ಗುತ್ತಿಗೆದಾರರಿಗೆ ಬಾಕಿ ಹಣ ನೀಡಲು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ

ಸಂಜೆವಾಣಿ ವಾರ್ತೆ 

ಹರಿಹರ.ಮೇ.18 ; ಸಿವಿಲ್ ಗುತ್ತಿಗೆದಾರರ ಬಾಕಿ ಹಣ ನೀಡಬೇಕೆಂದು ಶ್ರೀ ಹರಿಹರೇಶ್ವರ  ಗುತ್ತಿಗೆದಾರರ ಸಂಘದಿಂದ    ಜಿಲ್ಲಾಧಿಕಾರಿ ಎಂವಿ ವೆಂಕಟೇಶ್ ಅವರಿಗೆ ಮನವಿ ನೀಡಲಾಯಿತು.ಹರಿಹರ ನಗರಸಭೆ ವ್ಯಾಪ್ತಿಗೆ ಒಳಪಡುವಂತಹ 31 ವಾರ್ಡುಗಳಲ್ಲಿ 15ನೇ ಹಣಕಾಸು ಹಾಗೂ ನಗರಸಭೆ ಅನುದಾನ ಅಡಿಯಲ್ಲಿ ಟೆಂಡರ್ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸುಮಾರು ತಿಂಗಳು ಕಳೆದರೂ ಇದುವರೆಗೂ ಗುತ್ತಿಗೆದಾರರಿಗೆ ಬಾಕಿ ಮೊತ್ತದ  ಹಣ  ನೀಡದೆ  ಸತಾಯಿಸುತ್ತಿರುವುದರಿಂದ ಗುತ್ತಿಗೆದಾರರು  ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದರು ಸಂಬಂಧಿಸಿದ ನಗರಸಭೆ ಅಧಿಕಾರಿಗಳು  ಕಾಳಜಿ ವಹಿಸುತ್ತಿಲ್ಲ ಹರಿಹರ ನಗರಸಭೆಯ ಗುತ್ತಿಗೆದಾರರು ಸಾಲ ಸೋಲ ಮಾಡಿಕೊಂಡು ರಸ್ತೆ ಚರಂಡಿ ಇತರ ಕಾಮಗಾರಿಗಳನ್ನು ನಿರ್ವಹಿಸಿಕೊಂಡು ಬಂದಿದ್ದು ಸರಿಯಾದ ಸಮಯಕ್ಕೆ ಕಾಮಗಾರಿ ಹಣ ಪಾವತಿ  ಮಾಡದೆ ಇದ್ದಲ್ಲಿ   ಸಾಲಗಾರರ ಕಾಟಕ್ಕೆ ಮಾನಸಿಕವಾಗಿ ಕುಗ್ಗಿ ನಮ್ಮ ಕುಟುಂಬಗಳು ಬೀದಿಗೆ ಬಂದಿದೆ ಸಾಕಷ್ಟು ಬಾರಿ ಬಾಕಿ ಮೊತ್ತದ ಹಣವನ್ನು ಬಿಡುಗಡೆಗೊಳಿಸಿ ಎಂದು ಮನವಿ ನೀಡಿದರು  ಇದುವರೆಗೂ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಹರಿಹರ ನಗರಸಭಾ ವ್ಯಾಪ್ತಿಗೆ ಒಳಪಟ್ಟ ವಿವಿಧ ವಾರ್ಡುಗಳಲ್ಲಿ 15ನೇ ಹಣಕಾಸು ಹಾಗೂ ನಗರಸಭೆ ಅನುದಾನ ಅಡಿಯಲ್ಲಿ ಕಾಮಗಾರಿಗಳ ಟೆಂಡರ್ ಸಲ್ಲಿಸಿ ಈಗಾಗಲೇ ಹಲವು ತಿಂಗಳು ಕಳೆದಿದ್ದರು ಇದುವರೆಗೂ ದರ ಅನುಮೋದನೆ ಸಿಕ್ಕಿರುವುದಿಲ್ಲ ಕೂಡಲೇ ದರ ಅನುಮೋದನೆ ಮಾಡಿ  ನೀಡುವಂತೆ ಹರಿಹರ ನಗರಸಭಾ ಪೌರಾಯುಕ್ತರಿಗೆ  ಸೂಚಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ವೇಳೆ ಜಿ ನಂಜಪ್ಪ. ಮಂಜುನಾಥ್ ಕೆಬಿ. ಜಗದೀಶ್ ಜೈ ಭೀಮ್ ನಗರ್. ರಾಘು ಹಣಗಿ. ಭಾಷಾ  ರಾಘವೇಂದ್ರ. ಪ್ರಭಾಕರ್. ಮಹೇಶ್. ಸದ್ದಾಂ. ಉಮೇಶ್. ಶ್ರೀ ಹರಿಹರೇಶ್ವರ ಗುತ್ತಿಗೆದಾರರ ಸಂಘದವರು ಇದ್ದರು.