ಗುಣಮಟ್ಟ ಮೊದಲು ನಂತರ ವ್ಯವಹಾರ.. ದಿಲೀಪ್ ಪಾಲಿಸಿ

ಅವಕಾಶಗಳಿಗಾಗಿ ಕಾಯದೆ ಅವಕಾಶ ಸೃಷ್ಟಿಸಿಕೊಂಡು ಇತರರಿಗೆ ಅವಕಾಶ ನೀಡುವುದು ಸುಲಭದ ಮಾತಲ್ಲ.‌ ಆ ಕೆಲಸ ಮಾಡಿ‌ ಮಾದರಿಯಾಗಿದ್ದಾರೆ. ಕನ್ನಡ ಚಿತ್ರರಂಗ ಕಂಡ ಅಪರೂಪದ ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್ ರಾಜ್.

ಕಿರುತೆರೆಯಲ್ಲಿ ಸಂಫೂರ್ಣ ತೊಡಗಿಸಿಕೊಂಡಿರುವ ಬಹುಮುಖ‌ ಪ್ರತಿಭೆಯ ನಟ,‌ ಇದೀಗ “ಹಿಟ್ಲರ್‌ ಕಲ್ಯಾಣ”ಕ್ಕಾಗಿ ಸಿದ್ದತೆಯಲ್ಲಿದ್ದಾರೆ‌

ಅನುಭವಿ ಕಲಾವಿದೆ ವಿನಯ್ ಪ್ರಸಾದ್, ಹಿರಿಯ ನಿರ್ದೇಶಕ ಎಸ್.ನಾರಾಯಣ್, ಮನ್ ದೀಪ್ ರಾಯ್ , ನಾಗೇಂದ್ರ ಶಾ,ಸಿತಾರ,‌ ಶರತ್,‌ ಮೋಕ್ಷಿತಾ ಪೈ, ಮಾನಸಿ ಜೋಷಿ ಸೇರಿದಂತೆ ಹಿರಿ‌-ಕಿರಿ ಕಲಾವಿದರ ಸಂಗಮದಂತಿರುವ “ಪಾರು” ಧಾರಾವಾಹಿ 610 ಕ್ಕೂ ಅಧಿಕ‌ ಎಪಿಸೋಡ್ ಪೂರ್ಣಗೊಳಿಸಿ “ಪಾರುಪತ್ಯ “ಸಾಧಿಸಿ‌‌ ಮುನ್ನೆಡೆದಿದೆ. ಗುರುಪ್ರಸಾದ್ ನಿರ್ದೇಶನ ಮಾಡುತ್ತಿದ್ದಾರೆ

“ಪಾರು” ಕುರಿತು ಮಾಹಿತಿ ಹಂಚಿಕೊಂಡ‌ ದಿಲೀಪ್ ರಾಜ್, ಪಾರು ಚೆನ್ನಾಗಿ ಹೋಗ್ತಾ ಇದೆ.‌ಸ್ಪರ್ಧೆ ಜೊತೆಗೆ ಪ್ರೋಡಕ್ಷನ್ ಹೌಸ್ ನಿಗಧಿ ಮಾಡಿಕೊಂಡ ಗುಣಮಟ್ಟ ಬಿಟ್ಟುಕೊಡದೆ ಚಿತ್ರೀಕರಣ ಮಾಡಲಾಗಿದೆ. ಗುಣಮಟ್ಟಕ್ಕೆ ಮೊದಲ ಆದ್ಯತೆ

