ಗುಣಮಟ್ಟ ಶಿಕ್ಷಣದಿಂದ ಗ್ರಾಮೀಣ ಅಭಿವೃದ್ಧಿ: ಸ್ಥಾವರಮಠ

ವಾಡಿ:ಎ.18: ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಾದರೆ ಗ್ರಾಮಗಳು ಅಭಿವೃದ್ಧಿ ಆಗುತ್ತವೆ. ಇದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಲ್ಲಿ ಸಮುದಾಯದ ಎಲ್ಲಾ ವರ್ಗದ ಜನರು ಸಹಕರಿಸಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಸವರಾಜ ಸ್ಥಾವರಮಠ ಹೇಳಿದರು.

ಪಟ್ಟಣ ಸಮೀಪದ ಇಂಗಳಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಶಾಲಾ ಮೇಲುಸ್ತುವಾರಿ ಸಮಿತಿ ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾವೂರ ವಲಯ ಸಿಆರ್‍ಸಿ ಕವಿತಾ ಮಾತನಾಡಿ, ಶಾಲೆಯಲ್ಲಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಾಗಬೇಕಾದರೆ ಶಿಕ್ಷಕರ ಪಾತ್ರ ಎಷ್ಟೋ ಮುಖ್ಯ, ಅಷ್ಟೇ ಶಾಲಾ ಮೇಲುಸ್ತುವಾರಿ ಸಮಿತಿ ಜವಾಬ್ದಾರಿಯಾಗಿರುತ್ತದೆ. ಇದರಿಂದ ಸಮಿತಿ ಪಧಾದಿಕಾರಿಗಳು ಶಾಲಾ ಪರಿಸರ ಹಾಗೂ ಮಕ್ಕಳ ಬಗ್ಗೆ ಕಾಳಜಿವಹಿಸಬೇಕು. ಎಂದು ಸಲಹೆ ನೀಡಿದರು.

ಪಿಡಿಒ ರೇಷ್ಮಾ ಕೊತ್ವಾಲ, ಮುಖ್ಯಗುರು ಶಾಂತಮ್ಮಾ, ಡಾ.ಸಾಯಬಣ್ಣಾ ಗುಡುಬಾ, ಶಿಕ್ಷಕರಾದ ರೇವಣಸಿದ್ದಯ್ಯಾ ಸ್ವಾಮಿ, ನೀಲಾದೇವಿ, ಸರಸ್ವತಿ, ಜೈಶ್ರೀ, ಗುರುನಾಥ ಭಾಸ್ಕರ್‍ರಾವ, ಸಂಗನಗೌಡ, ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಶಕುಂತಲಾ ಪವಾರ್ ಇದ್ದರು. ಶಿಕ್ಷಕ ಬಾಲಾಜಿ ಉತ್ಕರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಎಸ್‍ಡಿಎಮ್‍ಸಿ ರಚನೆ: ಶ್ರೀಮಂತ ಶೇಷಣ್ಣ ತೆಳಗೇರಿ(ಅಧ್ಯಕ್ಷ), ಸೈದಮ್ಮ ಕುರಿ(ಉಪಾಧ್ಯಕ್ಷೆ), ಶಾಂತಪ್ಪ, ಭೀಮರಾಯ ತಳವಾರ, ಮಲ್ಲಿಕಾರ್ಜುನ, ಸುನೀತಾ ಪವಾರ್, ರಾಯಪ್ಪ ತೆಳಗೇರಿ, ಜ್ಯೋತಿ ದಂಡಗುಂಡಲ್ಕರ್, ಯಲ್ಲಪ್ಪ ಪೂಜಾರಿ, ಹಾಜಿ, ಇಂದ್ರಮ್ಮ, ನಾಗಮ್ಮ ನಾಟೀಕಾರ್, ಮೂನೀರ್‍ಪಾಷಾ, ಫಾತಿಮಾ, ಮಲ್ಲಿಕಾರ್ಜುನ, ಶಿವಕಾಂತಮ್ಮ, ಸುನೀತಾ, ಶಮಶೋದ್ದೀನ್ ಸದಸ್ಯರಾಗಿ ಆಯ್ಕೆಯಾದರು.