ಗುತ್ತಿಗೇದಾರರ ಕಾಮಗಾರಿಗಳ ಬಾಕಿ ಹಣ ನೀಡದಿದ್ದರೆ ಹೋರಾಟ ಎಚ್ಚರಿಕೆ

ರಾಯಚೂರು,ಆ.೧೧- ಗುತ್ತಿಗೇದಾರರ ಪೂರ್ಣಗೊಂಡ ಕಾಮಗಾರಿಗಳ ಬಾಕಿ ಹಣವನ್ನು ಒಂದುವಾರದೊಳಗೆ ಪಾವತಿಸದಿದ್ದರೆ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಅವರಿಗೆ ಎಚ್ಚರಿಕೆ ನೀಡಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಜ್ಯಾದ್ಯತ ೪೭ ಸಾವಿರ ಕೋಟಿ ಬಿಲ್ ಹಣ ಬಾಕಿ ಇದೆ ಕೂಡಲೇ ಇದನ್ನು ಪಾವತಿಸಬೇಕು.ಕಳೆದ ಮಾರ್ಚ್ ರಿಂದ ಇಲ್ಲಿಯವರೆಗೂ ಗುತ್ತಿಗೆದಾರರಿಗೆ ಯಾವುದೇ ಇಲಾಖೆಯಲ್ಲಿ ಬಾಕಿ ಇರುವ ಹಣ ಪಾವತಿಸಲ್ಲ.ಈ ಹಿಂದೆ ಇದ್ದ, ಸರ್ಕಾರದಲ್ಲಿ ಕೂಡ ಹಣ ಪಾವತಿಸಲು ವಿಳಂಬ ಧೋರಣೆ ಅನುಸರಿಸಿದೆ.ನೂತನವಾಗಿ ಮುಖ್ಯ ಮಂತ್ರಿಗಳ ಅವರು ಬಾಕಿ ಹಣ ಬಿಡುಗಡೆ ಮಾಡಲು ಆದೇಶ ಮಾಡಿದರೂ ಕೂಡ ಅಧಿಕಾರಿಗಳು ಅನೇಕ ಕಾಮಗಾರಿಗಳಿಗೆ ಕೆಲವೊಂದು ಇಲಾಖೆಯಲ್ಲಿ ಇಲ್ಲ ಸಲ್ಲದ ಷರತ್ತುಗಳಿಗೆ ಬೇಡಿಕೆ ಇಟ್ಟು,ಹಣ ಪಾವತಿಸದಂತೆ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಎಲ್ಲಾ ಇಲಾಖೆಗಳಿಂದ ಸುಮಾರು ೫೦೦ ರಿಂದ ೬೦೦ ಕೊಟಿ ರೂ ವರೆಗೆ ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಯಾಗಬೇಕಾಗಿದೆ. ಗುತ್ತಿಗೆದಾರರು ಅನೇಕ ಕಡೆ ಸಾಲಗಳನ್ನು ಪಡೆದು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಇವರ ದುರಹಂಕಾರ ಹೇಳಕೆಯಿಂದ ರಾಜ್ಯದ ಎಲ್ಲಾ ಗುತ್ತಿಗೆದಾರರಿಗೆ ನೋವುಉಂಟಾಗಿದೆ. ಬೆಂಗಳೂರಿನ ಗುತ್ತಿಗೆದಾರ ಗೌತಮ್ ಇವರು ಮಾಡಿದ ಕಾಮಗಾರಿಯ ಬಾಕಿ ಹಣ ಪಾವತಿಯಾಗದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾರೆ.ಕೂಡಲೇ ಮುಖ್ಯಮಂತ್ರಿಗಳು ಮುತುವರ್ಜಿ ವಹಿಸಿ ಕೂಡಲೇ ಗುತ್ತಿಗೆದಾರರ ಕುಂದು- ಕೊರತೆಗಳನ್ನು ನೀವಾರಿಸಿ, ಬಾಕಿ ಹಣವನ್ನು ಪಾವತಿಸಿಬೇಕೆಂದು ಒತ್ತಾಯಿಸಿದ್ದರು.
ಈ ಸಂದರ್ಭದಲ್ಲಿ ಜಿ.ಮಲ್ಲಿಕಾರ್ಜುನ, ರಾಜ ಶೇಖರ ಪಾಟೀಲ್,ಆಂಜನೇಯ, ಡಿ.ರವೀಂದ್ರ ನಾಯಕ, ಸುರೇಶಬಾಬು ಸೇರಿದಂತೆ ಇತರರು ಉಪಸ್ಥಿತರಿದ್ದರು.