ಗುರಿ ಇದ್ದರೆ ಮಾತ್ರ ಸಾಧನೆ ಸಾಧ್ಯ

ಸಂಜೆವಾಣಿ ವಾರ್ತೆ

ದಾವಣಗೆರೆ.ಫೆ.29; ಗುರಿ ಇಟ್ಟುಕೊಂಡರೆ ಮಾತ್ರ ವಿದ್ಯಾರ್ಥಿಗಳು ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದು ಆದಾಯ ಮತ್ತು ತೆರಿಗೆ ಇಲಾಖೆಯ ಉಪ ಆಯುಕ್ತರಾದ ಮಂಜುನಾಥ್ ಹೆಚ್.ಎಸ್, ಅಭಿಪ್ರಾಯ ಪಟ್ಟರು.ಅವರು ಶ್ರೀ ಬಕ್ಕೇಶ್ವರ ವಿದ್ಯಾಸಂಸ್ಥೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ಶಿಬಿರದಲ್ಲಿ ತಿಳಿಸಿದರು ಈ ಸಮಯದಲ್ಲಿ ನಿಮ್ಮ ಗುರಿ,ಸಾಧನೆ ಮಾಡುವ ಹಾಗೂ ಸಾಮರ್ಥ್ಯ ತೋರಿಸುವ ಅವಕಾಶ ಈ ಪರೀಕ್ಷೆ ಎಂದು ಹೇಳಿದರು.ಮಹಾಪೋಷಕರಾದ ಶಿವನಹಳ್ಳಿ ರಮೇಶ್  ಮಾತನಾಡುತ್ತಾ ಮನೆಯಲ್ಲಿ ಪಾಲಕರು ನಿಮ್ಮನ್ನು ಕಷ್ಟ ಪಟ್ಟು ನಿಮ್ಮನ್ನು ಶಾಲೆಗೆ ಕಳುಹಿಸಿ ಒಳ್ಳೆಯ ಶಿಕ್ಷಣವನ್ನು ನೀಡಲು ಸಹಕರಿಸಿರುತ್ತಾರೆ ಆ ದೃಷ್ಟಿಯಿಂದ ಆಸಕ್ತಿಯಿಂದ ಓದಿ ಪರೀಕ್ಷೆ ಯನ್ನು ಎದುರಿಸಿ, ಸ್ವಾಮಿ ವಿವೇಕಾನಂದರು ಹೇಳಿದ ಹಾಗೇ ನಿಮ್ಮ ಗುರಿ ಮುಟ್ಟುವ ತನಕ ಹಿಂದೆ ತಿರುಗದೆ ಶಾಲೆಗೆ, ನಿಮ್ಮ ಪಾಲಕರಿಗೆ ಹಾಗೂ ನಾಡಿಗೆ ಕೀರ್ತಿ ತರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ಉಪನ್ಯಾಸಕರಾಗಿ ಆಗಮಿಸಿದ್ದ ನಿವೃತ್ತ ಕ್ಷೇತ್ರ ಶಿಕ್ಷಣಧಿಕಾರಿಗಳಾದಪ್ರಕಾಶ್ ಬುಸ್ನೂರು,  ಮಾತನಾಡುತ್ತಾ ಪರೀಕ್ಷೆ ಎಂಬುದು ಒಂದು ಮೆಟ್ಟಿಲುಗಳು ಇದ್ದ ಹಾಗೇ ಸಾಧನೆ ಮಾಡಿ, ನಿಮ್ಮ ಗುರಿಯನ್ನು ಮುಟ್ಟಿ ಎಂದರು ಹಾಗೂ ಮಕ್ಕಳಿಂದ ಪ್ರತಿಜ್ಞಾವಿಧಿಯನ್ನು ಹೇಳಿಸಿದರು ಮತ್ತು ಪ್ರಶ್ನೆ ಪತ್ರಿಕೆ ಬಗ್ಗೆ ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಕ್ಕಳ ಸಾಹಿತ್ಯ ಪರಿಷತ್ ದಕ್ಷಿಣ ವಿಭಾಗದ ಡಾ. ರವಿಕುಮಾರ್ ಎ.ಜೆ ಮಾತನಾಡುತ್ತಾ ನಮ್ಮ ಬುದ್ದಿ ಶಕ್ತಿ ಮನಸ್ಸು ನಮ್ಮ ಕೈಲಿ ಇರುತ್ತದೆ, ವಿದ್ಯಾರ್ಥಿಗಳು ಇನ್ನೂ ಪರೀಕ್ಷೆಗೆ 30 ದಿನಗಳು ಉಳಿದಿದ್ದು ಮನಸ್ಸು ಮಾಡಿದರೆ ಏನನ್ನಾದರೂ ಸಾಧನೆ ಮಾಡಬಹುದು  ಚೆನ್ನಾಗಿ ಓದಿ ಒಳ್ಳೆಯ ಅಂಕಗಳನ್ನು ಪಡೆದುಕೊಂಡು ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತನ್ನಿ ಎಂದರು ವೇದಿಕೆಯಲ್ಲಿ ಮಾರುತಿ ಶಾಲೆಯ ಶ್ರೀನಿವಾಸ್, ವಾಣಿಜ್ಯ ಅಧಿಕಾರಿ  ಪ್ರವೀಣ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗದಿಗೇಶ್, ಶಾಲೆಯ ಮುಖ್ಯ ಶಿಕ್ಷಕರಾದ  ಸಿದ್ದಲಿಂಗ ಸ್ವಾಮಿ,ಶಿಕ್ಷಕರಾದ  ಬಿರಾದಾರ್, ರಾಮಪ್ಪ, ಗಿರೀಶ್, ರಮೇಶ್, ಮಧುಸೂದನ್,ಶ್ರೀಮತಿ ಛಾಯಾದೇವಿ, ಶಂಭು ಮತ್ತು ಲಕ್ಕೇಶ್ ಇದ್ದರು ಹಾಗೂ ಪ್ರಾರ್ಥನೆಯನ್ನು ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟರೆ ಸ್ವಾಗತವನ್ನು ಶಿಕ್ಷಕರಾದ ಮಲ್ಲಿಕಾರ್ಜುನ ಮತ್ತು ನಿರೂಪಣೆ ಯನ್ನು ಶ್ರೀಮತಿ ಅನುರಾಧ ನಡೆಸಿಕೊಟ್ಟರು.