ಗುರುಗಳ ಆರಾಧನಾ ಮಹೋತ್ಸವ

ಬಳ್ಳಾರಿ ಏ 01 : ಇಲ್ಲಿನ ರೇಡಿಯೋ ಪಾಕ 9 ಬಳ್ಳಾರಿ ಯ ಪಂಚ ಬೃಂದಾವನ ಗಳಸನ್ನಿಧಾನದಲ್ಲಿ ಯತಿಗಳ ಪರಂಪರೆಯಲ್ಲಿ ಅತೀ ಶ್ರೇಷ್ಠ ಯತಿಗಳಾದ ಶ್ರಿವಾದಿರಾಜ ಗುರುಗಳ ಮತ್ತು ಶ್ರೀವ್ಯಾಸರಾಜ ಗುರುಗಳ ಆರಾಧನಾ ಮಹೋತ್ಸವ ನ್ನು ಎರಡು ದಿನಗಳ ಕಾಲ ಭಕ್ತಿ , ಸಡಗರದಿಂದ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ಆರಾಧನಾ ಅಂಗವಾಗಿ ಮಠದಲ್ಲಿ ಪಂಡಿತ್ ಕೃಷ್ಣಮೂರ್ತಿ ಆಚಾರ್ಯ ಇವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಶ್ರೀವಾದಿರಾಜ ಹಾಗೂ ಶ್ರೀವ್ಯಾಸರಾಯರ ಭಾವಚಿತ್ರಗಳನ್ನು ರಜತರಥದಲ್ಲಿ ಇರಿಸಿ ರಥೋತ್ಸವ ಜರುಗಿತು ವ್ಯಾಸರಾಜ ಭಜನಾ ಮಂಡಳಿ ಗಳಿಂದ ಕೋಲಾಟ , ಭಜನಾ ಕಾರ್ಯಕ್ರಮ ನಡೆಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು ಮಕ್ಕಳಿಂದ ವಾದಿರಾಜ ಗುರುಗಳ ಕುರಿತು ನೃತ್ಯರೂಪಕ ಪ್ರದರ್ಶನ ಕಾರ್ಯಕ್ರಮ ನಡೆಯಿತು. ನೆರೆದಿದ್ದ ಭಕ್ತರಿಗೆ ಮುದನೀಡಿತು ವಾದಿರಾಜ ಗುರುಗಳ ಹಾಗು ಶ್ರೀವ್ಯಾಸ ರಾಜರ ಕೃತಿಗಳನ್ನು ಸಾಮೂಹಿಕ ವಾಗಿ ಹಾಡುವುದರ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ಆರಾಧನಾ ಅಂಗವಾಗಿ ಬೆಳಿಗ್ಗೆ ಅಷ್ಟೋತ್ತರ, ಪಂಚಾಮೃತ ಅಭಿಷೇಕ ಕನಕಾಭಿಷೇಕ ಕಾರ್ಯಕ್ರಮ ಗಳು ನೇರವೇರಿದವು ಪಂಚಬೃಂದಾವನ ಗಳಿಗೆವಿವಿಧ ಫಲಪುಷ್ಪ ಗಳಿಂದ ಅಲಂಕಾರ ಮಾಡಲಾಗಿತ್ತು. ಮಠದ ಅಚ9ಕರಾದ ಶ್ರೀ ಪಾಂಡುರಂಗ ಆಚಾರ್ಯ ಪೂಜಾ ಕೈಕಂಯ9 ಗಳನ್ನು ನೇರವೇರಿಸಿದರು ನೂರಾರು ಭಕ್ತರು ಭಾಗವಹಿಸಿದ್ದರು. ಸಕಲಭಕ್ತಾಧಿಗಳಿಗೆ ತೀರ್ಥ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ಎಲ್ಲಾ ಕಾಯ9ಕ್ರಮಗಳು ಮಠದವ್ಯವಸ್ಥಾಪಕ ರಾದ ಶ್ರೀ ಅಶೋಕ್ ಕುಲಕರ್ಣಿ ಅವರ ಉಪಸ್ಥಿತಿಯಲ್ಲಿ ಜರುಗಿದವು. ವ್ಯಾಸರಾಜ ಭಜನಾ ಮಂಡಳಿ ಸದಸ್ಯರಾದ. ಎಂ. ವಿಜಯ ಲಕ್ಷ್ಮಿ ಕುಲಕಣಿ 9, ಚಂದ್ರಿಕಾ ಟೀಚರ್, ಕವಿತಾ, ಮೇಘ, ಶೃತಿ, ಪರಿಮಳ, ಶಶಿಕಲಾ ಸುಮ, ವಿಜಯಬಾಯಿ ಮುಕ್ತ ಇನ್ನೂ ಹಲವಾರು ಮಹಿಳಾ ಸದಸ್ಯರು ಕಾಯ 9 ಕ್ರಮದಲ್ಲಿ ಭಾಗವಹಿಸಿದ್ದರು.