ಗುಪ್ತ ಮತದಾನದ ನಿಯಮ ಉಲ್ಲಂಘನೆ: ವೋಟ್ ಹಾಕಿದ ವಿಡಿಯೋ, ಫೆÇೀಟೋ ವೈರಲ್!

ಬೀದರ್:ಮೇ.11: ರಾಜ್ಯಾದ್ಯಂತ ಬಿರುಸಿನ ಮತದಾನ ಪ್ರಕ್ರಿಯೆ ನಡೆದಿದ್ದು. ಆದರೆ, ಗುಪ್ತವಾಗಿ ಮತದಾನ ಮಾಡಬೇಕು ಎಂಬ ನಿಯಮವಿದ್ದರೂ ಹಲವು ಯುವಕರು ತಾವು ಮತದಾನ ಮಾಡಿದ ವೀಡಿಯೋ, ಪೆÇಟೋ ತೆಗದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಮತದಾನದ ವಿಡಿಯೋ ಹರಿಬಿಟ್ಟವರಿಗೆ ಚುನಾವಣಾ ಅಧಿಕಾರಿಗಳ ಬಿಸಿ: ದೇಶದಲ್ಲಿ ಗೌಪ್ಯವಾಗಿ ಮತದಾನ ಮಾಡಬೇಕೆಂಬ ನಿಯಮವಿದ್ದರೂ, ಬೀದರ್ ನಗರದಲ್ಲೊಬ್ಬ ಯುವಕರು ತಾವು ಮತದಾನ ಮಾಡುವ ವಿಡಿಯೋ ಹರಿಬಿಟ್ಟಿದ್ದಾರೆ. ಬೀದರ್ ನ ಭಾಲ್ಕಿ, ಬೀದರ್ ಉತ್ತರ ಸೇರಿದಂತೆ ಹಲವು ಕ್ಷೇತ್ರಗಳ ಕೆಲವರಿಂದ ಮತದಾನ ಮಾಡಿದ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ವಿಡಿಯೋ ರೇಕಾರ್ಡ್ ಕಾನೂನಿನ ಬಾಹಿರವೆಂದು ಚುನಾವಣಾ ಅಧಿಕಾರಿ ಹೇಳಿದ್ದಾರೆ. ಜಿಲ್ಲಾ ಚುನಾವಣಾ ಅಧಿಕಾರಿಯಿಂದ ವಿಡಿಯೋ ವೈರಲ್ ಮಾಡಿದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಭಾಲ್ಕಿ ಕ್ಷೇತ್ರ, ಬೀದರ್ ಉತ್ತರ ಕ್ಷೇತ್ರದ ಕೆಲವರಿಂದ ಮತದಾನ ಮಾಡಿದ ವಿಡಿಯೋ ವೈರಲ್ ಆಗಿದ್ದು, ಅಂಥವರ ವಿರುದ್ಧ ಕ್ರಮಕ್ಕೆ ಕೈಗೊಳ್ಳಲು ಮುಂದಾಗಿದ್ದಾರೆ.