ಗುರುಗಳ ಮೇಲಿನ ನಂಬಿಕೆ ಎತ್ತರಕ್ಕೆ ಕೊಂಡೊಯ್ಯುವುದು : ರಾಜೇಶ್ವರ ಶಿವಾಚಾರ್ಯರು

???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಭಾಲ್ಕಿ:ಎ.4: ಗುರುಗಳ ಮೇಲಿರುವ ಅಚಲ ಭಕ್ತಿ ಮತ್ತು ನಂಬಿಕೆಯು ಭಕ್ತರಿಗೆ ಎತ್ತರಕ್ಕೆ ಕೊಂಡೊಯ್ಯುದು ಎಂದು ಮೆಹಕರ ಕಟ್ಟಿಮನಿ ಹಿರೇಮಠ ಸಂಸ್ಥಾನದ ಶ್ರೀ ರಾಜೇಶ್ವರ ಶಿವಾಚಾರ್ಯರು ಪ್ರತಿಪಾದಿಸಿದರು.

ತಾಲೂಕಿನ ಡೊಣಗಾಪೂರ ಗ್ರಾಮದ ಶ್ರೀ ಡೋಣೇಶ್ವರ ದೇವಾಲಯದಲ್ಲಿ ಆಯೋಜಿಸಿದ್ದ ವಿಶ್ವಶಾಂತಿಗಾಗಿ 41ನೇ ಜಪಯಜ್ಞ, ಪ್ರಯೋಗಾತ್ಮಕ ದರ್ಮಶಿಕ್ಷಣ, ಶ್ರೀ ಡೋಣೇಶ್ವರ ಮಹಾಪೂಜಾ ಮಹೋತ್ಸವ ಹಾಗು ಪ್ರತಿಭಾವಂತರಿಗೆ ಗುರುರಕ್ಷೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಗುರುಗಳ ಮೇಲೆ ಶ್ರದ್ಧೆ, ವಿಶ್ವಾಸ, ನಂಬಿಕೆ ಇದ್ದರೆ ಭಕ್ತರು ಎತ್ತರಕ್ಕೆ ಬೆಳೆಯುವರು. ವಜ್ರ ಹುಟ್ಟಿದ್ದು ಗಟ್ಟಿಯಾದ ಕಲ್ಲಿನಲ್ಲಯೇ ಹಾಗಿ ಪ್ರತಿಭೆಗಳು ಹುಟ್ಟುವುದು ಬಡವರ ಗುಡಿಸಿಲಿನಲ್ಲಿ. ಹೀಗಾಗಿ ಇಂದು ಗುರುರಕ್ಷೆ ಪಡೆಯುತ್ತಿರುವ ಎಲ್ಲಾ ಪ್ರತಿಭಾವಂತರು ಬಡವರಾಗಿದ್ದು ಗುರುಗಳ ಕರುಣೆಯಿಂದ ಎತ್ತರಕ್ಕೆ ಬೆಳೆದಿದ್ದಾರೆ ಎಂದು ಹೇಳಿದರು.

ಇದೇವೇಳೆ ಗ್ರಾಮದ ಪ್ರತಿಭಾವಂತರಾದ ಡಾ| ನೀಲಾಂಬಿಕಾ ನಾಗರಾಜ ಅಮರಶೆಟ್ಟಿ ಕೆ.ಎ.ಎಸ್, ಡಾ| ಪ್ರಶಾಂತ ರಘುನಾಥ ಭೂರೆ ಎಮ್.ಬಿ.ಬಿ.ಎಸ್, ಎಮ್.ಎಸ್, ಅಂಬ್ರೇಶ್ವರ ಚಂದ್ರಕಾಂತ ಕಡ್ಯಾಳೆ ಎಲೈಟಸ್ ಪವರ ಸೊಲುಶನ್ಸ್ ಬೆಂಗಳೂರು, ರಾಜಲಕ್ಷ್ಮಿ ಚಂದ್ರಶೇಖರ ಬಿರಾದಾರ ರವರಿಗೆ ಗುರುರಕ್ಷೆ ನೀಡಿ ಗೌರವಿಸಲಾಯಿತು.

ಶಿವಣಿ, ಹಲಬರ್ಗಾ ಮಠದ ಶ್ರೀ ಹಾವಗಿಲಿಂಗೆಶ್ವರ ಶಿವಾಚಾರ್ಯರು ಹೇಮರೆಡ್ಡಿ ಮಲ್ಲಮ್ಮನ ಬಗ್ಗೆ ಪುರಣಾ ಹೇಳಿದರು. ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹಲಮಂಡಗೆ, ಕಸಾಪ ತಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ, ಮಹಾತ್ಮಾಗಾಂಧಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿಯವರು ಗುರುರಕ್ಷೆಯ ಬಗ್ಗೆ ಮಾತನಾಡಿದರು. ಡಾ| ಬಸವರಾಜ ಅಡೆವೆಪ್ಪ ಕನ್ನಾಳೆಯವರಿಂದ ಪ್ರಸಾದ ಸೇವೆ ನಡೆಯಿತು. ಚಿದಾನಂದ ಝಳಕಿ ಮತ್ತು ಆನಂದಕುಮಾರ ಯಳವತ್ತಿಯವರಿಂದ ಸಂಗೀತ ಸೇವೆ ನಡೆಯಿತು.

ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಕುಂಚಗೆ, ಸಂಗಮೇಶ ಶಿವಲಿಂಗಯ್ಯಾ ಸ್ವಾಮಿ, ರಾಜಶೇಖರ ಚಿದ್ರೆ, ಬಾಬುರಾವ ವಿರಶೆಟ್ಟೆ, ರಘುನಾಥ ಭೂರೆ ಉಪಸ್ಥಿತರಿದ್ದರು.

ಮಹೇಶ ಬರಗಾಲೆ ಸ್ವಾಗತಿಸಿದರು. ರಾಜಶೇಖರ ಚಿದ್ರೆ ನಿರೂಪಿಸಿದರು. ಬಸವರಾಜ ಬಿರಾದಾರ ವಂದಿಸದರು.