ಗುರುಗಳು ಜೀವನದ ಅವಿಭಾಜ್ಯ ಅಂಗ:ಬಸವಯ್ಯ ಶರಣರು

ಸೈದಾಪುರ:ಜು.16:ಅಜ್ಞಾನವನ್ನು ದೂರ ಮಾಡಿ ಉತ್ತಮ ದಾರಿ ತೋರಿಸುವ ಗುರುಗಳು ಜೀನವದ ಅವಿಭಾಜ್ಯ ಅಂಗವಾಗಿದ್ದಾರೆ ಎಂದು ಶಹಾಪುರ ಚರಬಸವೇಶ್ವರ ಸಂಸ್ಥಾನ ಮಠದ ಬಸವಯ್ಯ ಶರಣರು ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ಬಾಡಿಯಾಲ ಗ್ರಾಮದ ಮೂಲ ಮಠಕ್ಕೆ ಗುರು ಪುರ್ಣಿಮೆ ದಿನದಂದು ಭೇಟಿ ನೀಡಿದ ಸಂದರ್ಭದಲ್ಲಿ ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದು ಮಾತನಾಡಿದ ಅವರು, ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಲು ಎಲ್ಲ ಗುರುಗಳ ಶಿಷ್ಯರು ಈ ದಿನದಂದು ಗುರುಗಳ ಪಾದಪೂಜೆ ಮಾಡಿ ಅವಿರಿಗೆ ಗುರುದಕ್ಷಣೆ ಅರ್ಪಿಸುತ್ತಾರೆ. ನಾನು ಗದ್ದುಗೆ ಸಂಸ್ಥಾನದ ಕುಟಂಬ ವರ್ಗದವರಯ ಸೇರಿದಂತೆ ಚರಬಸವೇಶ್ವರ ಭಕ್ತರು ಸೇರಿ ಗುರುಗಳ ಸನ್ನಿದಾ£ದÀಲ್ಲಿ ಇರುವುದು ನಮಗೆ ಚೈತನ್ಯವನ್ನುಂಟು ಮಾಡಿದೆ. ತಮ್ಮ ಅನುಭವದ ಶಕ್ತಿಯಿಂದ ತಪ್ಪುಗಳನ್ನು ತಿದ್ದುವ ಗುರುಗಳ ಮಾರ್ಗದರ್ಶನದಿಂದ ನಾವು ಉತ್ತಮ ಬದಕನ್ನು ಕಂಡು ಕೊಳ್ಳಲು ಸಾಧ್ಯವಿದೆ. ಈ ದಿಸೆಯಲ್ಲಿ ಗುರುಗಳ ಮಹತ್ವ ಅತಿ ಹೆಚ್ಚಿನದ್ದಾಗಿದೆ. ವ್ಯಕ್ತಿತ್ವ ಪರಿಪೂರ್ಣಗೊಳ್ಳಲು ನಾವು ಗುರುಗಳ ಮಾರ್ಗದರ್ಶನದಲ್ಲಿ ಸಾಗಿದಾಗ ಮಾತ್ರ ಸಾಧನೆ ನಮ್ಮದಾಗುತ್ತದೆ ಎಂದು ಹೇಳಿದರು. ಬಾಡಿಯಾಲ ಮೂಲ ಮಠದ ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು, ಶಿವುಕುಮಾರ ಗದ್ದುಗೆ, ಶಹಾಪುರ ಚರಬಸವೇಶ್ವರ ಗದ್ದುಗೆ ಸಂಸ್ಥಾನ ಮಠದ ಭಕ್ತರು ಸೇರಿದಂತೆ ಇತರರಿದ್ದರು.
ಗುರುಪೂರ್ಣಿಮೆ ದಿನದಂದು ಗ್ರಾಮದ ಭಕ್ತಾಧಿಗಳು ಬಾಡಿಯಾಲ ಮೂಲ ಮಠದ ಚನ್ನವೀರ ಶಿವಾಚಾರ್ಯರಿಗೆ ತುಲಭಾರ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನಮ್ಮೆದಿ ದೊರೆಯುತ್ತಿದೆ. ನಾವು ಶ್ರೀಗಳ ಶಿಷ್ಯ ವರ್ಗಕ್ಕೆ ಸೇರಿದ್ದು ಪವಿತ್ರ ದಿನದಂದು ಅವರಿಂದ ಆಶಿರ್ವಾದ ಪಡೆಯುತ್ತಿರುವುದು ವಿಶೇಷತೆಯನ್ನುಂಟು ಮಾಡುವಂತಾಗಿದೆ. ಬಸವಯ್ಯ ಶರಣರು ಚರಬಸವೇಶ್ವರ ಗದ್ದುಗೆ ಶಹಾಪುರ