ಗುಮ್ಮೆ ಕಾಲೋನಿಯಲ್ಲಿ ಬಸವ ಜಯಂತಿ ಆಚರಣೆ

ಬೀದರಃಎ.23: ನಗರದ ಗುಮ್ಮೆ ಕಾಲೋನಿಯ ಹನುಮಾನ ಮಂದಿರದಲ್ಲಿ ಇಂದು ಬೆಳಿಗ್ಗೆ 10.00 ಗಂಟೆಗೆ 890ನೇ ಬಸವ ಜಯಂತ್ಯೋತ್ಸವ ಆಚರಣೆ ಮಾಡಲಾಯಿತು. ಪ್ರಾರಂಭದಲ್ಲಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿ, ಗುರು ಬಸವ ಪೂಜೆಯನ್ನು ಸಮಿತಿಯ ಅಧ್ಯಕ್ಷರಾದ ಗಣಪತಿ ಪಾಟೀಲ್, ಪ್ರಧಾನ ಕಾರ್ಯದರ್ಶಿ ಗುರುನಾಥ ಬಿರಾದಾರ, ಸಂಘಟನಾ ಕಾರ್ಯದರ್ಶಿ ಸಂಗಮೇಶ ಬಿರಾದಾರ, ಕಾರ್ಯದರ್ಶಿ ಧನಶೆಟ್ಟಿ ಹಾಗೂ ಪದಾಧಿಕಾರಿಗಳು ನೆರವೇರಿಸಿದರು. ಅದೇ ರೀತಿ ಅಕ್ಕಮಹಾದೇವಿ ಮಹಿಳಾ ಭಜನಾ ಸಂಘದ ಪದಾಧಿಕಾರಿಗಳು ಬಸವಣ್ಣನವರ ತೊಟ್ಟಿಲು ಕಾರ್ಯಕ್ರಮ ನಡೆಸಿಕೊಟ್ಟರು.

ಮುಖ್ಯ ಅತಿಥಿಗಳಾದ ಪ್ರೊ. ಉಮಾಕಾಂತ ಮೀಸೆಯವರು ಮಾತನಾಡಿ, ಬಸವಣ್ಣನವರ ತತ್ವವು ಜಗತ್ತಿನೆಲ್ಲಡೆ ಹರಡಿ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಪ್ರಮುಖ ತತ್ವವು ಜಗತ್ತಿನ ಮಾನವ ಜನಾಂಗಕ್ಕೆ ವರದಾನವಾಗಿದೆ. ಬಸವ ತತ್ವವು ವೈಜ್ಞಾನಿಕ, ವೈಚಾರಿಕ ಮತ್ತು ಆಧ್ಯಾತ್ಮಿಕ ನೆಲೆಗಟ್ಟಿನ ಮೇಲೆ ನಿಂತಿದೆ. ಆದರೆ ಪ್ರಸ್ತುತ ಬಸವ ತತ್ವ ಕೇವಲ ನುಡಿಯಲ್ಲಿಯೇ ಕಂಡುಬರುತ್ತಿದೆ. ಇಂದಿನ ಸಮಯದಲ್ಲಿ ಬಸವತತ್ವವು ಸಮಾಜಕ್ಕೆ ಅವಶ್ಯಕವಾಗಿದ್ದು, ಯುವಜನಾಂಗವು ಮೊಬೈಲ್ ಸಂಸ್ಕøತಿಗೆ ಮಾರುಹೋಗದೆ, ನೈಜತತ್ವ ಮತ್ತು ಸಂಸ್ಕøತಿ ಹಾಗೂ ಸಂಸ್ಕಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಪ್ರಜೆಯಾಗಬೇಕು. ಯುವ ಪೀಳಗೆ ಮೊಬೈಲ್ ಬಳಕೆ ಕಡಿಮೆ ಮಾಡಿ, ಪುಸ್ತಕ ಅಭ್ಯಾಸ ಮಾಡುವುದಕ್ಕೆ ಹೆಚ್ಚಿನ ಆದ್ಯತೆ ಕೊಡಲು ಕರೆ ನೀಡಿದರು.

ಪ್ರಾರಂಭದಲ್ಲಿ ಶರಣೆ ಲಕ್ಷ್ಮೀ ಬಿರಾದಾರ ಹಾಗೂ ಸಂಗಡಿಗರಿಂದ ಷಟಸ್ಥಲ ಧ್ವಜಾರೋಹಣ ಗೀತೆ ಪ್ರಸ್ತುತಪಡಿಸಿದರು. ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷ ಶರಣೆ ಸರೋಜನಿ ಸ್ವಾಮಿ ಹಾಗೂ ಸಂಗಡಿಗರು ವಚನಗಾಯನ ನಡೆಸಿಕೊಟ್ಟರು. ಹಾರ್ಮೋನಿಯಂ ಆಶೀಶ ಬಿರಾದಾರ, ತಬಲಾ ಸರ್ವೇಶ ಸಾಥ್ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಣಪತಿ ಪಾಟೀಲ್ ವಹಿಸಿದರೆ, ಗುರುನಾಥ ಬಿರಾದಾರ ಸ್ವಾಗತ ಕೋರಿದರು. ಧನಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿದರೆÉ, ಸುಭಾಷ ಬಿರಾದಾರ ವಂದಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಬಸವರಾಜ ದಾನಿ, ದತ್ತು, ಬಸವರಾಜ ಹಳ್ಳೆ, ದೀಪಕ ಗಾದಗೆ, ಧೂಳಪ್ಪ, ರವಿ ಮೂಲಗೆ, ಸಂಗಶೆಟ್ಟಿ ದಾನಿ, ರಾಜೇಶ್ವರಿ, ಭಾರತಿ ಬಿರಾದಾರ, ಗೀತಾ, ಶಿಲ್ಪಾ ಮಜಗೆ, ಸಂಗೀತಾ, ನಿರ್ಮಲಾ ಸ್ವಾಮಿ, ರೇಣುಕಾ ಮುಂತಾದವರು ಉಪಸ್ಥಿತರಿದ್ದರು.