ಗುಣಮುಖರಾದವರಿಗೆ ಪುಷ್ಪವೃಷ್ಠಿಯ ಬೀಳ್ಕೊಡುಗೆ

ಹೊನ್ನಾಳಿ.ಜೂ.೫ : ಪ್ರತಿನಿತ್ಯ ಕೊರೊನಾದಿಂದ ಸಂಭವಿಸುತ್ತಿದ್ದ ಸಾವು ನೋವು ನೋಡಿ ಬೇಸರವಾಗುತ್ತಿತ್ತು, ಆದರೇ ಇದೀಗ ಕೊರೊನಾದಿಂದ ಗುಣಮುರಾಗಿ ಹೋಗುತ್ತಿರುವವರನ್ನು ಕಂಡು ಸಂತೋಷವಾಗುತ್ತಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸಂತೋಷ ವ್ಯಕ್ತ ಪಡಿಸಿದರು.ತಾಲೂಕಿನ ಎಚ್.ಕಡದಕಟ್ಟೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿನ ಕೋವಿಡ್ ಕೇರ್ ಸೆಂಟರ್‌ನಿಂದ ಇಂದು ಗುಣಮುಖರಾದ 25 ಜನ ಸೋಂಕಿತರಿಗೆ ಪುಪ್ಪವೃಷ್ಠಿ ಸುರಿಸಿ ಆತ್ಮೀಯವಾಗಿ ಬೀಳ್ಕೋಟ್ಟು ಸುದ್ದಿಗಾರರೊಂದಿಗೆ ಮಾತನಾಡಿದರು.ತಾಲೂಕಿನ ಮಾದನಬಾವಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್‌ನಿಂದ 100 ಜನರು ಗುಣಮುರಾಗಿದ್ದು, ಅವರಿಗೆ ಸಂತೋಷದಿಂದ ಹೂ ಮಳೆ ಸುರಿಸಿ ಬೀಳ್ಕೋಟ್ಟು, ಗುಣಮುಖರಾಗಿ ಹೋದವರು ಗ್ರಾಮಗಳನ್ನು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವಂತೆ ಮನವಿ ಮಾಡಿದರು.ಪ್ರತಿನಿತ್ಯ ಅವಳಿ ತಾಲೂಕಿನಲ್ಲಿ ಕೊರೊನಾದಿಂದ ಉಂಟಾಗುತ್ತಿದ್ದ ಸಾವು ನೋವುಗಳನ್ನು ನೋಡಿ ಬೇಸರವಾಗುತ್ತಿತ್ತು, ಆದರೇ ಇದೀಗ ಇಷ್ಟು ಜನರು ಗುಣಮುಖರಾಗಿ ಮನೆಗಳಿಗೆ ತೆರಳುತ್ತಿರುವುದನ್ನು ನೋಡಿದರೆ ಸಂತೋಷವಾಗುತ್ತಿದೆ ಎಂದರು.ಕೊರೊನಾದ ಜೊತೆಗೆ ಬ್ಲಾಕ್ ಫಂಗಸ್ ಸೇರಿದಂತೆ ವಿವಿಧ ಕಾಯಿಲೆಗಳು ಬರುತ್ತಿದ್ದು ಜನರು ಜಾಗೃತರಾಗಿರುವಂತೆ ಮನವಿ ಮಾಡಿದ ಶಾಸಕರು, ಕೊರೊನಾ ಮೂರನೇ ಅಲೆಯನ್ನು ಎದುರಿಸಲು ಈಗಾಗಲೇ ಸಖಲ ರೀತಿಯಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.ಲಸಿಕಾ ಕೇಂದ್ರಕ್ಕೆ : ಅಂಬೇಡ್ಕರ್ ಭವನದಲ್ಲಿನ ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿದ ಶಾಸಕರು ಲಸಿಕೆಯ ಬಗ್ಗೆ ಮಾಹಿತಿ ಪಡೆದರು. ಪ್ರತಿಯೊಬ್ಬರಿಗೂ ಲಸಿಕೆ ಸಿಗಲಿದೆ ಎಂದ ಶಾಸಕರು,ಯಾರೂ ಕೂಡ ಭಯ ಪಡುವ ಅವಶ್ಯಕತೆ ಇಲ್ಲಾ ಎಂದರು. ಈಗಾಗಲೇ ಮುಖ್ಯಮಂತ್ರಿಗಳು ಲಸಿಕೆ ಪೂರೈಕೆ ಮಾಡಲು ಎಲ್ಲಾ ವ್ಯವಸ್ಥೆ ಮಾಡಿದ್ದು ಮುಂದಿನ ದಿನಗಳಲ್ಲಿ ಎಲ್ಲರಿಗೂ ಲಸಿಕೆ ದೊರಯಲಿದೆ ಎಂದರು.ಈ ಸಂದರ್ಭ ತಹಸೀಲ್ದಾರ್ ಬಸನಗೌಡ ಕೋಟೂರ, ಸಿಪಿಐ ದೇವರಾಜ್, ಎಸೈ ಬಸವನಗೌಡ ಬಿರಾದರ್, ವೈದ್ಯರಾದ ಗುರುರಾಜ್ ಸೇರಿದಂತೆ ಇಲಾಖೆಯ ಸಿಬ್ಬಂದಿಗಳಿದ್ದರು. Attachments area