ಗುಯಿಲಾಳು ಶಾಲೆಯಲ್ಲಿ ಕನ್ನಡ ಜಾಗೃತಿ ಅಭಿಯಾನ


 ಹಿರಿಯೂರು.ನ. 19 : ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು,ಕನ್ನಡ ಜಾಗೃತ ಸಮಿತಿ ಚಿತ್ರದುರ್ಗ,ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ಚಿತ್ರದುರ್ಗ ಇವರ ವತಿಯಿಂದ ಗುಯಿಲಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸಾಹಿತಿ ಹಾಗೂ  ಉಪನ್ಯಾಸಕರಾದ ಡಾ.ಎಸ್ ಎಸ್ ಶಫಿವುಲ್ಲಾ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ  ಓದುತ್ತಿರುವ ಮಕ್ಕಳಿಗೆ  ಸಾಮಾನ್ಯಜ್ಞಾನ ಹೆಚ್ಚಿನ ಮಟ್ಟದಲ್ಲಿ ಇರುತ್ತದೆ.ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಕಲಿಯುವ ಮಕ್ಕಳು ಜೀವನದಲ್ಲಿ ಎದುರಾಗುವ ಸಂದಿಗ್ಧ  ಸನ್ನಿವೇಶಗಳನ್ನು ಎದುರಿಸುವ ಹಾಗೂ ಹೊಂದಿಕೊಳ್ಳುವ ಕೌಶಲ್ಯ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು.ಇದರಿಂದ ತಮ್ಮ ಪ್ರತಿಭೆ ದ್ವಿಗುಣವಾಗುತ್ತದೆ ಎಂದರು. ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಜಾಗೃತ ಸಮಿತಿಯ ಕಾರ್ಯವೈಖರಿಗಳನ್ನುಶ್ಲಾಘಿಸಿದರು.ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳಲ್ಲಿ ಜಾಗೃತ ಸಮಿತಿ ಸದಸ್ಯರಾದ ಶ್ರೀಮತಿ ದಯಾ ಪುತ್ತೂರ್ಕರ್ ಮಾತನಾಡಿ ನವೆಂಬರ್ ತಿಂಗಳಲ್ಲಿ ಜಿಲ್ಲಾದ್ಯಂತ ಹಲವು ಶಾಲೆ ಕಾಲೇಜ್‌ ಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸಿದ ಬಗ್ಗೆ ತಿಳಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪರಿಚಯ ಮಾಡಿ ಅದರ ಅಧ್ಯಕ್ಷರಾದ  ನಾಗಭರಣರವರನ್ನು ಕುರಿತು ಮಾತನಾಡಿದರು ಈ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಏರ್ಪಡಿಸುವ ಸ್ಪರ್ಧೆಗಳ ಬಗ್ಗೆ ಮಾಹಿತಿ ನೀಡಿದರು ವಿಜೇತರಿಗೆ ಸರ್ಕಾರದ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜೆ.ಎಸ್ ರಾಜೇಶ್ವರಿ,ತೀರ್ಪುಗಾರರಾಗಿ ಎಂ ಸಿದ್ದಮ್ಮ ಹಾಗೂ ದೇವರಾಜ್  ಭಾಗವಹಿಸಿದ್ದರು. ಇದರ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ  ಆಶುಭಾಷಣ ಸ್ಪರ್ಧೆಯಲ್ಲಿ ಆಯಿಷಾ ಭಾನು ಪ್ರಥಮ , ಗೋಪಿಕಾ ಶ್ರೀ ದ್ವೀತಿಯ,ರಚನಾ ತೃತೀಯ  ಹಾಗೂ ಸಂಪತ್  ಸಮಾಧಾನಕರ ಬಹುಮಾನ ಪಡೆದರು.ಜಿ.ಎನ್ ಸ್ವರೂಪ ಸ್ವಾಗತಿಸಿದರು. ಎಂ ಸಿದ್ದಮ್ಮ ನಿರೂಪಿಸಿ ವಂದಿಸಿದರು.