ಗುರಿ ತಲುಪಲು ಉತ್ತಮ ತರಬೇತಿ ಅವಶ್ಯಕ

ಶಿವಮೊಗ್ಗ.ಮಾ.14: ಜೀವನದಲ್ಲಿ ಗುರಿ ತಲುಪಬೇಕಾದರೆ ಉತ್ತಮ ತಯಾರಿ, ನಿರಂತರ ಪರಿಶ್ರಮ ಹಾಗೂ ಸೂಕ್ತ ತರಬೇತಿಯ ಅವಶ್ಯಕತೆ ಇರುತ್ತದೆ. ಪರಿಣಾಮಕಾರಿಯಾಗಿ ಕೆಲಸ ಮಾಡುವ ಕೌಶಲ್ಯ ಹೊಂದಬೇಕು ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ಎಂ.ಜಿ.ರಾಮಚಂದ್ರಮೂರ್ತಿ ಹೇಳಿದರು.ಶಿವಮೊಗ್ಗ ನಗರದ ರೋಟರಿ ಬ್ಲಡ್ ಬ್ಯಾಂಕ್‌ನ ಮಿಡ್‌ಟೌನ್ ಸಭಾಂಗಣದಲ್ಲಿ ನಿಯೋಜಿತ ಅಧ್ಯಕ್ಷರು, ಕಾರ್ಯದರ್ಶಿಗಳಿಗೆ ಆಯೋಜಿಸಿದ್ದ ವಲಯ ಮಟ್ಟದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಂಘ ಸಂಸ್ಥೆಗಳ ನಿರ್ವಹಣೆ ಮಾಡಲು ಸೂಕ್ತ ತರಬೇತಿ ಹಾಗೂ ಅಗತ್ಯ ತಯಾರಿ ಮುಖ್ಯ. ಅಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿ ನಿಯೋಜಿತರಾದವರು ಹಿರಿಯರಿಂದ ಮಾರ್ಗದರ್ಶನ ಪಡೆದುಕೊಳ್ಳಬೇಕು. ಜವಾಬ್ದಾರಿ ವಹಿಸಿಕೊಂಡ ಅವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಲು ಸಿದ್ಧತೆ ನಡೆಸಬೇಕು ಎಂದು ಸಲಹೆ ನೀಡಿದರು.ಜಿಲ್ಲಾ ಮಾಜಿ ಗವರ್ನರ್ ಪ್ರೊ. ಎ.ಎಸ್.ಚಂದ್ರಶೇಖರ್ ರೋಟರಿ ಸಂಸ್ಥೆ ನಡೆದು ಬಂದ ದಾರಿ,  ಸಮಾಜಮುಖಿ ಸೇವೆ ಹಾಗೂ ಯಾವ ಯಾವ ಕ್ಷೇತ್ರಗಳಲ್ಲಿ ರೋಟರಿ ಸೇವೆ ಸಲ್ಲಿಸುತ್ತಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಮಾಜಿ ಗವರ್ನರ್ ಜಿ.ಎನ್.ಪ್ರಕಾಶ್, ಡಾ. ಪಿ.ನಾರಾಯಣ್ ಅವರು ರೋಟರಿ ಸದಸ್ಯರ ಪಾತ್ರ, ರೋಟರಿ ದತ್ತಿ ನಿಧಿ ಹಾಗೂ ರೋಟರಿ ಸಂಸ್ಥೆಗಳ ಕಾರ್ಯವೈಖರಿ ಕುರಿತು ಮಾಹಿತಿ ನೀಡಿದರು.ವಲಯ 10ರ ನಿಯೋಜಿತ ಸಹಾಯಕ ಗವರ್ನರ್ ರಾಜೇಂದ್ರ ಪ್ರಸಾದ್ ಎಂ.ಆರ್., ಕಾರ್ಯಕ್ರಮದ ಉದ್ದೇಶ ಹಾಗೂ ನಿರೂಪಣೆ ನಡೆಸಿಕೊಟ್ಟರು. ವಲಯ 11ರ ನಿಯೋಜಿತ ಸಹಾಯಕ ಗವರ್ನರ್ ರವಿ ಕೊಟೋಜಿ, ಅಧ್ಯಕ್ಷರು, ಕಾರ್ಯದರ್ಶಿಗಳ ಜವಾಬ್ದಾರಿ ಹಾಗೂ ಜಿಲ್ಲಾ ಡೈರೆಕ್ಟರಿ ಬಗ್ಗೆ ಮಾಹಿತಿ ನೀಡಿದರು.ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ವಲಯ ತರಬೇತುದಾರರಾದ ಎಂ.ಪಿ.ಆನಂದಮೂರ್ತಿ, ಡಾ. ಗುಡದಪ್ಪ ಕಸಬಿ, ವಲಯ ಸೇನಾನಿ ಎಚ್.ಎಸ್.ಮೋಹನ್, ಸಿ.ಎನ್.ಮಲ್ಲೇಶ್, ಧಮೇಂದ್ರ ಸಿಂಗ್, ಕೆ.ಟಿ.ಚಂದ್ರಪ್ಪ, ಮಹೇಶ್ ಅಂಕದ್, ಎಲ್ಲ ರೋಟರಿ ಕ್ಲಬ್‌ಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು