ಗುರುಗಳು ಬಂದರು ಗುರುವಾರ ವಿಶೇಷ ಕಾರ್ಯಕ್ರಮ

ತಾಳಿಕೋಟೆ:ಜ.13: ಶಿಕ್ಷಣ ಇಲಾಖೆಯ ಆಶಯದಂತೆ ಹತ್ತನೆ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಮನೆಗೆ ಶಾಲೆಯ ಶಿಕ್ಷಕ ವರ್ಗವು ಅನಿರೀಕ್ಷಿತ ಬೇಟಿ ಕೊಡುವದರೊಂದಿಗೆ ವಿದ್ಯಾರ್ಥಿಗಳು ವಿದ್ಯಾರ್ಜನೆಯಲ್ಲಿ ತೊಡಗಿಕೊಂಡಿರುವ ಕುರಿತು ಪಟ್ಟಣದ ಶ್ರೀ ಸಂಗಮೇಶ್ವರ ಪ್ರೌಢ ಶಾಲೆಯ ಶಿಕ್ಷಕ ವೃಂದವು ಪರಿಶೀಲಿಸಿದರು.

   ಶ್ರೀ ಸಂಗಮೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಅಶೋಕ ಕಟ್ಟಿ, ಹಿರಿಯ ಶಿಕ್ಷಕ ಬಿ ಆಯ್ ಹಿರೇಹೊಳಿ, ಎಸ್.ವ್ಹಿ.ಜಾಮಗೊಂಡಿ, ದೈಹಿಕ ಶಿಕ್ಷಕ ಎಂ.ಎಸ್.ರಾಯಗೊಂಡ ಅವರು ಪಟ್ಟಣದಲ್ಲಿರುವ ಬಾಲಕರ ವಸತಿ ನಿಲಯಕ್ಕೆ ಬೆಟ್ಟಿ ನೀಡಿ ತಮ್ಮ ಶಾಲಾ ವಿದ್ಯಾರ್ಥಿಗಳ ಓದಿನ ಗಮನವನ್ನು ಪರಿಶೀಲಿಸಿದರಲ್ಲದೇ ವಸತಿ ನಿಲಯದ ಮೆಲ್ವಿಚಾರಕಿಯರಾದ ಎನ್.ವ್ಹಿ.ಕೋರಿ ಇವರ ಸಮ್ಮುಖದಲ್ಲಿ ಹತ್ತನೆ ವರ್ಗದ ವಿದ್ಯಾರ್ಥಿ ಗಳ ಪರೀಕ್ಷಾ ತಯಾರಿಯ ವೇಳಾಪಟ್ಟಿ ಮತ್ತು ಸುಲಭವಾಗಿ ಅಂಕಗಳನ್ನು ಗಳಿಸುವುದು ಹೇಗೆ ಎಂಬುವುದರ ಕುರಿತು ಸುಮಾರು ಒಂದು ಘಂಟೆಗಳ ಕಾಲ ಚರ್ಚಿಸಿದರು.