ಗುರುಗಳ ಗುಲಾಮರಾಗಿ ಜ್ಞಾನ ಪಡೆದುಕೊಳ್ಳಿ : ಈರಣ್ಣ ಗೊಗೇರಿ

ಜೇವರ್ಗಿ :ಸೆ.10 : ಪೂರ್ಣಗೊಂಡಿರುವ ಭವಿಷ್ಯದ ಯೋಜನೆಗಳ ಬಾಹ್ಯಾಕಾಶ ಮಿಷನ್ ಯೋಜನೆಗಳ ಇಂತಹ ದೊಡ್ಡ ಯಶಸ್ಸಿಗೆ ನಾವು ಹೆಮ್ಮೆ ಪಡುತ್ತೇವೆ. ಇಂತಹ ಸಾಧನೆಗಳಿಗೆ ಗುರುವರ್ಯರೇ ಕಾರಣ. ಹಾಗಾಗಿ ಮಕ್ಕಳೇ ಗುರುಗಳ ಗುಲಾಮರಾಗಿ, ಜ್ಞಾನದ ಖಜಾನೆಗೆ ಕೊಳ್ಳೆ ಹೊಡಿಯಿರಿ ಎಂದು ಇಸ್ರೋದ ಹಿರಿಯ ವಿಜ್ಞಾನಿ ಈರಣ್ಣ ಗೊಗೇರಿ ಕರೆ ನೀಡಿದರು.
ಪಟ್ಟಣದ ಗುರುಕುಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಶನಿವಾರ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನುದ್ದೆಶಿಸಿ ಈರಣ್ಣ ಗೊಗೇರಿ ಮಾತನಾಡಿ ವಿಜ್ಞಾನವು ಮೂಲಭೂತವಾಗಿ ನಮ್ಮ ಪರಿಸರವನ್ನು ಅರ್ಥಮಾಡಿಕೊಳ್ಳುವ ವ್ಯವಸ್ಥಿತ ಮಾರ್ಗವಾಗಿದೆ, ಅಲ್ಲಿ ಮಾನವರಿಗೆ ಹೆಚ್ಚು ಉಪಯುಕ್ತವಾದ ಉತ್ಪನ್ನದಲ್ಲಿ ವಿಜ್ಞಾನ ಜ್ಞಾನದ ಅನ್ವಯವನ್ನು ವಿಜ್ಞಾನ ವಿವಿಧ ಕ್ಷೇತ್ರಗಳನ್ನು ಅವಲಂಬಿಸಿ ತಂತ್ರಜ್ಞಾನ ಎಂದು ಕರೆಯುತ್ತೇವೆ. ವಿಜ್ಞಾನವನ್ನು ಭೌತಿಕ,ಏರೋಸ್ಪೇಸ್, ಆಟೋಮೋಟಿವ್ ಹಾಗೂ ಆರೋಗ್ಯ ವಿಜ್ಞಾನ ಎಂದು ವರ್ಗೀಕರಿಸಲಾಗಿದೆ.ಪೇಲೋಡ ಫೇರಿಂಗಗಳ ವೇಳೆ ಅಕೌಸ್ಟಿಕ್ ಗುಣಲಕ್ಷಣಗಳಿಗಾಗಿ ಬಳಸುವ ಗಾಳಿ ಸುರಂಗಗಳ ಪರೀಕ್ಷಾ ಸೌಲಭ್ಯದೊಂದಿಗೆ ಚಂದ್ರಯಾನ 3 ಮಿಷನ್ ಯಶಸ್ವಿಯಾಗಿದೆ ಎಂದು ಚಂದ್ರಯಾನ 3 ರ ಯಶಸ್ಸಿನ ಬಗ್ಗೆ ಸವಿಸ್ತಾರವಾಗಿ ವಿಜ್ಞಾನಿ ಈರಣ್ಣ ಗೊಗೇರಿ ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಮಹಾಂತಯ್ಯ ಸಿ ಹಿರೇಮಠ, ಹಿರಿಯ ನಿರ್ದೇಶಕ ಚನ್ನಮಲ್ಲಯ್ಯ ಹಿರೇಮಠ, ಕಸಾಪ ಗೌರವ ಅಧ್ಯಕ್ಷ ಕಲ್ಯಾಣಕುಮಾರ್ ಸಂಗಾವಿ ಗಂವ್ಹಾರ, ಪ್ರಾಚಾರ್ಯ ಜಗದೀಶ್ ಎಸ್ ಉಕನಾಳಕರ್, ಮುಖ್ಯಗುರು ಜ್ಯೋತಿ ಸಾಲಿಮಠ ಹಾಗೂ ಗುರುವರ್ಯರುಗಳಾದ ಧನರಾಜ ರಾಠೋಡ, ರೇಣುಕಾ, ಅರುಣಾ ಜ್ಯೋತಿ, ಲಕ್ಷ್ಮೀ ಎಸ್ ಕೆ, ಲಕ್ಷ್ಮೀ ಪಾಟೀಲ್, ವಿಜಯಲಕ್ಷ್ಮಿ, ಕರುಣಾಕ್ಷೀ, ಹಣಮಂತ್ರಾಯ, ಬಂದೇನವಾಜ, ಸಾಯಬಣ್ಣ, ನಟರಾಜ ಕುಲಕರ್ಣಿ, ರಷ್ಮೀ ಕುಲಕರ್ಣಿ, ಅನಿತಾ ರಾಠೋಡ, ದೇವಿಕಾ ಪೂಜಾರಿ, ಸವಿತಾ, ಭಾಗ್ಯ, ಶಿಲ್ಪಾ, ಝೇಬಾ, ಲಕ್ಷ್ಮೀ ಸೋನಾರ್, ರಾಜೇಂದ್ರ ಶಿವಾಚಾರ್ಯಮಠ, ಮಲ್ಕಮ್ಮ, ಶಿವಶರಣಯ್ಯ ಚತುರಾಚಾರಿಮಠ, ಲಕ್ಷ್ಮೀ ಶಹಾಬಾದ, ಪವಿತ್ರಾ ಸೇರಿದಂತೆ ಅನೇಕರು ಇದ್ದರು.