ಗುರಿಯ ಸಾಧನೆಗಾಗಿ ನಿರಂತರ ಹೋರಾಟ ನಡೆಸಬೇಕು

ಸಂಜೆವಾಣಿ ವಾರ್ತೆ

ದಾವಣಗೆರೆ.ಆ.22: ಕನ್ನಡ ಪರ ಒಳಗೊಂಡಂತೆ ಇತರೆ ಸಂಘಟನೆಗಳ ಹೋರಾಟಗಾರರು ಕೇಸ್, ಜೈಲು ಯಾವುದಕ್ಕೂ ಹಿಂದೆ ಸರಿಯದೆ ಗುರಿಯ ಸಾಧನೆಗಾಗಿ ನಿರಂತರ ಹೋರಾಟ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸಲಹೆ ನೀಡಿದರು. ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ. ನಾರಾಯಣಗೌಡ ಬಣ) ಜಿಲ್ಲಾ ಗುರುಭವನದಲ್ಲಿ ೨೦೨೨ -೨೩ನೇ ಸಾಲಿನ ಎಸ್ಸೆಸ್ಸೆಲ್ಸಿ ಕನ್ನಡ ವಿಷಯದಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಜ್ಞಾನಕಾಶಿ ಪ್ರಶಸ್ತಿ, ನೂತನ ಶಾಸಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಹೋರಾಟಗಾರರು ಯಾವಾಗಲೂ ನಮಗೆ ಏನಾಗಬೇಕು ಎಂಬುದರ ಬಗ್ಗೆಯೇ ಗಮನ ನೀಡಿ ಹೋರಾಟವನ್ನ ಮುಂದುವರೆಸ ಬೇಕು ಎಂದು ತಿಳಿಸಿದರು.ಹೋರಾಟ ಮಾಡಿದರೆ ಅವರು ಒಳಗೆ ಹಾಕುತ್ತಾರೆ. ಇವರು ಕೇಸ್ ಹಾಕುತ್ತಾರೆ ಎಂದು ಮನೆಯಲ್ಲೇ ಕುಳಿತರೆ ಬಂಡವಾಳಶಾಹಿಗಳು, ಅಽಕಾರಿಗಳು ಬೇಕಾದ ಕೆಲಸ ಮಾಡಿಕೊಳ್ಳಲಾರಂಭಿಸುತ್ತಾರೆ. ಅದು ಯಾವುದನ್ನೂ ಗಮನದಲ್ಲಿಟ್ಟುಕೊಳ್ಳದೆ ಹೋರಾಟ ನಡೆಸುವಂತಾಗಬೇಕು. ಆ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬಹಳ ವರ್ಷದಿಂದ ಕನ್ನಡ ಪರ ಹೋರಾಟ ನಡೆಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.ಎಸ್ಸೆಸ್ಸೆಲ್ಸಿ ಕನ್ನಡ ವಿಷಯದಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಜ್ಞಾನಕಾಶಿ ಪ್ರಶಸ್ತಿ ನೀಡುತ್ತಿರುವುದು ಸಂತೋಷದ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು.ಮಾಜಿ ಮುಖ್ಯಮಂತ್ರಿ ದೇವರಾಜ ಅರಸುರವರು ಅನೇಕ ಕೆಲಸ, ಕಾರ್ಯ, ಬಡವರ ಪರ ಯೋಜನೆಗಳ ಜಾರಿ ತರುವ ಮೂಲಕ ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದಾರೆ. ಊಳುವವನೆ ಒಡೆಯ ಕಾಯ್ದೆ, ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ವಿದ್ಯಾರ್ಥಿ ವೇತನ ಒಳಗೊಂಡಂತೆ ಅನೇಕ ಕೆಲಸ ಮಾಡಿದ್ದಾರೆ ಎಂದು ಸ್ಮರಿಸಿದರು.