ಗುರುಕರುಣೆಯಿಂದ ಅಧ್ಯಾತ್ಮಿಕ ಪ್ರಗತಿ : ಘನಲಿಂಗರುದ್ರಮನಿ ಶ್ರೀ

ಭಾಲ್ಕಿ:ಎ.9: ಸದ್ಗುರುವಿನ ಕರುಣಿಯಾದಲ್ಲಿ ಜೀವನದ ಅಧ್ಯಾತ್ಮಿಕ ಪ್ರಗತಿ ಸಾಧ್ಯ ಎಂದು ಬಸವಕಲ್ಯಾಣದ ಅಭಿನವ ಘನಲಿಂಗ ರುದ್ರಮನಿ ಶಿವಾಚಾರ್ಯರು ಪ್ರತಿಪಾದಿಸಿದರು.

ತಾಲೂಕಿನ ಡೊಣಗಾಪೂರ ಗ್ರಾಮದ ಶ್ರೀ ಡೋಣೇಶ್ವರ ಮಂದಿರದಲ್ಲಿ ಶ್ರೀ ಡೋಣೇಶ್ವರ ಮಹಾಪೂಜಾ ಮಹೋತ್ಸವ ನಿಮಿತ್ಯ ಆಯೋಜಿಸಿದ್ದ ಜನ ಜಾಗೃತಿ ಧರ್ಮಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಡೋಣೇಶ್ವರ ಶಿವಾಚಾರ್ಯರು ಮಹಾ ತಪಸ್ವಿಯಾಗಿದ್ದರು. ಅವರು ಸಂಚೀಸಿದ ಎಲ್ಲಾ ಸ್ಥಳಗಳೂ ತೀರ್ಥ ಕ್ಷೇತ್ರಗಳಾಗಿವೆ. ಅಂತಹ ಗುರುವಿನ ಕರುಣೆ ನಮ್ಮ ಮೇಲಿದ್ದರೆ ನಮ್ಮ ಅಧ್ಯಾತ್ಮಿಕ ಪ್ರಗತಿಯಾಗುವುದು ಎಂದು ಹೇಳಿದರು.

ಕಟ್ಟಿಮನಿ ಹಿರೇಮಠ ಸಂಸ್ಥಾನ ಮೆಹಕರನ ಶ್ರೀ ರಾಜೇಶ್ವರ ಶಿವಾಚಾರ್ಯರು ಸಾನಿಧ್ಯವಹಿಸಿ ಮಾತನಾಡಿದರು. ಹಲಬರ್ಗಾದ ಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯರು ಹೇಮರೆಡ್ಡಿ ಮಲ್ಲಮ್ಮ ಪುರಾಣ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಧನರಾಜ ನೀಲಂಗೆ, ವಿಜಯಕುಮಾರ ಗೌಡಗಾವೆ, ಶಿವಕುಮಾರ ಕಾಂಜೋಳಗೆ ಗುರು ಮಹತ್ವದ ಬಗ್ಗೆ ಮಾತನಾಡಿದರು. ಇದೇವೇಳೆ ಶಂಕರಪಾಟೀಲ ವಾಂಜರಖೇಡ, ಅನೀಲ ವೀರಭದ್ರಪ್ಪ ಮುಳೆಯವರಿಗೆ ಗುರುರಕ್ಷೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶಿವರಾಜ ಪಆಟೀಲ, ಮನ್ಮಥಪ್ಪ ಬಂಬುಳಗೆ, ಪ್ರೇಮನಾಥ ಕುಂಚಗೆ, ಸಂಗಪ್ಪಾ ಬಂಬುಳಗೆ, ಉದಯಕುಮಾರ ಕಲ್ಯಾಣೆ, ಚಂದ್ರಕಾಂತ ಕಡ್ಯಾಳೆ, ಬಾಬುರಾವ ವಿರಶೆಟ್ಟೆ, ಕಾಶೇಪ್ಪ ವಿರಶೆಟ್ಟೆ ಉಪಸ್ಥಿತರಿದ್ದರು.