ಗುರಿ ಇರಬೇಕು, ಹಿಂದೆ  ಗುರು ಇರಬೇಕು – ಎ ಬಿ ಚಂದ್ರಚೆಖರ್.*

ದಾವಣಗೆರೆ.ಜು. 5: ಏಳಿ ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ ಎಂಬ ಸ್ವಾಮಿ ವಿವೇಕಾನಂದರ ವಾಣಿಯು ನಮ್ಮನ್ನು ಗುರಿ ತಲುಪಿಸುವಂತೆ ಪ್ರೆರೇಪಿಸುತ್ತದೆ. ನಾವು ಗುರಿ ಸಾಧಿಸುವಲ್ಲಿ ನಮಗೆ ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ಎಂದು ದಾವಣಗೆರೆಯ ನಿವೃತ್ತ ಅಧ್ಯಾಪಕ ಎ ಬಿ ಚಂದ್ರಶೇಖರ್  ತಿಳಿಸಿದರು. ಕುರ್ಕಿ ಸರ್ಕಾರಿ ಪ್ರೌಢಶಾಲೆ ಯಲ್ಲಿ  ಹಮ್ಮಿಕೊಂಡಿದ್ದ ಪ್ರೇರಣಾ ತರಬೇತಿ ತರಗತಿಯಲ್ಲಿ ಮಕ್ಕಳನ್ನುದ್ದೇಶಿಸಿ ಮಾತನಾಡಿದರು.ಮುಂದುವರೆದು ಮಾತನಾಡುತ್ತಾ ಶ್ರದ್ಧೆ, ಏಕಾಗ್ರತೆ, ಶ್ರಮ, ನಿಸ್ವಾರ್ಥತೆ, ಸಹನೆ,ಜ್ಞಾನ, ವಿಧ್ಯೆ,ಮನಸ್ಸು ನಿಷ್ಠೆ ಈ ಎಲ್ಲಾ ಗುಣಗಳು ವಿದ್ಯಾರ್ಥಿಗಳಲ್ಲಿರಬೇಕು.ಜ್ಞಾನವೆಂದರೆ ನಮ್ಮಲ್ಲಿರುವ ಸಾಮಾನ್ಯ ತಿಳುವಳಿಕೆ, ವಿಧ್ಯೆ ಎಂದರೆ ಪುಸ್ತಕದಲ್ಲಿರುವ ಮತ್ತು ಸಮೂಹದೊಂದಿಗೆ ವಿಷಯಗಳನ್ನು ಅರಿಯುವುದು.ಹಾಗಾಗಿ ಜ್ಞಾನಕ್ಕೂ ವಿಧ್ಯೆಗೂ ವ್ಯತ್ಯಾಸವಿದೆ ಎಂದು ತಿಳಿಸಿದರು.ಸಾಧನೆ ಮಾಡಲು ಮೊದಲು ನಮ್ಮ ಮೇಲೆ ನಮಗೆ ನಂಬಿಕೆ ವಿಶ್ವಾಸ ಇರಬೇಕು.ಇದರೊಂದಿಗೆ ಸಾಧನೆ ಮಾಡಬೇಕೆಂಬ ಹಠ ಛಲ ಇರಬೇಕು.ಇವು ಇದ್ದರೆ ಯಾವುದೂ ಕಷ್ಟವಲ್ಲ.ಕಾಲಿಲ್ಲದ ಬಚೆಂದ್ರ ಪಾಲ್ ಎಂಬ ಯುವಕಿ ಹಿಮಾಲಯ ಪರ್ವತವನ್ನು ಏರಿದ್ದನ್ನು ಉದಾಹರಿಸಿದರು.ಹಾಗೆಯೇ ಬಹಳ ಕೆಳಹಂತದಿಂದ ಹಠ ಛಲದಿಂದ ಅತ್ಯುನ್ನತ ಹುದ್ದೆಗೆರೀರುವುದನ್ನು ಪರಿಚಯಿಸುತ್ತಾ ಸಾಧನೆ ಮಾಡಬೇಕೆಂಬ ಹಠ ಛಲವೊಂದಿದ್ದರೆ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಮಕ್ಕಳನ್ನು ಪ್ರೆರೇಪಿಸಿದರುಈ ಕಾರ್ಯಕ್ರಮದಲ್ಲಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸಿ ಜಿ ಜಗದೀಶ್ ಕೂಲಂಬಿ ಸಂಪನ್ಮೂಲ ವ್ಯಕ್ತಿ ಎ ಬಿ ಚಂದ್ರಶೇಖರ್ ರವರನ್ನು ಮಕ್ಕಳಿಗೆ ಪರಿಚಯಿಸಿ ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ಉಪಸಿತರಿದ್ದ ಕನ್ನಡ ಭಾಷಾ ಶಿಕ್ಷಕಿ ಮಾತನಾಡಿದರು. ವೇದಿಕೆಯಲ್ಲಿ ಶಾಲೆಯ ವಿಜ್ಞಾನ ಶಿಕ್ಷಕರಾದ ಹೆಚ್ ವಿರುಪಾಕ್ಷಿ ಉಪಸ್ಥಿತರಿದ್ದರು. ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಎಸ್ ಶಾಂತಕುಮಾರಿ,ಎಸ್ ಎಂ ಶಕುಂತಲಾ, ಶಿಕ್ಷಕ ಹೆಚ್ ಆರ್ ಪ್ರಕಾಶ್,   ದೈಹಿಕ ಶಿಕ್ಷಕ ಎ ಆರ್ ರಾಘವೇಂದ್ರ  ಹಾಗೂ ಎಂ ಎನ್ ನಾಗರಾಜ್ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳೊಂದಿಗೆ ಭಾಗವಹಿಸಿದ್ದರು.