
ಕಲಬುರಗಿ: ಜು 05: ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ಹಾಗೂ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಸಿಬ್ಬಂದಿ ಹಾಗೂ ಕಾರ್ಮಿಕರುಗಳಿಗೆ ಇ.ಎಸ್.ಐ. ಮತ್ತು ಇ.ಪಿ.ಎಫ್. ಕಡ್ಡಾಯವಾಗಿ ನಿಗದಿತ ಸಮಯದಲ್ಲಿ ನೀಡಲು ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಅವರು ಅಧಿಕಾರಿಗಳಿಗೆ ಸೂಚಿಸಿದರು
ಬುಧುವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ನಿಗಮ ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರ/ ನೌಕರರಿಗೆ ದೊರಕುವ ಶಾಸನಾತ್ಮಕ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಕನಿಷ್ಠ ವೇತನ, ವೇತನ ಪಾವತಿ ಕಾಯ್ದೆ ಹಾಗೂ ಇನ್ನಿತರೆ ಅನ್ವಯಿಸುವ ಕಾರ್ಮಿಕರ ಕಾಯ್ದೆಗಳ ಕುರಿತು ಅರಿವು ಮೂಡಿಸಲಾಗುವುದು ಎಂದರು.
ಇ.ಎಸ್.ಐ. ಹಾಗೂ ಇ.ಪಿ.ಎಫ್.ಗಳು ಸಕಾಲದಲ್ಲಿ ಕಟಾವು ಆಗುತ್ತಿಲ್ಲ ಎಂದು ಅಧಿಕಾರಿಗಳು ಪರಿಶೀಲಿಸಬೇಕು. ಇಂತಹ ಕಾರ್ಯಾಗಾರದಿಂದ ಇನ್ನೂ ಹೆಚ್ಚಿನ ತಿಳುವಳಿಕೆ ನೀಡಿದಂತೆ ಆಗುತ್ತದೆ ತಮ್ಮ ಸಮಸ್ಯೆಗಳು ಏನೆ ಇದ್ದರು ಇಲ್ಲಿಯ ಬಂದಂತಹ ಅಧಿಕಾರಿಗಳಿಂದ ತಿಳಿದುಕೊಳ್ಳಬೇಕು. ಯಾವುದೇ ದೂರುಗಳು ಬಂದರೆ ನಾನು ಸಹಿಸುವುದಿಲ್ಲ. ಎಲ್ಲಾ ಇಲಾಖೆಗಳು ಶಿಸ್ತುಬದ್ಧವಾಗಿ ಕೆಲಸ ನಿರ್ವಹಿಸಬೇಕು ಕಾರ್ಮಿಕರಿಗೆ ಹೊರಗುತ್ತಿಗೆ ಸಕಾಲದಲ್ಲಿ ವೇತನ ಸಿಗುವಂತೆ ಕೆಲಸವನ್ನು ಮಾಡಬೇಕೆಂದರು.
ಅಧಿಕಾರಿಗಳು ಸಂಘ ಸಂಸ್ಥೆಗಳು ಕನಿಷ್ಠ ವೇತನ, ಪಾವತಿ ಅನೇಕ ದೂರುಗಳು ಬಂದಿರುತ್ತೇವೆ. ಅಧಿಕಾರಿಗಳು ಸರಿಯಾಗಿ ಇ.ಎಸ್.ಐ. ಮತ್ತು ಇ.ಪಿ.ಎಫ್. ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ಸರಿಯಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದರು
ಉಪಕಾರ್ಮಿಕ ಆಯುಕ್ತರಾದ ವೆಂಕಟೇಶ ಶಿಂಥಿಹಟ್ಟಿ ಅವರು ಮಾತನಾಡಿ, ಹೊರಗುತ್ತಿಗೆ ಆಧಾರದ ಮೇಲೆ ಲೆಕ್ಕ ಸಹಾಯಕರು, ಕಂಪ್ಯೂಟರ ಅಪರೇಟರ, ವಾಹನಚಾಲಕ, ಗ್ರೂಪ್-ಡಿ ಹುದ್ದೆಗಳಿಗೆ ಸರಿಯಾಗಿ ವೇತನ ಪಾವತಿಮಾಡುತ್ತಿಲ್ಲ ಇ.ಎಸ್.ಐ. ಮತ್ತು ಪಿ.ಎಫ್.ಗಳು ಸರಿಯಾಗಿ ಕಟ್ಟುತ್ತಿಲ್ಲ ಎಂದರು.
