ಗುದ್ದಲಿ ಬುಟ್ಟಿ ಹಿಡಿದು ಉದ್ಯೋಗ ಖಾತ್ರಿ ಕೆಲಸಕ್ಕಾಗಿ ಗ್ರಾಮಸ್ಥರ ಪ್ರತಿಭಟನೆ

ಅಫಜಲಪುರ:ಏ.13: ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಉದ್ಯೋಗ ನೀಡದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆಕ್ರೋಶಗೊಂಡ ಕೂಲಿ ಕಾರ್ಮಿಕರು ಗ್ರಾಪಂಗೆ ಗುದ್ದಲಿ, ಬುಟ್ಟಿ ಸಮೇತ ಆಗಮಿಸಿ ಮುತ್ತಿಗೆ ಹಾಕಿರುವ ಘಟನೆ ನಡೆದಿದೆ.

ತಾಲೂಕಿನ ದೇವಲ ಗಾಣಗಾಪುರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೂಲಿಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ದಿನನಿತ್ಯ ನಾವು ಕೂಲಿ ಕೆಲಸಕ್ಕೆ ಬಂದು ವಾಪಸ್ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕೆಲಸದ ಸಮಯದಲ್ಲಿ ನೀರು ಸಹ ಕೊಡುತ್ತಿಲ್ಲ. ಅಲ್ಲದೇ ಜಾಬ್ ಕಾರ್ಡ್ ವಿತರಣೆ ಮಾಡದೆ ಬೇರೆಯವರ ಬ್ಯಾಂಕ್ ಖಾತೆಗೆ ಹಣ ಹಾಕುತ್ತಿದ್ದಾರೆ. ಸರಕಾರದಿಂದ 100 ದಿನ ಕೂಲಿ ಕೆಲಸ ನೀಡಬೇಕೆಂಬ ಆದೇಶವಿದ್ದರೂ ಸಹ ನಮಗೆ ಕೆಲಸ ಕೊಡದೆ ಸತಾಯಿಸುತ್ತಿದ್ದಾರೆ.

ಈ ಬಾರಿ ಬರಗಾಲ ಆವರಿಸಿದೆ. ಮಳೆ ಇಲ್ಲದ ಕಾರಣ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗಳು ನಿಂತು ಹೋಗಿವೆ. ಕೃಷಿ ಚಟುವಟಿಕೆಗಳನ್ನೆ? ನಂಬಿ ಬದುಕು ಸಾಗಿಸುತ್ತಿದ್ದ ಈ ಭಾಗದ ಜನರಿಗೆ ಕೆಲಸ ಇಲ್ಲದಂತಾಗಿ ಬದುಕು ಸಾಗಿಸುವುದೇ ಕಷ್ಟಕರವಾಗಿದೆ. ತಾಲೂಕಿನ ಎಷ್ಟೊ? ಗ್ರಾಮಗಳಲ್ಲಿ ಕೆಲಸ ಇಲ್ಲದೆ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ ಬದುಕು ಸಾಗಿಸುವ ಉದ್ದೆ?ಶದಿಂದ ಗ್ರಾಮಗಳನ್ನು ತೊರೆದು ಮಹಾನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಬರಗಾಲದಲ್ಲಿ ಜನರಿಗೆ ನೆರವಾಗುವ ಉದ್ದೆ?ಶದಿಂದ ಸರಕಾರ ಉದ್ಯೊ?ಗ ಖಾತರಿ ಯೋಜನೆ ಜಾರಿ ಮಾಡಿದೆ. ಒಳ್ಳೆಯ ಉದ್ದೆ?ಶದಿಂದ ಜಾರಿಯಾಗಿರುವ ಈ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸರಿಯಾಗಿ ಬಳಕೆಯಾಗದೆ ದುರಪಯೋಗವಾಗುತ್ತಿದೆ ಎಂದು ಪ್ರತಿಭಟನಾ ನಿರತ ಕೂಲಿ ಕಾರ್ಮಿಕರು ಮಹಿಳೆಯರು ದೂರಿದರು.

ನಂತರ ಗ್ರಾಪಂಗೆ ಆಗಮಿಸಿದ ಗ್ರಾಪಂ ಅಧ್ಯಕ್ಷ ದತ್ತು ಹೇರೂರ ಮನವಿ ಪತ್ರ ಸ್ವೀಕರಿಸಿ,
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಲು ಪಿಡಿಒಗೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನೂರಾರು ಮಹಿಳಾ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು. ಗಾಣಗಾಪುರ ಪೆÇೀಲಿಸ್ ಠಾಣೆ ಪಿಎ??? ಪರಶುರಾಮ ನೇತೃತ್ವದಲ್ಲಿ ಪೆÇೀಲಿಸ್ ಬಂದೋಬಸ್ತ್ ಒದಗಿಸಲಾಯಿತು.