ಗುರುಗಳ ಶಕ್ತಿಗೆ ಮಿತಿಯಿಲ್ಲ-ಮೈತ್ರಾ

ವಿಜಯಪುರ, ಜು. ೨೨:ಜೇಡಿ ಮಣ್ಣಿನ ಗುಡ್ಡೆ ಯಂತಿರುವ ಅನಕ್ಷರಸ್ಥ ಮಕ್ಕಳನ್ನು ತಿದ್ದಿ ತೀಡಿ ಸಮಾಜದಲ್ಲಿ ಅತಿ ಉತ್ತಮ ನಾಗರಿಕನನ್ನಾಗಿ ಮಾಡುವುದೆ ಶಿಕ್ಷಕರ ಕಾಯಕವಾಗಿದ್ದು ಅವರಿಗೆ ಸಮಾನರು ಯಾರೂ ಇಲ್ಲವೆಂದು ಅರ್ಬನ್ ಹಾರ್ಟಿಕಲ್ಚರ್ ಕಂಪೆನಿಯ ಸಿಇಒ ಟಿ ಮೈತ್ರಾ ತಿಳಿಸಿದರು .
ಈ ಹಿಂದೆ ಪ್ರಗತಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಅಭ್ಯಾಸ ಮಾಡಿದ್ದ ಅವರು ಇಲ್ಲಿನ ಪ್ರಗತಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವತಿಯಿಂದ ಗಿರಿಜಾ ಶಂಕರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ೨೦೨೨-೨೩ ನೇ ಸಾಲಿನ “ಪ್ರಗತಿ ಸ್ಪಂದನ” ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು .
ಸಮಾಜದಲ್ಲಿ ವಿದ್ಯಾರ್ಥಿನಿಯರು ಯಾವುದೇ ವಿದ್ಯಾರ್ಥಿಗಳಿಗಿಂತಲೂ ಕೀಳಲ್ಲ ಜೀವನದಲ್ಲಿ ಪ್ರತಿ ಹಂತದಲ್ಲಿಯೂ ಗುಣಾತ್ಮಕವಾಗಿ ಇರುವುದನ್ನು ಕಲಿಯಬೇಕು. ಹಾಗಾದಾಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪ್ರಗತಿ ಶಿಕ್ಷಣ ಸಂಸ್ಥೆಗಳಲ್ಲಿ ಓದಿದ್ದ ಮತ್ತೊಬ್ಬ ವಿದ್ಯಾರ್ಥಿನಿ ಬೆಂಗಳೂರು ವಿಶ್ವವಿದ್ಯಾಲಯದ ಯೋಗ ಥೆರಪಿಸ್ಟ್ ಮತ್ತು ಸಾಫ್ಟ್ ಸ್ಕಿಲ್ ಟ್ರೈನರ್ ಆದ ಮಾನಸರವರು ಮಾತನಾಡಿ, ಬದಲಾಗುತ್ತಿರುವ ಕಾಲಮಾನದಲ್ಲಿ ಪ್ರತಿಯೊಂದು ನಮ್ಮ ಕೈಗೆಟುಕುವ ಎಲ್ಲರೂ ಸೋಮಾರಿತನ ರೂಢಿಸಿಕೊಂಡು ಚಟುವಟಿಕೆಗಳಿಂದ ದೂರ ಪ್ರತಿಯೊಬ್ಬರು ಯೋಗ ಅಭ್ಯಾಸ ಮಾಡಬೇಕೆಂದು, ಇದರಿಂದ ಉತ್ತಮ ಆರೋಗ್ಯದೊಂದಿಗೆ ಜ್ಞಾಪಕ ಶಕ್ತಿ ಹೆಚ್ಚಿಸಿಕೊಂಡು ಮಾನಸಿಕ ನೆಮ್ಮದಿ ಪಡೆಯಲು ಸಾಧ್ಯವೆಂದು ತಿಳಿಸಿದರು.
ಪ್ರಗತಿ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಕೃಪಾ ಶಂಕರ್ ಮಾತನಾಡಿ ಎಸ್ಸೆಸ್ಸೆಲ್ಸಿ ತನಕ ಮಕ್ಕಳನ್ನು ಶಿಕ್ಷಕರು ಬೆಳೆಸುತ್ತಾರೆ ತದನಂತರ ವಿದ್ಯಾರ್ಥಿಗಳೇ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ತಾವೇ ಯೋಜನೆ ರೂಪಿಸಿ ಕೊಳ್ಳಬೇಕೆಂದು ತಿಳಿಸಿದರು .
ಪ್ರಗತಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್ ರವರು ಪ್ರಾಸ್ತಾವಿಕ ನುಡಿ ನುಡಿಯುತ್ತಾ ಶಾಲೆಗೆ ಇಪ್ಪತ್ತೈದು ವರ್ಷಗಳು ಕಳೆದಿದ್ದು ಇದುವರೆವಿಗೂ ಇಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ದೇಶದ ಅತ್ಯುನ್ನತ ಹುದ್ದೆಗಳಲ್ಲಿ ನ್ಯಾಯಾಧೀಶರು ಎಂಜಿನಿಯರುಗಳಾಗಿ ವೈದ್ಯರ ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಹೆಮ್ಮೆ ಎನಿಸುತ್ತದೆ ಎಂದರು.
ಶಾಲಾ ಹಂತದ ವಿದ್ಯಾರ್ಥಿ ಸಂಘಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ವಿದ್ಯಾರ್ಥಿನಿಯರು, ಡೊಳ್ಳು ಕುಣಿತ, ಭರತ ನಾಟ್ಯ ಮೊದಲಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.