ಪ್ರತಿ ತಿಂಗಳು ಬಿಲ್ಲನ್ನು ಸಂದಾಯಮಾಡುವಾಗ ರೂ. 10,000/- ಕ್ಕಿಂತ ಮೇಲ್ಪಟ್ಟು ವೇತನ ಪಡೆಯುತ್ತಿರುವ ಸಿಬ್ಬಂದಿಗಳ ವೇತನದಿಂದ ಕಟಾಯಿಸಿದ ವೃತ್ತಿ ತೆರಿಗೆ ಜಮೆ ಮಾಡಿದ ಬಗ್ಗೆ ಹಿಂದಿನ ತಿಂಗಳ ವಿವರಗಳನ್ನು ಲಗತ್ತಿಸುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚಿಸುವುದು.
ಗುತ್ತಿಗೆದಾರರು ಹೊರಗುತ್ತಿಗೆ ಸೇವೆ ನೀಡಿದ್ದಕ್ಕೆ ಪಡೆದ ಸೇವಾ ತೆರಿಗೆಯನ್ನು ಸಂಬಂಧಿಸಿದ ಇಲಾಖೆಗೆ ಸಂದಾಯಮಾಡಿದ ಕುರಿತು ಪ್ರತಿ ತಿಂಗಳಿಗೊಮ್ಮೆ ಚಲನ್ ಪ್ರತಿಯನ್ನು ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ರಿಟರ್ನ್ ಪೈಲ್ ಮಾಡಿರುವ ಕುರಿತು ಸದರಿ ಹೊರಗುತ್ತಿಗೆಯಿಂದ ಪಡೆದ ಮೊತ್ತ ತಾಳೆಯಾಗುವಂತೆ ಸಲ್ಲಿಸುವಂತೆ ಸೂಚಿಸುವುದು. ಗುತ್ತಿಗೆ ಕಾರ್ಮಿಕ ಕಾಯ್ದೆ ಕನಿಷ್ಠ ವೇತನ ಬಗ್ಗೆ ವೇತನ ಪಾವತಿ ಕಾಯ್ದೆ ಹಾಗೂ ಬಾಲಕಾರ್ಮಿಕ ಕಾಯ್ದೆ ಬಗ್ಗೆ ಪಿ.ಪಿ.ಟಿ. ಮೂಲಕ ಎಲ್ಲಾ ಗುತ್ತಿಗೆ ಕಾರ್ಮಿಕರಿಗೆ ನೀಡಬೇಕಾದ ಶಾಸನಾತ್ಮಕ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಇ.ಪಿ.ಎಫ್. ಅಧಿಕಾರಿ ವಿಠ್ಠಲ ಅವರು ಕಾರ್ಮಿಕರಿಗೆ ಇ.ಪಿ.ಎಫ್. ನೋಂದಣೆ ಹಾಗೂ ಅದಕ್ಕೆ ಸಿಗುವ ಸೌಲಭ್ಯಗಳ ಕುರಿತು ಸ್ವ ವಿಸ್ತರವಾಗಿ ಮಾಹಿತಿಯನ್ನು ನೀಡಿದರು ಇ.ಎಸ್.ಐ. ಅಧಿಕಾರಿ ಅರುಣಕುಮಾರ ಇ.ಎಸ್.ಐ. ನೋಂದಾಯಿಸುವ ಗ್ಗೆ ಹಾಗೂ ಸೌಲಭ್ಯಗಳು ವಿವರಿಸಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತ್,ಡಿ.ಹೆಚ್.ಓ. ಸಮಾಜಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದರು.
ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ, ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಎಸ್. ಸುಂಬಡ, ಸಾಗತಿಸಿದರು. ಸಹಾಯಕ ಕಾರ್ಮಿಕ ಆಯುಕ್ತರಾದ ಅವಿನಾಶ ನಾಯ್ಕ ಅವರು ವಂದಿಸಿದರು