ಗುರಿಯತ್ತ ಗಮನವಿರಲಿ : ರೇಷ್ಮಾ ಕೌರ್

ಬೀದರ:ಎ.17:ನಗರದ ಪ್ರತಿಷ್ಠಿತ ಗುರು ನಾನಕ ದೇವ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿಯರಿಂಗ್ ವಿಭಾಗದ ಎಂ.ಡಿ. ಹುಜೈಫಾ ಖುರೇಷಿ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 20 ನೇ ವಾರ್ಷಿಕ ಸಮಾವೇಶದಲ್ಲಿ ಗೋಲ್ಡ್ ಮೆಡಲ್ ಪಡೆದ ವಿದ್ಯಾರ್ಥಿಗೆ ಜಿಎನ್‍ಡಿ ಕಾಲೇಜಿನಲ್ಲಿ ರೇಷ್ಮಾ ಕೌರ ಅವರು ಆತ್ಮೀಯವಾಗಿ ಸನ್ಮಾನಿಸಿ ಶುಭಹಾರೈಸಿದರು.

ಜೀವನದಲ್ಲಿ ಯಾವುದೇ ಕ್ಷೇತ್ರದಲ್ಲಾಗಲಿ, ಯಶಸ್ಸು ದೊರೆಯಬೇಕೆಂದರೆ ಸದಾಕಾಲ ಗುರಿಯತ್ತ ಗಮನವಿರಬೇಕು. ಆದರೆ ಬಹಳಷ್ಟು ಸಂದರ್ಭದಲ್ಲಿ ಹಾಕಿಕೊಂಡ ಗುರಿಯುತ್ತ ಗಮನ ಕೇಂದ್ರಿಕರಿಸದೆ ವಿಚಲಿತರಾಗುವುದುರಿಂದ ಅಂದುಕೊಂಡಿದ್ದನ್ನು ಸಾಧಿಸುವುದರಲ್ಲಿ ಎಡವುತ್ತೇವೆ ಜಯ-ಅಪಜಯ ಎಂಬುದು ನಾವು ಗುರಿಯನ್ನು ಹೇಗೆ ಕೇಂದ್ರಿಕರಿಸುತ್ತೇವೆ ಎಂಬುದನ್ನೇ ಅವಲಂಬಿಸಿರುತ್ತದೆ ಎಂದು ಹೇಳಿದರು. ಜೀವನದಲ್ಲಿ ಶಿಕ್ಷಣದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಗುರಿ ಇಟ್ಟುಕೊಳ್ಳಬೇಕು. ಅದನ್ನು ನನಸಾಗಿಸಿಕೊಳ್ಳಲು ನಿರಂತರ ಪ್ರಯತ್ನಿಸಬೇಕು ಎಂದು ಗುರುನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್ ಹೇಳಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿಯೂ ಸಾಮಥ್ರ್ಯ ಇರುತ್ತದೆ. ಅದಕ್ಕೆ ಪೂರಕವಾದ ವಾತಾವರಣ ನಿರ್ಮಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು ಒಳ್ಳೆಯ ಬದುಕಿನತ್ತ ಹೆಜ್ಜೆ ಇಡಬೇಕು. ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಇದರಿಂದ ಜೀವನದ ಗುರಿ ಸಾಧಿಸುವುದು ಸುಲಭವಾಗುತ್ತದೆ ಎಂದರು. ವಿದ್ಯಾರ್ಥಿಗಳು ಯಾವುದೇ ಕ್ಷೇತ್ರದಲ್ಲಿ ಪ್ರಯತ್ನಿಸುವ ಮೊದಲೇ ಸೋಲನ್ನು ಒಪ್ಪಿಕೊಳ್ಳಬಾರದು, ಸತತ ಪ್ರಯತ್ನ ಮಾಡಿದ್ದರಿಂದ ನೀವು ನಿಮ್ಮ ಗುರಿಯನ್ನು ಸಾಧಿಸಬಹುದು ಎಂದರು.

ಅದೇ ರೀತಿ ಮುಂದು ವರೆದು ಮಾತನಾಡುತ್ತ ಜಿಲ್ಲೆಯಲ್ಲಿ ಕರೋನಾ ಎರಡನೇ ಅಲೆ ಜೋರಾಗಿ ಹರಡುತ್ತಿದೆ. ಸರಕಾರದ ಮಾರ್ಗಸೂಚಿಯಂತೆ ಕಟ್ಟುನಿಟ್ಟಿನ ಪಾಲನೆ ಮಾಡಬೇಕು, ಸೋಶಿಯಲ್ ಡಿಸ್ಟನ್‍ಸಿಂಗ್ ಇರಬೇಕು, ಮಾಸ್ಕ್ ಕಡ್ಡಾಯವಾಗಿ ಧರಸಿಬೇಕು, ಬೇರೆಯವರಿಗೂ ಕೂಡಾ ಮಾಸ್ಕ್ ಹಾಕಲಾರದ ವ್ಯಕ್ತಿಗಳಿಗೆ ಮಾಸ್ಕ ಹಾಕಿಕೊಳ್ಳಲು ಹೇಳಿ ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.

ಈ ಸಂದರ್ಭದಲ್ಲಿ ಕಾಲೇಜಿನ ನಿರ್ದೇಶಕರಾದ ಕರ್ನಲ್ ಬಿ.ಎಸ್. ಧಲಿವಾಲ, ಪ್ರಾಂಶುಪಾಲರಾದ ಡಾ. ರವಿಂದ್ರ ಎಕಲಾರಕರ್, ವಿಭಾಗ ಮುಖ್ಯಸ್ಥ ಡಾ. ವಿ.ಬಿ.ಕೋರಿ, ಡಾ. ಜ್ಯೋತಿ ಐನಾಪೂರೆ, ಅಮರ ಸಿಂಗ್ ಮತ್ತು ಗೋಲ್ಡ್ ಮೆಡಲಿಸ್ಟ್ ಹಫೀಸ್ ಖುರೇಷಿಯ ತಂದೆ ಉಪಸ್ಥಿತರಿದ್ದರು.