ಗುಣಾತ್ಮಕ ಶಿಕ್ಷಣಕ್ಕಾಗಿ ಶಿಕ್ಷಕರು ಪ್ರಯತ್ನಿಸಬೇಕು

ಚಿತ್ರದುರ್ಗ. ಜ.೨೦; ಮಕ್ಕಳ ಕಲಿಕೆಯಲ್ಲಿ ಶಿಕ್ಷಕರ ಪಾತ್ರ ಗಣನೀಯವಾದದ್ದು, ಅವರ ಶಿಕ್ಷಣದಲ್ಲಿ ಗುಣಾತ್ಮಕವಾದಂತ ಬದಲಾವಣೆ ತರಲು ಶಿಕ್ಷಕರು ಅವಿರತವಾಗಿ ಪ್ರಯತ್ನಿಸಬೇಕು, ಜಿಲ್ಲೆಯ ಫಲಿತಾಂಶ ರಾಜ್ಯದಲ್ಲಿ ಪ್ರಥಮ ಸ್ಥಾನಕ್ಕೆ ಬರುವಂತಹ ಪ್ರಯತ್ನಗಳಾಗಬೇಕು ಎಂದು ಬಿ ಇ ಓ ತಿಪ್ಪೇಸ್ವಾಮಿಯವರು ನುಡಿದರು.ಅವರು ರೋಟರಿ ಕ್ಲಬ್ ಚಿತ್ರದುರ್ಗ ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ವತಿಯಿಂದ ಆದಿಶೇಷ ರೋಟರಿ ಭವನ, ಮರುಳಪ್ಪ ಬಡಾವಣೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಮಾತನಾಡುತ್ತಿದ್ದರು.ಪರೀಕ್ಷಾ ಸಮಯ ಸಮೀಪಿಸುತ್ತಿರುವುದರಿಂದ ವಿದ್ಯಾರ್ಥಿಗಳನ್ನು ಉತ್ತಮ ಫಲಿತಾಂಶ ತರುವಂತೆ ತರಬೇತಿಗೊಳಿಸಬೇಕು. ಗುಣಾತ್ಮಕ ಶಿಕ್ಷಣ ಮತ್ತು ಗುಣಾತ್ಮಕ ಫಲಿತಾಂಶದ ಕಡೆಗೆ ನಮ್ಮ ಗಮನವಿರಬೇಕು ಎಂದು ಕರೆ ನೀಡಿದರು.ರೊಟೇರಿಯನ್ ಪಿ ಎಚ್ ಎಫ್ ವಿಶ್ವಜಿತ್ ಜಾದವ್ ಡಿ ಎಲ್ ಸಿ ಸಿ ಆರ್ ಐ ಡಿ 3160 ದಾವಣಗೆರೆ ಮಾತನಾಡುತ್ತಾ ಶಾಲೆಯಲ್ಲಿ ಎಷ್ಟೇ ಸೌಕರ್ಯಗಳಿದ್ದರೂ ಸಹ ಉತ್ತಮ ಶಿಕ್ಷಕರು ಇಲ್ಲದಿದ್ದರೆ ಕಲಿಕೆಯಲ್ಲಿ ಗುಣಾತ್ಮಕವಾದ ಬದಲಾವಣೆ ತರುವುದು ಕಷ್ಟಕರ, ಹಾಗಾಗಿ ತರಬೇತಿ ಹೊಂದಿದ ಶಿಕ್ಷಕರಿಗೆ ಹೆಚ್ಚು ಆದ್ಯತೆ ನೀಡಿದಷ್ಟು ಮಕ್ಕಳಲ್ಲಿ ಕಲಿಕೆ ಹೆಚ್ಚು ಆಗುವುದು ಎಂದರು.