ಗುತ್ತಿಗೆದಾರರ ನಿರ್ಲಕ್ಷ್ಯ:ಬೀಳುವ ಸ್ಥಿತಿಯಲ್ಲಿ ಶಾಲಾ ನಾಮಫಲಕ

ಮಧುಗಿರಿ, ಜು. ೩೦- ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಶಾಲೆಯ ನಾಮಫಲಕ ಕುಸಿದು ಬೀಳುವ ಆತಂಕ ಸೃಷ್ಟಿಯಾಗಿದೆ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಆರೋಪಿಸಿದ್ದಾರೆ.
ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಎಂ ಹೊಸಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಸಕರ ಅನುದಾನದಲ್ಲಿ ಗರಡಿ ಮನೆ ಮತ್ತು ರಂಗಮಂದಿರ ಕಾಮಗಾರಿ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಶಾಲೆಯ ನಾಮಫಲಕ ಗೋಡೆ ಕೆಡವಿದ್ದು ಶಾಲೆಯ ಶಿಕ್ಷಕರು ಹಾಗೂ ಗ್ರಾಮಸ್ಥರು ಸುಮಾರು ಬಾರಿ ತಿಳಿಸಿದರು ಯಾವುದೆ ಪ್ರಯೋಜನವಾಗಿಲ್ಲ. ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಇಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ.
ಈಗಾಗಲೇ ರಂಗಮಂದಿರ ಕಾಮಗಾರಿ ಹಸ್ತಾಂತರ ಮಾಡಿಲ್ಲ ಗೋಡೆಗಳು ಬಿರುಕು ಬಿದ್ದಿವೆ. ಸಿಮೆಂಟ್ ಕಿತ್ತು ಬರುತ್ತಿದೆ. ರಂಗಮಂದಿರ ಮುಂಭಾಗದಲ್ಲಿ ನೀರು ಕೊಳಚೆ ಚರಂಡಿಯಂತಾಗಿದೆ. ಇದರಿಂದ ಶಾಲಾ ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದೆ. ಗುತ್ತಿಗೆದಾರ ಕಾಮಗಾರಿ ಪೂರ್ಣಗೊಳಿಸದೆ ಎನ್.ಓ.ಸಿ ನೀಡುವಂತೆ ಒತ್ತಡ ಹೇರುತಿದ್ದಾನೆ ಎನ್ನಲಾಗಿದೆ.
ಗೋಡೆ ಕುಸಿದು ಅನಾಹುತ ಸಂಭವಿಸಿದರೆ ಹೊಣೆ ಯಾರು ಇಲ್ಲಿ ಯಾವುದೆ ಅನಾಹುತ ಸಂಭವಿಸಿದರೂ ೩ ಜನ ಗುತ್ತಿಗೆದಾರರೇ ನೇರ ಹೊಣೆಗಾರರಾಗಬೇಕು. ತುರ್ತಾಗಿ ಶಾಲೆಯ ನಾಮಫಲಕವಿರುವ ತಡೆಗೋಡೆ ದುರಸ್ಥಿಗೊಳಿಸದಿದ್ದರೆ ಗ್ರಾಮಸ್ಥರು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹೊಸಹಳ್ಳಿ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಹನುಮಂತರೆಡ್ಡಿ ಮಾತನಾಡಿ, ಕಾಮಗಾರಿ ಪೂರ್ಣಗೊಂಡಿಲ್ಲ. ನಿಮ್ಮ ಇಲಾಖೆಯ ಅನುದಾನ ಅಲ್ಲ ಇದು ನಾವು ತಂದಿರುವ ಅನುದಾನ ಎನ್ನುತಿದ್ದು ಎನ್.ಓ.ಸಿ ಕೊಡುವಂತೆ ಕೇಳುತಿದ್ದಾರೆ. ಈ ಬಗ್ಗೆ ನಮ್ಮ ಇಲಾಖೆ ಗಮನಕ್ಕೆ ತರಲಾಗುವುದು ಎಂದರು.
ಜೆಡಿಎಸ್ ಮುಖಂಡ ರಾಮಕೃಷ್ಣ ಮಾತನಾಡಿ, ಗುತ್ತಿಗೆದಾರರು ಕಾಮಗಾರಿಯನ್ನು ಅಪೂರ್ಣಗೊಳಿಸಿದ್ದಾರೆ. ಶಾಲೆಯ ನಾಮಫಲಕ ಹಾಳುಗೆಡವಿದ್ದು ಈ ಬಗ್ಗೆ ಫೋನ್ ಮಾಡಿದರೆ ಯಾವುದೆ ಸ್ಪಂದನೆ ಸಿಗುತ್ತಿಲ್ಲ ಎಂದು ದೂರಿದ್ದಾರೆ.