ಗುಣಾತ್ಮಕ ಶೈಕ್ಷಣಿಕ ವರ್ಷಕ್ಕೆಮಕ್ಕಳಿಗೆ ಸ್ವಾಗತ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.31: ಪ್ರಸಕ್ತ 2023-24ನೇ ವರ್ಷವನ್ನು  ಗುಣಾತ್ಮಕ ಶೈಕ್ಷಣಿಕ ವರ್ಷ ಎಂದು ಶಿಕ್ಷಣ ಇಲಾಖೆ ಘೋಷಣೆ ಮಾಡಿದ್ದು ಇದರಿಂದಾಗಿ ವರ್ಷದ ಆರಂಭದ ದಿನವೇ ಮಕ್ಕಳಿಗೆ ಗುಲಾಬಿ ಹೂ,ಸಿಹಿ ಊಟ,ಹಾಲು,ಉಚಿತ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ವನ್ನು ನೀಡಿ,ತಳಿರು ತೋರಣಗಳಿಂದ ಸಿಂಗಾರಗೊಂಡ ಶಾಲೆಯೊಳಗೆ ವಿಶೇಷವಾಗಿ ಸ್ವಾಗತ ಕೋರಲಾಯಿತು ಇಂದು.
ಈ ದೃಶ್ಯ ಜಿಲ್ಲೆಯ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಕಂಡು ಬಂತು. ತಾಲ್ಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಶಾಲಾ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಶಾಲೆಯ ಮುಖ್ಯ ಗುರು ರವಿ ಚೇಳ್ಳಗುರ್ಕಿ.  ಈ ವರ್ಷ ಮಕ್ಕಳ ಗುಣಾತ್ಮಕ ಕಲಿಕೆಗೆ ಶಿಕ್ಷಕರ ಜೊತೆಗೆ ಷೋಷಕರು ಕೂಡ ಶ್ರಮವಹಿಸ ಬೇಕು ಎಂದು ಮನವಿ ಮಾಡಿದರು.
ಎಸ್. ಡಿ.ಎಂ.ಸಿ ಅಧ್ಯಕ್ಷ ದೊಡ್ಡ ಕುಮಾರ ಕನ್ನಡ ಭುವನೇಶ್ವರಿ ತಾಯಿಗೆ ಪೂಜೆ ನೆರವೇರಿಸಿದರೆ,
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮಲತ,  ತಾಯಿ ಭುವನೇಶ್ವರಿ  ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಊರಿನ ಮುಖಂಡರಾದ ಜಗಲಿ ದೇವರಾಜ ಅವರು ಮಕ್ಕಳಿಗೆ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ವಿತರಿಸಿದರು.
ಊರಿನ ಸುಂಕಪ್ಪ, ಗಂಗಾಧರ, ಶಿಕ್ಷಕರಾದ ಮುನಾವರ ಸುಲ್ತಾನ, ಬಸವರಾಜ, ದಿಲ್ಷಾದ್ ಬೇಗಂ, ಮೋದಿನ್ ಸಾಬ್,ಚನ್ನಮ್ಮ,ಸುಮತಿ, ಸುಧಾ,ವೈಶಾಲಿ, ಶ್ವೇತಾ, ಉಮ್ಮೆಹಾನಿ, ಶಶಮ್ಮ, ರಾಮಾಂಜಿನೇಯ,ಬಾಷ ಹಾಗೂ ಉಮೇಶ್ ಮುಂತಾದವರು ಉಪಸ್ಥಿತರಿದ್ದರು.