ಗುಮ್ಮಟನಗರಿಯಲ್ಲಿ ಹೊಸ ವರ್ಷ ಸಂಭ್ರಮ

ವಿಜಯಪುರ:ಜ.1:ನಗರದ ತುಂಬೆಲ್ಲಾ ಯುವಕರು, ಯುವತಿಯರು, ವಯೋವೃದ್ಧರಾದಿಯಾಗಿ ಸರ್ವ ಜನತೆ 2023 ವರ್ಷಕ್ಕೆ ವಿದಾಯ ಹೇಳಿ 2024 ಹೊಸ ವರ್ಷ ಸಂಭ್ರಮದಿಂದ ಬರಮಾಡಿಕೊಂಡರು.
ಉಒಸ ವ ಮುನ್ನಾ ದಿನ ಮಧ್ಯಾಹ್ನದಿಂದಲೇ ನಗರದ ವಿವಿಧ ಕೇಕ್ ಅಂಗಡಿಗಳ ಮುಂದೆ ಅಧಿಕ ಸಂಖ್ಯೆಯಲ್ಲಿ ಜನ ಜಮಾಯಿಸಿ ತಾವು ಆದೇಶ ನೀಡುದ ಗಾತ್ರ, ಆಕಾರದ ತರೇಹವಾರಿ ಕೇಕ್ ಗಳನ್ನು ಕೊಂಡೊಯ್ದು ನಗರದ ಪ್ರಮುಖ ಬೀದಿ, ಗಲ್ಲಿ ಗಲ್ಲಿಗಳ ಸಂಪರ್ಕ ರಸ್ತೆಗಳಲ್ಲಿ ಗೆಳಯರೆಲ್ಲರೂ ಸೇರಿ ಬರೋಬ್ಬರಿ ಮಧ್ಯರಾತ್ರಿ ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಕುಣಿದು ಕುಪ್ಪಳಿಸಿದರು.
ಮಧ್ಯರಾತ್ರಿಯಾಗುತ್ತಿದ್ದಂತೆಯೇ ನಗರದ ತುಂಬೆಲ್ಲಾ ಏಕಕಾಲಕ್ಕೆ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
ಹೊಟೇಲ್, ದಾಬಾಗಳಲ್ಲಿಯೂ ಸ್ನೇಹಿತರು ಒಡಗೂಡಿಕೊಂಡು ಹೊಸ ವರ್ಷದ ಸಂಭ್ರಮಾಚರಣೆ ಮಾಡಿದರು.
ಎಣ್ಣೆಪ್ರಿಯರು ಸಖತ್ ಆಗಿ ಎಣ್ಣೆ ಕಿಕ್ ನಲ್ಲಿಯೇ ಹಳೆಯ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷ ಸ್ವಾಗತ ಕೋರಿ ಹುರುಪಿನಿಂದ ಬರಮಾಡಿಕೊಂಡರು.