ಗುತ್ತಿಗೆದಾರ ಜೊತೆ ಇಇ ಶಾಮಿಲು ಕಾಲುವೆ ಕಳಪೆ- ರೈತ ಆಕ್ರೋಶ

ಗಬ್ಬೂರು.ಆ.೦೬- ದೇವದುರ್ಗ ತಾಲೂಕಿ ಗಬ್ಬೂರು ವ್ಯಾಪ್ತಿಗೆ ಬರುವ ಹಂಚಿನಾಳ ಮತ್ತು ಕೊಳೂರು ಸೀಮಾಂತರ ಸರ್ವೆ ನಂ. ೪೯ ರ ಜಮೀನಿನ ರೈತ ಬಾಲಯ್ಯ ನಾಯಕ ೧೬ನೇ ಉಪ ಕಾಲುವೆಯಲ್ಲಿ ೧೩ ನೇ ಲ್ಯಾಟ್ರಿನ್ ಸಂಪೂರ್ಣ ಕಳೆಪೆಯಾಗಿದೆ ಎಂದು ರೈತ ಆಕ್ರೋಶ ವ್ಯಕ್ತಪಡಿಸಿದರು.
ದೇವದುರ್ಗದ ಸಿರವಾರ ಕ್ರಾಸ್ ಬಳಿಯಿರುವ ಚಿಕ್ಕ ಹೊನ್ನಕುಣಿ ಕೃಷ್ಣ ಭಾಗ್ಯ ಜಲ ನಿಗಮದ ಅಧಿಕಾರಿಗಳಾದ ಇಇ ಪರಶುರಾಮ, ಜೆಇ ಅಶೋಕ ರೆಡ್ಡಿ ಪಾಟೀಲ್ ಮತ್ತು ಗುತ್ತೀಗೆದಾರರು ಸೇರಿಕೊಂಡು ಹಗಲು ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು.
ಕಾಲುವೆಗಳ ದುರಸ್ತಿ ಕಾಮಗಾರಿಗಳಲ್ಲಿ ನೀರಾವರಿ ಅಧಿಕಾರಿಗಳು ಮತ್ತು ಗುತ್ತೀಗೆದಾರರು ತಾರತಮ್ಯ ಮಾಡುತ್ತಿದ್ದಾರೆ ಎಂದು ಶಿವರಾಜ ಆರೋಪಿಸಿದರು. ಗಬ್ಬೂರು ಸಮೀಪದ ಹಂಚಿನಾಳ ಗ್ರಾಮದ ಬಳಿ ನಡೆಯುತ್ತಿರುವ ನಾರಾಯಣಪುರ ಬಲದಂಡೆ ಕಾಲುವೆಗೆ ಒಳಪಟ್ಟಿರುವ ದುರಸ್ತಿ ಕಾಮಗಾರಿ ಆಧುನೀಕರಣ ಕಾಮಗಾರಿಯನ್ನು ರೈತರಿಗೆ ಅನುಕೂಲವಾಗುವಂತೆ ದುರಸ್ತಿ ಮಾಡಿದ್ದಾರೆ.
ಆದರೆ ಹಂಚಿನಾಳ ಹಾಗೂ ಕೊಳೂರು ಸೀಮಾಂತರದಲ್ಲಿ ನಡೆಯುತ್ತಿರುವ ೧೬ ನೇ ಉಪ ಕಾಲುವೆ ೧೩ನೇ ಲ್ಯಾಟ್ರಿನ್ ದುರಸ್ತಿಯಲ್ಲಿ ಕಳೆಪೆ ಮಟ್ಟದ್ದಾಗಿದ್ದು, ಅದರಲ್ಲಿ ರೈತರ ಹೋಲ ಗದ್ದೆಗಳಿಗೆ ಹೋಗದ ರೀತಿಯಲ್ಲಿ ಅವೈಜ್ಞಾನಿಕವಾಗಿ ದುರಸ್ತಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾರಾಯಣಪುರ ಬಲದಂಡೆ ಕಾಲುವೆಗಳಿಗೆ ಒಳಪಡುವ ಸಾವಿರಾರು ಕೋಟಿ ಕಾಲುವೆಗಳ ದುರಸ್ತಿಗೆ ಸರ್ಕಾರ ೧,೪೬೬ಕೋಟಿ ಪ್ಯಾಕೇಜ್ ನೀಡಿದೆ.