ಗುಬ್ಬಚ್ಚಿ ಸಂತತಿ ಉಳಿವಾಗಿ ಜನ ಜಾಗೃತಿ ಜಾಥಾ ಅಭಿಯಾನ

ಸೈದಾಪುರ:ಡಿ.29:ಇಲ್ಲಿನ ವಿದ್ಯಾ ವರ್ಧಕ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಗುಬ್ಬಚ್ಚಿ ಸಂತತಿ ಉಳಿವಾಗಿ ಜನ ಜಾಗೃತಿ ಜಾಥಾ ಅಭಿಯಾನ ಕೈಗೊಂಡರು. ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಂಚಾರ ಮಾಡಿ ವಿವಿಧ ಘೋಷಣೆಗಳನ್ನು ಕೂಗುತ್ತಾ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದರು.
ಅಭಿಯಾನದ ನೇತೃತ್ವ ವಹಿಸಿದ 10ನೇ ತರಗತಿ ವಿದ್ಯಾರ್ಥಿನಿ ಕಾವೇರಿ ಮಾತನಾಡಿ, ಗುಬ್ಬಚ್ಚಿಗಳು ಮತ್ತು ಇತರ ಪಕ್ಷಿಗಳ ಅವಾಸಸ್ಥಾನದ ನಷ್ಟವನ್ನು ಎದುರಿಸಲು ಗ್ರಾಮ ಮತ್ತು ನಗರಗಳಲ್ಲಿ ಮರಗಳ ಕಡಿತವು ಒಂದು ಪ್ರಮುಖ ಕಾರಣವಾಗಿದೆ. ನಗರಗಳಲ್ಲಿ ಗಾಜಿನ ಕಟ್ಟಡಗಳು ರಚನೆಯಾಗುತ್ತಿದ್ದೂ, ಇತ್ತೀಚಿನ ದಿನಗಳಲ್ಲಿ ಆರ್.ಸಿ.ಸಿ ಮನೆಗಳನ್ನು ಕಟ್ಟುವುದರಿಂದ ಗುಬ್ಬಿಗಳಿಗೆ ಗೂಡು ಕಟ್ಟಲು ಆಗುತ್ತಿಲ್ಲ. ಭತ್ತ, ರಾಗಿ, ಜೋಳ ಇತ್ಯಾದಿ ಧಾನ್ಯಗಳಿಗೆ ಅತ್ಯಂತ ಹೆಚ್ಚಿನ ಪ್ರಮಾಣದ ರಾಸಾಯನಿಕ ಗೊಬ್ಬರ ಮತ್ತು ಕ್ರೀಡನಾಶಕಗಳು ಬಳಸುವುದರಿಂದ ಇಂತಹ ಧಾನ್ಯಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಗುಬ್ಬಚ್ಚಿಗಳ ಸಂತತಿ ಕಡಿಮೆಯಾಗುತ್ತಿದೆ. ಮೊಬೈಲ್ ಫೆÇೀನ್ ಟವರ್ ಗಳಿಂದ ಉಂಟಾಗುವ ಹೆಚ್ಚಿನ ಮಟ್ಟದ ಮೈಕ್ರೊವೇವ್ ಮಾಲಿನ್ಯವು ಗುಬ್ಬಚ್ಚಿಗಳ ಅವನತಿಗೆ ಪ್ರಮುಖ ಕಾರಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇವುಗಳ ಉಳಿವಿಕೆ ಎಲ್ಲರ ಜಬ್ದಾರಿಯಾಗಬೇಕು. ಈ ದಿಸೆಯಲ್ಲಿ ಉತ್ತಮ ಪರಿಸವನ್ನು ನಾವು ಕಂಡು ಕೊಳ್ಳಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯಗುರು ಲಿಂಗಾರೆಡ್ಡಿ ನಾಯಕ, ವಿಜ್ಞಾನ ಶಿಕ್ಷಕ ರಾಚಯ್ಯ ಸ್ವಾಮಿ ಬಾಡಿಯಾಲ, ಕಾಶಿನಾಥ ಶೇಖಸಿಂದಿ, ವಿಶ್ವನಾಥರೆಡ್ಡಿ ಪಾಟೀಲ ಕಣೇಕಲ್, ಸಂಗಾರೆಡ್ಡಿ, ರಾಚಪ್ಪ ಸೇರಿದಂತೆ ಇತರರಿದ್ದರು.

ಗುಬ್ಬಚ್ಚಿಗಳ ಸಂತತಿ ನಾಶವಾಗುತ್ತಿದೆ. ಇದಕ್ಕೆ ನಮ್ಮ ಆದುನಿಕ ಜೀವನ ಪದ್ಧತಿ ಕಾರಣವಾಗಿದ್ದೂ ಇದನ್ನು ಅಭಿಯಾನದ ಮೂಲಕ ತಿಳಿಸುವ ಪ್ರಯತ್ನ ಮಾಡುಲಾಗುತ್ತಿದೆ. ನಮ್ಮದೆಯಾದ ತಂಡವನ್ನು ರಚನೆ ಮಾಡಿಕೊಂಡು ಪಟ್ಟಣದಲ್ಲಿ ಜಾಗೃತಿ ಮೂಡಿಸಿದ್ದೇವೆ. ಮುಂದಿನ ಪೀಳಿಗೆಗೂ ಗುಬ್ಬಿಗಳ ಚಿಲಿಪಿಲಿ ಕಲರವನ್ನು ಕೇಳಿಸುವ ಪ್ರಯತ್ನ ಎಲ್ಲರೂ ಸೇರಿ ಮಾಡಬೇಕಾಗಿದೆ.
ಕಾವೇರಿ ಮೌನೇಶ 10ನೇ ತರಗತಿ ವಿದ್ಯಾರ್ಥಿನಿ