ಗುರುಕುಲದಲ್ಲಿ ಸಂಭ್ರಮದ ಎಳ್ಳ ಅಮಾವಾಸ್ಯೆ ಆಚರಣೆ

ಭಾಲ್ಕಿ:ಜ.12:ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಶಿಕ್ಷಣ ಸಮುಚ್ಛಯದಲ್ಲಿ ಗುರುವಾರ ಸಡಗರ, ಸಂಭ್ರಮದಿಂದ ಎಳ್ಳು ಅಮಾವಾಸ್ಯೆ, ಒಕ್ಕಲಿಗ ಮುದ್ದಣ್ಣ ಜಯಂತಿ ಆಚರಿಸಲಾಯಿತು.

ಎಳ್ಳ ಅಮಾವಾಸ್ಯೆ ನಿಮಿತ್ತ ಸಿದ್ಧಪಡಿಸಿದ ವಿಶೇಷ ಖಾದ್ಯಗಳಾದ ಭಜ್ಜಿ, ಹುಗ್ಗಿ, ಅಂಬಲಿ, ಚಟ್ನಿ ಸೇರಿದಂತೆ ಇತರ ರುಚಿಕಟ್ಟಾದ ಆಹಾರ ಪದಾರ್ಥಗಳನ್ನು ವಿದ್ಯಾರ್ಥಿಗಳು ಸಾಮೂಹಿಕವಾಗಿ ಕುಳಿತುಕೊಂಡು ಆನಂದಿಸಿದರು.

ಪ್ರಾಚಾರ್ಯ ಬಸವರಾಜ ಮೊಳಕೀರೆ, ವಸತಿ ಮೇಲ್ವಿಚಾರಕಿ ಜಯಕ್ಕಾ ಗಾಂವ್ಕರ್, ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ, ಮುಖ್ಯಶಿಕ್ಷಕರಾದ ಮಹೇಶ ಮಹಾರಾಜ್, ಮಹೇಶ ಕುಲಕರ್ಣಿ, ಎಸ್ಸೆಸ್ಸೆಲ್ಸಿ ಸಂಯೋಜಕ ಪ್ರವೀಣ ಖಂಡಾಳೆ, ಬಸವರಾಜ ಪ್ರಭಾ, ಲಕ್ಷ್ಮಣ ಮೇತ್ರೆ, ಪಂಡರಿನಾಥ ಪವಾರ್, ವಿರೇಶ ವಿವೇಕಿ, ಯಲ್ಲಾಲಿಂಗ ಝಳಕೆ ಸೇರಿದಂತೆ ಇತರರು ಇದ್ದರು.