ಮಾಜಿ ಪ್ರಧಾನಿ ರಾಜೀವ್‌ಗಾಂಽಯವರು ಸಹ ಸಾಕಷ್ಟು ಕೆಲಸ ಮಾಡಿದವರು. ಅರಸು ಮತ್ತು ರಾಜೀವ್ ಗಾಂಽ ಅವರ ಹಾದಿಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಗುತ್ತಿದ್ದಾರೆ. ಸರ್ಕಾರದ ಅನೇಕ ಜನ, ಬಡವರ ಪರ ಯೋಜನೆ, ಕೆಲಸಗಳನ್ನ ಸಂಘಟನೆಗಳು ಬಡವರ ಮನೆಗೆ ಮುಟ್ಟಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.ಜಿಲ್ಲಾ ಅಧ್ಯಕ್ಷ ಎಂ.ಎಸ್. ರಾಮೇಗೌಡ ಮಾತನಾಡಿ, ಕನ್ನಡದ ಪರ ಹೋರಾಟ ಮಾಡುವಂತಹ ಅನೇಕರ ವಿರುದ್ಧ ದಾಖಲಾಗಿರುವ ಮೊಕದ್ದಮೆ ಹಿಂಪಡೆಯುವುದಾಗಿ ಸರ್ಕಾರ ಹೇಳಿದೆ. ಆದರೆ, ಅದು ಆದೇಶದ ರೂಪದಲ್ಲಿ ಹೊರ ಬಂದಿಲ್ಲದಿರುವ ಬಗ್ಗೆ ಸಚಿವರು ಗಮನ ಹರಿಸಬೇಕು ಎಂದು ಮನವಿ ಮಾಡಿದರು.ಇತಿಹಾಸ ತಜ್ಞ ಎ.ಎಸ್. ಧರ್ಮೇಂದ್ರಕುಮಾರ್ ಅರೇನಹಳ್ಳಿ ಮಾತನಾಡಿ, ಮೈಸೂರು ಮಹಾರಾಜರ ಕಾಲದಲ್ಲಿ ಮೊಟ್ಟ ಮೊದಲ ಬಾರಿಗೆ ಲಸಿಕೆ, ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸೆ, ಪ್ರಜಾಪ್ರತಿನಿಽ ಸಭೆ ನಡೆದಿವೆ ಎಂದು ತಿಳಿಸಿದರು.ಮಹಾನಗರ ಪಾಲಿಕೆ ಸದಸ್ಯರಾದ ಎ. ನಾಗರಾಜ್, ಕೆ. ಚಮನ್‌ಸಾಬ್, ಪಾಮೇನಹಳ್ಳಿ ನಾಗರಾಜ್, ಮಾಜಿ ಸದಸ್ಯ ದಿನೇಶ್ ಕೆ. ಶೆಟ್ಟಿ, ಅಯೂಬ್ ಪೈಲ್ವಾನ್, ಬಿ. ಕರಿಬಸಪ್ಪ, ಮಾಗಾನಹಳ್ಳಿ ಪರಶುರಾಮ್, ವೇದಿಕೆ ಗೌರವಾ ಧ್ಯಕ್ಷ ಎನ್. ವಾಸುದೇವರಾಯ್ಕರ್, ಬಸಮ್ಮ ಇತರರು ಇದ್ದರು. ಜೀವಿತಾ ಪ್ರಾರ್ಥಿಸಿದರು. ಜಗನ್ನಾಥ್ ನಾಡಿಗೇರ್ ನಿರೂಪಿಸಿದರು. ತಪೋವನ ಸಮೂಹ ಸಂಸ್ಥೆ ಅಧ್ಯಕ್ಷ ಡಾ|.ಶಶಿಕುಮಾರ್ ಮೆಹರ್‍ವಾಡೆ ಅವರಿಗೆ ಪರಿಸರ ರತ್ನ… ಪ್ರಶಸ್ತಿ, ಎಸ್ಸೆಸ್ಸೆಲ್ಸಿ ಕನ್ನಡ ವಿಷಯದಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜ್ಞಾನಕಾಶಿ ಪ್ರಶಸ್ತಿ ಪ್ರದಾನ ಮಾಡಲಾಯಿತು.