ಗುರಂಪಳ್ಳಿ: ಕಳಪೆ ಕಾಮಗಾರಿ ತನಿಖೆಗೆ ಯಾಕಾಪೂರ ಆಗ್ರಹ

ಚಿಂಚೋಳಿ,ನ.25- ತಾಲೂಕಿನ ಗುರಂಪಳ್ಳಿ ಗ್ರಾಮದಲ್ಲಿ ಕೈಗೆತ್ತಿಕೊಂಡ ಪಂಚಾಯತ್ ರಾಜ್ ಇಲಾಖೆಯ ಗ್ರಾಮ ವಿಕಾಸ್ ಯೋಜನೆಯಡಿ ನಿರ್ಮಿಸಲಾದ ಸಿ ಸಿ ರಸ್ತೆ ಮತ್ತು ಚರಂಡಿ ಕಾಮಗಾರಿಯಲ್ಲಿ ಕಪ್ಪು ಮಿಶ್ರಿತ ಮರಳು ಬಳಕೆ ಮಾಡಿ ಸಂಪೂರ್ಣ ಕಳಪೆ ಮಟ್ಟದಾಗಿದೆ ಎಂದು ಜೆಡಿಎಸ್ ಮುಖಂಡರಾದ ಸಂಜೀವನ್ ಯಾಕಾಪೂರ್ ಅವರು ಆರೋಪಿಸಿದ್ದಾರೆ.
ಈ ಕಾಮಗಾರಿಯ ಅಂದಾಜು ಪಟ್ಟಿಯಂತೆ ಕಾಮಗಾರಿಗಳಿಗೆ ಬಳಸಬೇಕಾದ ಸಮಗ್ರಿಗಳು ಬಳಸಲಾಗಿಲ್ಲ. ಅಲ್ಲದೇ ಶಾಸಕರ ಮತ್ತು ಅಧಿಕಾರಿಗಳ ಮತ್ತು ಶಾಸಕರ ಹಿಂಬಾಲಕರಿಗೆ ಗುತ್ತಿಗೆ ನೀಡಿರುವುದರಿಂದ ಅವರ ಬೇಜವಾಬ್ದಾರಿತನದಿಂದ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಸಂಭಂದಪಟ್ಟ ಇಲಾಖೆಯವರು ಸೂಕ್ತವಾದ ಕ್ರಮ ಜರುಗಿಸಬೇಕು ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು ಯಾವುದೇ ತರಹದ ಈ ಕಾಮಗಾರಿಯ ಬಿಲ್ಲನ್ನು ಪಾವತಿಸಬಾರದು ಎಂದು ಚಿಂಚೋಳಿಯ ಜೆಡಿಎಸ್ ಪಕ್ಷದ ಮುಖಂಡರಾದ ಸಂಜೀವನ್ ಯಾಕಾಪೂರ್ ಅವರು ಪತ್ರಿಕಾ ಪ್ರಕಟಣೆ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ. ಈ ಸಂಧರ್ಭದಲ್ಲಿ ಗ್ರಾಮಸ್ಥರಾದ ನಾಗಿಂದ್ರಪ್ಪ ಗುರಂಪಳ್ಳಿ. ರೇವನಸಿದ್ದಪ್ಪ ಗುರಂಪಳ್ಳಿ. ಕುಪೇಂದ್ರ. ಇಸ್ಮಾಯಿಲ್. ಐಮತ್ ಅಲಿ. ಸಂತೋಷ್. ಜಿಲ್ಲಾನಿಮಿಯ. ತಾಜೊದ್ದಿನ್. ದಶರಥ. ಹಬೀಬ್. ಹಫೀಜ್ ಪಾಷಾಮಿಯ. ಕಂಟೆಪ್ಪಾ. ನಯುಂಷಾ. ವಿಠಲ್ ಶ್ರೀಕಾಂತ್. ಶಂಶೋದ್ದಿನ್. ಫಿರದೋಸ್ತ್. ಅಲ್ಲವೂದ್ದಿನ್. ಇದ್ದರು