ಗುರುಕಿರಣ ರಾಜ್ಯಮಟ್ಟಕ್ಕೆ ಆಯ್ಕೆ

ಇಂಡಿ:ಅ.22: ಕುಮಾರ ಗುರುಕಿರಣ ಝಳಕಿ 7ನೇ ವರ್ಗದ ವಿಧ್ಯಾರ್ಥಿ ಅಂಡರ್14 ಡಿ.ಡಿ.ಪಿಆಯ್ ಕ್ರಿಕೇಟ ಆಟದಲ್ಲಿ ತಾಲೂಕಾ ಹಂತದಲ್ಲಿ ಆಡಿ ಈಗ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಪಟ್ಟಣದ ಆಪಲ್ ಶಾಲೆಯ ವಿಧ್ಯಾರ್ಥಿಯಾದ ಗುರುಕಿರಣ ಕ್ರಿಕೇಟ ತರಬೇತಿ ನೀಡಿದ ತರಬೇತಿದಾರ ಹಾಗೂ ಆಪಲ್ ಶಾಲೆಯ ಆಡಳಿತಾಧಿಕಾರಿ ಚಿದಾನಂದ ಬಿರಾದಾರ ಮಗುವಿನ ಸಾಧನೆಗೆ ಹರ್ಷವ್ಯಕ್ತಪಡಿಸಿದ್ದಾರೆ. ವಿಧ್ಯಾರ್ಥಿ ರಾಜ್ಯಮಟ್ಟದವರೆಗೆ ಆಯ್ಕಯಾಗಿರುವ ಹಿನ್ನಲೆಯಲ್ಲಿ ಶಾಲೆಯ ಆಡಳಿತ ಮಂಡಳಿ ,ಸಿಬ್ಬಂದಿ ಅಲ್ಲದೆ ಮಗುವಿನ ತಾಯಿ ಶಿಕ್ಷಕಿ ಸರೋಜನಿ ಮಾವಿನಮರದ ಗುಲಬರ್ಗಾ ವಿಭಾಗ ಮಟ್ಟದ ಟೀಮ ಮ್ಯಾನೇಜರ್ ಸಂತೋಷ ಕೊಚಬಾಳ ಇವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲಿ ಎಂದು ಶುಭ ಹಾರೈಸಿದರು.