ಗುರುಗಳ ಮಾರ್ಗದಲ್ಲಿ ನಡೆದರೆ ಪ್ರಬುದ್ಧ ಜೀವನ

ಸಂಜೆವಾಣಿ ವಾರ್ತೆ

 ಹರಿಹರ ಫೆ 19;  ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯೊಲ್ಲ. ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ ಎಂದು ನಿವೃತ್ತ ಶಿಕ್ಷಕಿ ಲೀಲಾವತಿ ಹೇಳಿದರು ನಗರದ ಉಡುಪಿ ಕಾಮತ್ ಹೋಟೆಲ್ ನಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದವರು  ಹುಟ್ಟಿರುವ ಪ್ರತಿಯೊಬ್ಬರು ಸಮಾಜಕ್ಕೆ ತಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿಕೊಳ್ಳಬೇಕು. ಉತ್ತಮ ಕೊಡುಗೆ ನೀಡಲು ಯತ್ನಿಸಬೇಕುಶಾಲೆಯಲ್ಲಿ ಕಲಿತವರು ವಿವಿಧ ಹುದ್ದೆಗಳಿದ್ದಾರೆ. ಈ ಸಮ್ಮಿಲನ ಎಲ್ಲರು ಒಂದೆಡೆ ಸೇರಲು ಮತ್ತು ಶಿಕ್ಷಕರ ಆಶೀರ್ವಾದ ಪಡೆಯಲು ಸಹಕಾರಿಯಾಗಿದೆ ಸಾಮಾಜಿಕ ವ್ಯವಸ್ಥೆಯ ಸರಿ ತಪ್ಪುಗಳನ್ನು ಅರಿತು ಬದುಕಲು ಅಕ್ಷರ ಜ್ಞಾನ ಹೊಂದುವುದು ಬಹಳ ಮುಖ್ಯ. ಶಿಕ್ಷಣ ನೀಡಿದ ಗುರುಗಳ ಮಾರ್ಗದಲ್ಲಿ ನಡೆದರೆ ಪ್ರಬುದ್ಧ ಜೀವನ ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು.ಹಳೆಯ ವಿದ್ಯಾರ್ಥಿ ಕರಿಯಪ್ಪ ಬಿ ಮಾತನಾಡಿ 28ವರ್ಷಗಳ ನಂತರ ಮತ್ತೆ ಹಳೆಯ ವಿದ್ಯಾರ್ಥಿಗಳೆಲ್ಲರೂ ಒಂದೆಡೆ ಸೇರೋದು, ಕಲಿಸಿದ ಗುರುಗಳನ್ನು ಸಂಪರ್ಕಿಸಿ ಒಂದೇ ವೇದಿಕೆಯಡಿ ತಂದು ಗೌರವಿಸೋದು ಸರಳವಾದ ಕೆಲಸವಲ್ಲ. ಆ ಪ್ರೀತಿ ವಾತ್ಸಲ್ಯದ ನಂಟು ಬೆಸೆದುಕೊಂಡಾಗಲೇ ಈ ಸ್ನೇಹ ಸಮ್ಮಿಲನವಾಗಲು ಸಾಧ್ಯ. ಶಿಸ್ತು, ವಿನಯ, ಪ್ರಾಮಾಣಿಕತೆ, ಕರುಣೆ, ಮಮತೆಯನ್ನು ಜೀವನದಲ್ಲಿ ಅಳವಡಿಸಿಕೊಂಡವರು ಮಾತ್ರ ಸ್ನೇಹ ಸಂಬಂದವನ್ನು ಒಂದುಗೂಡಿಸಬಲ್ಲರು. ಅಕ್ಷರ ಕಲಿಸಿದ ಗುರುಗಳಿಗೆ ಸಂಬಳ ಎಷ್ಟು ಬಂತು ಎಂಬುದು ಮುಖ್ಯವಾಗಲ್ಲ. ನೀಡಿದ ಶಿಕ್ಷಣದಿಂದ ಎಷ್ಟು ಜನ ಮಕ್ಕಳ ಬಾಳಿನಲ್ಲಿ ಬೆಳಕು ಮೂಡಿಸಿತು ಎಂಬುದು ಮುಖ್ಯವಾಗುತ್ತದೆ ಎಂದರು.ನಿವೃತ್ತ ಶಿಕ್ಷಕರುಗಳಾದ   ಪದ್ಮಾವತಿ ಸರಸ್ವತಿ  ಸರ್ವ ಮಂಗಳ ಇವರ ಜೊತೆಗೆ ಹಳೆಯ ವಿದ್ಯಾರ್ಥಿಗಳಾದ    ಹನುಮಂತ ಬಸವರಾಜ ಲೋಕೇಶ ಪ್ರವೀಣ ಮಂಗಳ ಗೌರಿ ರಾಜೇಶ್ವರಿ  ಮಂಗಳ ರಾಜಶೋಳಂಕಿ ಅಗಸ್ತ್ಯ ಸೇರಿದಂತೆ  ಕಲಿಸಿದ ಆತ್ಮೀಯ ಗುರುಗಳಿಗೆ, ಬೋಧಕೇತರ ಸಿಬ್ಬಂದಿಗೆ ವಿದ್ಯಾರ್ಥಿಗಳು ಪುಷ್ಪವೃಷ್ಟಿ ವಿದ್ಯೆಮೂಲಕ ವೇದಿಕೆಗೆ ಬರಮಾಡಿಕೊಂಡರು. ಪುಷ್ಪ ನಮನ ಸಲ್ಲಿಸಿ ಗೌರವಿಸಿ ಸನ್ಮಾನಿಸಿದರು