ಗುದಗೆ ಆಸ್ಪತ್ರೆಯ 4 ನೆಯ ವಾರ್ಷಿಕೋತ್ಸವ, ಕ್ರಿಸ್ಮಸ್ ಆಚರಣೆ

ಬೀದರ ಡಿ 27: ನಗರದ ಗುದಗೆ ಆಸ್ಪತ್ರೆಯಲ್ಲಿ ಆಸ್ಪತ್ರೆಯ 4 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕ್ರಿಸ್ಮಸ್ ಹಬ್ಬದ ಆಚರಣೆ ಮಾಡಲಾಯಿತು . ಈ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ವೈದ್ಯರಾದ ಹಾಗೂ ಗುದಗೆ ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ ಚಂದ್ರಕಾಂತ ಗುದಗೆ ಅವರು ಎಲ್ಲ ಸಿಬ್ಬಂದಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯ ಹೇಳಿ ನಮ್ಮ ಆಸ್ಪತ್ರೆಯಲ್ಲಿ ಕೊರೋನ ಸಂಕಷ್ಟದಲಿ ಸುಮಾರು ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇವೆ ಹಾಗೂ ಎಲ್ಲ ರೋಗಿಗಳು ಗುಣಮುಖರಾಗಿ ಹೋಗಿದ್ದಾರೆ. ಆ ದೇವರ ಆಶೀರ್ವಾದ ಇಂದ ನಮಗೆ ಹಾಗೂ ನಮ್ಮ ಸಿಬ್ಬಂದಿಗೆ ಕೊರೋನಾ ಬಂದಿಲ್ಲ . ಕಾಲ ಕಾಲಕ್ಕೆ ಮುಂಜಾಗ್ರತಾ ಕ್ರಮವಾಗಿ ಮಾತ್ರೆ ತಮ್ಮೆಲ್ಲರ ಆತ್ಮವಿಶ್ವಾಸ ಧೈರ್ಯ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರು. ಗುದಗೆ ಆಸ್ಪತ್ರೆಯು ದಿನದ 24 ಗಂಟೆ ನೆರವಾಗಿ ಮುಖ್ಯ ವೈದ್ಯರು ಸರಳವಾಗಿ ಸಿಗುತ್ತಾರೆ ತುರ್ತು ಚಿಕಿತ್ಸೆ ದೊರೆಯುತ್ತದೆ ಎಂದು ಪ್ರಖ್ಯಾತಿ. ಸುಮಾರು 4 ದಶಕಗಳಿಂದ ನಾನು ಈ ಸೇವೆ ಮಾಡಿಕೊಂಡು ಬಂದಿದ್ದೇನೆ . ಇನ್ನು ನಮ್ಮ ಪುತ್ರರಾದ ಡಾ ಸಚಿನ್ ಗುದಗೆ ಡಾ ನಿತಿನ ಗುದಗೆ ನಮ್ಮ ಆಸ್ಪತ್ರೆಗೆ ಬರುವ ಎಲ್ಲಾ ಅತಿಥಿ ವೈದ್ಯರು ಕೊಡ ಸಾಥ ನೀಡುತಿದ್ದಾರೆ ಅವರಿಗೂ ಈ ಸಂದರ್ಭದಲ್ಲಿ ಧನ್ಯವಾದ ಹೇಳಿದರು. ಕೊರೋನ ಸಂಕಷ್ಟದಲಿ ನಮ್ಮ ಆಸ್ಪತ್ರೆಯಲ್ಲಿ ಡಾ ಶಾರದಾ ಸಚಿನ ಗುದಗೆ ಅವರ ಅತಿ ಮುಂಜಾಗ್ರತ ವಹಿಸಿ ಶಸ್ತ್ರಚಿಕಿತ್ಸೆ ಮಾಡಿದಾರೆ ಎಪ್ರಿಲ್, ಮೇ,ಜೂನ್. ತಿಂಗಳಲ್ಲಿ ಸರಿ ಸುಮಾರು 350 ಕ್ಕೂ ಹೆಚ್ಚು ಹೆರಿಗೆ ಮಾಡಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಾ ಸಚಿನ್ ಗುದಗೆ, ಡಾ ವೈಭವ ಭದಭದೆ, ಡಾ ವಿಶ್ವನಾಥ ಪಾಟೀಲ, ಡಾ ವರ್ಷಾ ತೊಂಡಾರೆ ಡಾ ವಿಜಯಲಕ್ಷ್ಮಿ ನಿತಿನ ಗುದಗೆ ಹಾಗೂ ಕಲಬುರ್ಗಿ ಉಚ್ಚ ನ್ಯಾಯಾಲಯದ ವಕೀಲರಾದ ರವಿ ಬಸವರಾಜ ಪಾಟೀಲ ಉಪಸ್ಥಿತರಿದ್ದರು. ಆಸ್ಪತ್ರೆಯ ವ್ಯವಸ್ಥಾಪರಾದ ಶ್ರೀಕಾಂತ್ ಸ್ವಾಮಿ ಸೋಪೂರ ಸ್ವಾಗತಿಸಿ ನಿರೂಪಿಸಿದರು ಡಾ ಮಹೇಶ ತೊಂಡಾರೆ ವಂದಿಸಿದರು.