ಗುರುದೇವ್ ಹೊಯ್ಸಳನಿಗೆ ಕಿಚ್ಚನ ಶುಭ ಹಾರೈಕೆ

•            ಚಿಗೋ ರಮೇಶ್

ಕಿಚ್ಚ ಸುದೀಪ್ ಇದ್ದ ಕಡೆ ಒಂದಷ್ಟು ಪ್ರೀತಿ, ಸ್ನೇಹ, ಪ್ರೀತಿಯಿಂದಲೇ ಕಾಲೆಳೆಯುತ್ತಲೇ ಮನದುಂಬಿ ಹಾರೈಸುವ ಗುಣ. ಈ ಕಾರಣಕ್ಕಾಗಿಯೇ ಚಿತ್ರರಂಗದ ಬಹುತೇಕ ಮಂದಿಗೆ ಅವರೆಂದರೆ ಇಷ್ಟ. ಅಕ್ಕರೆ, ಅಭಿಮಾನ.

ಡಾಲಿ ಧನಂಜಯ ಅಭಿನಯದ 25ನೇ ಚಿತ್ರ “ಗುರುದೇವ ಹೊಯ್ಸಳ” ಚಿತ್ರದ ಟ್ರೈಲರ್ ಬಿಡುಗಡೆಯಲ್ಲಿ ಪೊಲೀಸ್ ಪಾತ್ರ ಯಾಕೆ ಮೀಸೆ ಬಿಟ್ಟಿಲ್ಲ ಅಂದ್ರೆ ಸೂಟ್ ಆಗಲ್ಲ ಸರ್ ಅಂದ್ರು, ಮೀಸೆ ಬಿಟ್ಟರೆ ತಾನೆ ಗೊತ್ತಾಗುವುದು, ಮೀಸೆ ಇಲ್ಲದಿರುವುದರಿಂದ ನಟ ಗಣೇಶ್ ಥರ ಕಾಣ್ತಾ ಇದ್ದೀರಿ ಎನ್ನುತ್ತಲೇ ಹೆಸರಿಗೆ ತಕ್ಕಂತೆ ಧನಂಜಯ, ನಟ ರಾಕ್ಷಸ ಎಂದರು.

ನಟಿ ಅಮೃತಾ ಅಯ್ಯಂಗಾರ್, ಧನಂಜಯ ಅವರನ್ನು ನಾಲ್ಕು ಬಾರಿ ಹಾಡಿ ಹೊಗಳಿದರು, ಧನಂಜಯ ಒಮ್ಮೆಯೂ ನಟಿಯ ಬಗ್ಗೆ ಮಾತನಾಡಲಿಲ್ಲ. ಸರಿ ಮೂರು ಚಿತ್ರದಲ್ಲಿ ಅವರನ್ನೇ ಯಾಕೆ ಹಾಕಿಕೊಂಡ್ರಿ, ಬೇರೆಯ ನಟರೊಂದಿಗೆ ಕೆಲಸ ಮಾಡಲು ಬಿಡಬೇಕು ಎನ್ನುತ್ತಿದ್ದಂತೆ ಮದ್ಯ ಪ್ರವೇಶಿಸಿದ ಧನಂಜಯ ಅತ್ಯುತ್ತಮ ನಟಿ ಸರ್. ಅವರಿಗಾಗಿ ಬಡವ ರಾಸ್ಕಲ್‍ನಲ್ಲಿ ಹಾಡು ಬರೆದಿದ್ದೇನೆ. ಈ ಚಿತ್ರದಲ್ಲಿ ಹಾಡು ಬರೆದಿದ್ದೆ ಆದರೆ ಅದನ್ನು ನಿರ್ಮಾಪಕರು, ಸಂಗೀತ ನಿರ್ದೇಶಕರು ಹಾಕಿಕೊಳ್ಳಲಿಲ್ಲ. ನಿಮ್ಮ ಚಿತ್ರದಲ್ಲಿ ಅವಕಾಶ ಕೊಡಿ ಎಂದರು.

ನಿರ್ಮಾಪಕ ಕಾರ್ತಿಕ್ ಗೌಡ ಉತ್ತಮ ಸ್ನೇಹಿತ, ಆತ ಕರೆದಾಗ ಇಲ್ಲ ಎನ್ನಲು ಆಗಲಿಲ್ಲ. ಇನ್ನು ನಾನು ಇಷ್ಟಪಡುವ ನಟ ಅನಂತ್ ನಾಗ್ , ಅವರ ಥರ ಅಚ್ಯುತ್ ಕುಮಾರ್ ನಟಿಸುತ್ತಾರೆ ಎಂದು ಕಿಚ್ಚ ಸುದೀಪ್ ಮೆಚ್ಚುಗೆ ಸೂಚಿಸುತ್ತಲೇ, ಸಿನಿಮಾ ಬಿಡುಗಡೆ ಬಂದಾಗ ಭಯ ಪಡಬಾರದು. ಸೋಲು ಗೆಲುವು ಕಡೆ ತಲೆ ಕೆಡಿಸಿಕೊಳ್ಳದೆ. ನಿಮಗೆ ದೊಡ್ಡ ಅಭಿಮಾನಿ ಬಳಗವಿದೆ ಅವರು ಚಿತ್ರಮಂದಿರದಲ್ಲಿ ಸಂಭ್ರಮಿಸುವ ಪರಿ ನೋಡಿ ಖುಷಿ ಪಡಬೇಕು ಎಂದು ಧನಂಜಯ ಅವರಿಗೆ ಸಲಹೆ ನೀಡಿದರು.

