನ್ನೂ ಮೂರು ಚಿತ್ರಗಳು ಬಾಕಿ ಇದ್ದು ಶೀಘ್ರದಲ್ಲಿ ಉತ್ತರ ಖಾಂಡ ಚಿತ್ರದ ಚಿತ್ರೀಕರಣ ಆರಂಭಿಸುತ್ತೇವೆ. ಹೊಯ್ಸಳ ಚಿತ್ರ ತೆರೆಗೆ ಬರಲಿ ಎಂದು ಕಾಯುತ್ತಿದ್ದೇವೆ.. ಮೇ, ಜೂನ್ ನಲ್ಲಿ ಆರಂಭವಾಗಲಿದೆ. – ಯೋಜಿ ಜಿ . ರಾಜ್, ನಿರ್ಮಾಪಕ
ಡಾಲಿ 25 ನೇ ಚಿತ್ರ
ನಟರಾಕ್ಷಸ ಡಾಲಿ ಧನಂಜಯ ಅವರ 25 ನೇ ಚಿತ್ರ ” ಗುರುದೇವ್ ಹೊಯ್ಸಳ”. ಈ ವಾರ ದೇಶ ವಿದೇಶದಲ್ಲಿ ಕನ್ನಡ ಭಾಷೆಯಲ್ಲಿ ಏಕ ಕಾಲಕ್ಕೆ ತೆರೆಗೆ ಬರಲು ಸಜ್ಜಾಗಿದೆ.