ಗುದ್ನೇಶ್ವರ ಜಾತ್ರಾ ಮಹೋತ್ಸವ

ಕುಕನೂರು, ಡಿ.31: ಕೊಪ್ಪಳ ಜಿಲ್ಲೆ ಕುಕನೂರ ತಾಲೂಕಿನ ಗುದ್ನೇಪ್ಪನಮಠದ ಗುದ್ನೇಶ್ವರ ರಥೋತ್ಸವವು ಕೋವಿಡ್19 ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ/ಮುಜರಾಯಿ ಇಲಾಖೆಯ ಆದೇಶದಂತೆ ರಥೋತ್ಸವ ಒಂದನ್ನು ಹೊರತುಪಡಿಸಿ ಉಳಿದೆಲ್ಲ ಧಾರ್ಮಿಕ ಆಚರಣೆಗಳು ನಡೆದವು. ಪ್ರತಿವರ್ಷ ಲಕ್ಷಾಂತರ ಭಕ್ತರು ಆಗಮಿಸಿ ಗುದ್ನೇಶ್ವರ ರಥೋತ್ಸವವನ್ನು ಎಳೆಯುತ್ತಿದರು ಆದರೆ ಕೋವಿಡ್19 ಹಿನ್ನೆಲೆಯಲ್ಲಿ ರಥೋತ್ಸವ ರದ್ದುಪಡಿಸಲಾಗಿದೆ. ಗುದ್ನೇಪ್ಪನಮಠ ಗ್ರಾಮದ ಜನ ಮತ್ತು ಗುದ್ನೇಶ್ವರ ಭಕ್ತರು ಎಲ್ಲಿ ಗುದ್ನೇಶ್ವರ ರಥವನ್ನು ಎಳೆದುಯೊವರು ಎಂಬದನ್ನು ಮನಗಂಡು ಕುಕನೂರ ತಹಸಿಲ್ಧಾರ್ ಆದೇಶ ಮೇರೆಗೆ ಕುಕನೂರ ಪಿಎಸ್ಐ ರಥದ ಹಗ್ಗವನ್ನು ಮತ್ತು ರಥದ ಗಾಲಿಗೆ ಹಾಕುವ ಸೊನ್ನಿಯನ್ನು ವಶಪಡಿಸಿಕೊಂಡು ಕುಕನೂರ ಪಟ್ಟಣ ಪಂಚಾಯಿತಿ ಇಟ್ಟಿದ್ದಾರೆ. ಗುದ್ನೇಪ್ಪನಮಠ ಗ್ರಾಮದ ಜನ ಮತ್ತು ಗುದ್ನೇಶ್ವರ ಭಕ್ತರು ನಾವು ಐದು ಹೆಜ್ಜೆಯಾದರು ರಥವನ್ನು ಎಳೆಯುತ್ತೇವೆ ಎಂದರು ಕುಕನೂರ ತಹಸಿಲ್ಧಾರ್ ಪಿಎಸ್ಐಯವರು ಸರಕಾರದ ಆದೇಶವನ್ನು ಮೀರಿಲು ಬರವುದಿಲ್ಲ ರಥೋತ್ಸವಕ್ಕೆ ಅವಕಾಶ ಮಾಡಿಕೊಟ್ರೆ ನಾವು ಅಮಾನತು ಅಗಲಿದೇವೆ ದಯವಿಟ್ಟು ನಮ್ಮ ಕಷ್ಟ ಅರ್ಥ ಮಾಡಿಕೊಳ್ಳಿ ಎಂದು ಗುದ್ನೇಪ್ಪನಮಠ-ಕುಕನೂರ ಗ್ರಾಮಸ್ಥರಿಗೆ ಮನವಿ ಮಾಡಿಕೊಂಡರು. ಗುದ್ನೇಶ್ವರ ರಥ ಎಳೆಯಲು ಅನುಮತಿ ನಿರಾಕರಿಸಿದರು. ವಿಶೇಷವೆಂದರೆ ಕುಕನೂರ ತಾಲೂಕಿನ ತಹಸಿಲ್ದಾರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ಸುದ್ದಿಯನ್ನು ಭಕ್ತರು ಮಾತನಾಡುತ್ತಿದರು ತಹಸಿಲ್ದಾರ್ ಗುದ್ನೇಶ್ವರ ರಥೋತ್ಸವಕ್ಕೆ ಅವಕಾಶ ಕೊಡಲಿಲ್ಲ ಇದು ಗುದ್ನೇಶ್ವರ ಪವಾಡ ಇರಬಹುದೇನು ಎಂದು ಭಕ್ತರು ಮಾತನಾಡಿದರು ರಥವೊಂದು ಬಿಟ್ಟು ಎಂದಿನಂತೆ ಪೂಜೆ ಪುರಸ್ಕಾರ ನಡೆಯಿತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಗುದ್ನೇಶ್ವರ ಭಕ್ತರು ದಿಂಡ ನಮಸ್ಕಾರ ಹರಿಕೆ ತೀರಿಸಿದರು. ಸರತಿ ಸಾಲಿನಲ್ಲಿ ಭಕ್ತರು ಬಂದು ವಿಶೇಷ ಪೂಜೆ ಪುರಸ್ಕಾರ ಗುದ್ನೇಶ್ವರ ದರ್ಶನ ಪಡೆದರು. ಸಂಜೆ 5:30ಕ್ಕೆ ಗುದ್ನೇಶ್ವರ ರಥವನ್ನು 5 ಸಲ ಸುತ್ತು ಹಾಕಿ ದಿವಟಿಗೆ ಪಲ್ಲಕ್ಕಿ ಸೇವೆಯೊಂದಿಗೆ ಸರಳವಾಗಿ ಗುದ್ನೇಶ್ವರ ಜಾತ್ರೆಯನ್ನು ಆಚರಣೆ ನಡೆಯಿತು
ವರದಿ ವೀರೇಶ್ ಧೂಪದ ಪತ್ರಿಕೋದ್ಯಮ ವಿದ್ಯಾರ್ಥಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