ನಿರ್ಮಾಪಕರಲ್ಲಿ ಒಬ್ಬರಾದ ಯೋಗಿ ಜಿ ರಾಜ್, ಚಿತ್ರ ಇದೇ 30 ರಂದು ತೆರೆಗೆ ಬರುತ್ತಿದೆ. ಒಂದಷ್ಟು ಸೂಕ್ಷ್ಮ ವಿಷಯಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಎಲ್ಲರ ಸಹಕಾರವಿರಲಿ ಎಂದು ಕೇಳಿಕೊಂಡರು.

ನಟಿ ಅಮೃತಾ ಅಯ್ಯಂಗಾರ್, ಧನಂಜಯಹೆಂಡತಿ ಪಾತ್ರ ಮಾಡಿದ್ದೇನೆ. ಅವರೊಂದಿಗೆ ಇದು ಮೂರನೇ ಚಿತ್ರ. ಒಳ್ಳೆಯ ಪಾತ್ರ ಸಿಕ್ಕಿದೆ ಎಂದರೆ ನಿರ್ದೇಶಕ ವಿಜಯ್ ಎನ್ ಎಲ್ಲರೂ ಚಿತ್ರದ ಬಗ್ಗೆ ಹೇಳಿದ್ದಾರೆ ಚಿತ್ರ ನೋಡಿ ಹರಸಿ ಎಂದರು.

ಕಲಾವಿದರಾದ ಅಚ್ಯುತ್ ಕುಮಾರ್, ನಾಗಭೂಷಣ್,ಅನಿವಾಶ್, ಪ್ರತಾಪ್ ನಾರಾಯಣ್, ನವೀನ್ ಶಂಕರ್, ಅನಿರುದ್ಧ್, ಮಯೂರಿ, ಸಂಭಾಷಣೆ ಬರೆದಿರುವ ಮಾಸ್ತಿ,ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಛಾಯಾಗ್ರಾಹಕ ಕಾರ್ತಿಕ್ ತಮ್ಮ ತಮ್ಮ ಕೆಲಸದ ಬಗ್ಗೆ ಮಾಹಿತಿ ಹಂಚಿಕೊಂಡರು

ನಿಮ್ಮ ನಿರ್ದೇಶನಲ್ಲಿ ನಟಿಸುವಾಸೆ

ಒಳ್ಳೆಯ ನಿರ್ದೇಶಕರ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಕಿಚ್ಚ ಸುದೀಪ್ ಅವರ ನಿರ್ದೇಶನದಲ್ಲಿ ನಟಿಸುವ ಮಹಾದಾಸೆ ಇದೆ ಎಂದು ನಟ ರಾಕ್ಷಸ ಧನಂಜಯ ತಮ್ಮ ಮನದ ಮಾತು ಸುದೀಪ್ ಅವರೊಂದಿಗೆ ಹಂಚಿಕೊಂಡರು.

ಸುದೀಪ್ ಸಾರ್ ಒಮ್ಮೆ ಮನೆಗೆ ಕರೆಸಿಕೊಂಡು ಯಾಕೆ ಹೊಟ್ಟೆ ಬಿಟ್ಟಿದ್ದೀರಿ,ವಯಸ್ಸಾದವರ ರೀತಿ ಕಾಣ್ತಾ ಇದ್ದೀರಿ ಎಂದರು, ಹೆಡ್ ಬುಷ್ ಚಿತ್ರದ ಜಯರಾಜ್ ಪಾತ್ರಕ್ಕೆ ಅಂದೆ. ಹೊಟ್ಟೆ ಬಿಟ್ಟೆ ಪಾತ್ರ ಮಾಡಬೇಕಾ ಸ್ಲಿಮ್ ಆಗಿ ಮಾಡಬಹುದಲ್ಲವೇ ಎನ್ನುತ್ತಲೇ ಹೊಯ್ಸಳ ಚಿತ್ರಕ್ಕೆ ಯಾಕೆ ಮೀಸೆ ಬಿಟ್ಟಿಲ್ಲ ಎಂದರು. ನನಗೆ ಸೂಟ್ ಆಗಲ್ಲ ಸಾರ್ ಎಂದು ಹೇಳುತ್ತಿರುವಾಗಲೇ ನನ್ನ ಚಿತ್ರದ ಮೇಲೆ ಮೀಸೆ ಬಿಡಿಸಿದ್ದರು. ಅವರ ಪ್ರೀತಿ ಅಭಿಮಾನಕ್ಕೆ ಚಿರಋಣಿ.

ಇನ್ನು ಗುರುದೇವ ಹೊಯ್ಸಳದಲ್ಲಿ ಗಂಭೀರ ವಿಷಯವನ್ನು ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ಎಮೋಷನ್ ವಿಷಯಕ್ಕೂ ಜಾಗವಿದೆ. ಚಿತ್ರಮಂದಿರಕ್ಕೆ ಬನ್ನಿ ಚಿತ್ರ ನೋಡಿ ಹರಸಿ ಎಂದರು.