ನಂತರ ಬ್ಯುಸಿನೆಸ್, ನಮ್ಮ ಪ್ರೊಡಕ್ಷನ್ ನಲ್ಲಿ ನಾವು ಅದನ್ನೇ ನೋಡುತ್ತೇವೆ .ದುಡ್ಡು ಮಾಡಬೇಕು ಎನ್ನುವ ಕಾರಣಕ್ಕೆ ಮಾಡುವುದಿಲ್ಲ. ಹತ್ತು ದಿನ ತಡವಾಗಿ ದುಡ್ಡು ಬಂದರೂ ಪರವಾಗಿಲ್ಲ ಆದರೆ ಗುಣಮಟ್ಟದಲ್ಲಿ ರಾಜಿ ಇಲ್ಲ. ಪ್ರೊಡಕ್ಷನ್ ಹೌಸ್ ಹೆಸರು ಕೂಡ ಅಷ್ಟೇ ಮುಖ್ಯ. ಸುಮ್ಮನೆ ಮಾಡ್ತಾರೆ ಅನ್ನಿಸಿಕೊಳ್ಳಲು ಇಷ್ಟವಿಲ್ಲ.

ಕತೆಯನ್ನು ಜನ ಎಲ್ಲಿಯ ತನಕ ನೋಡ್ತಾರೆ ಅಲ್ಲಿಯ ತನಕ ಪಾರು ಬರುತ್ತೆ. ಇಷ್ಟೇ ಎಪಿಸೋಡು ಮಾಡಬೇಕು ಎನ್ನುವ ಯಾವುದೇ ಗುರಿ ಇಲ್ಲ.

ಪ್ರತಿ ಭಾರಿ ಕಥೆಯನ್ನು ಕುತೂಹಲ ಘಟಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನ ಮಾಡುತ್ತೇವೆ. ಅದಕ್ಕಾಗಿ ಇಡೀ ತಂಡ ಶ್ರಮಿಸುತ್ತದೆ

ಹೊಸಬರಿಗೆ ಅವಕಾಶ

ಹೊಸ ಕಲಾವಿದರಿಗೆ ಅವಕಾಶ ನೀಡುವುದು, ಅವರನ್ನು ಬಣ್ಣದ ಬದುಕಿಗೆ ಪರಿಚಯಿಸುವುದು ಖುಷಿಯ ವಿಷಯ. ಯಾರಾದರೂ ಹೊಸ ಕಲಾವಿದರನ್ನು ಪುಶ್ ಮಾಡಬೇಕು ಆ ಕೆಲಸ ನಾವು ಮಾಡುತ್ತಿದೇವೆ ಅಷ್ಟೇ ಎಂದರು ದಿಲೀಪ್ ರಾಜ್.

ಚಾನಲ್ ಟೀಮ್ , ಟಿಆರ್ ಪಿ, ಜನರ ಅಭಿಪ್ರಾಯ ಮೇಲೆ ಕಥೆ ಬದಲಾಗುತ್ತಿದೆ ಎಂದರು

ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೆಟ್‌ನಲ್ಲಿ‌ ಮುನ್ನೆಚ್ಚರಿಕೆ ಕ್ರಮ ಕೈಡಿದ್ದೇವೆ. ಒಂದು ದಿನಕ್ಕೆ ಒಂದು ಎಪಿಸೋಡ್ ಕನಿಷ್ಠ ಚಿತ್ರೀಕರಣ ಮಾಡಲಾಗುತ್ತಿದೆ 90 ಸಾವಿರದಿಂದ ಒಂದೂ ಲಕ್ಷ ವರೆಗೆ ವೆಚ್ಚವಾಗಲಿದೆ ಎಂದರು.

ಕಿರುತೆರೆಯಲ್ಲಿ ಬ್ಯುಸಿ

ಕಿರುತೆರೆಯ ಮೂಲಕ ಬಣ್ಣದ ಬದುಕಿನ ಯಾನ ಆರಂಭಿಸಿದ ದಿಲೀಪ್ ರಾಜ್ ಇದೀಗ ಕಿರುತೆರೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.

” ಜಸ್ಟ್ ಮಾತ್ ಮಾತಲ್ಲಿ,” ಮೂಲಕ ಆರಂಭವಾದ ನಿರ್ಮಾಣ “ವಿದ್ಯಾವಿನಾಯಕ” ,”ರಾಧಾ ಕಲ್ಯಾಣ”, “ಪಾರು” , ಇದೀಗ ಹಿಟ್ಲರ್ ಕಲ್ಯಾಣ ತನಕ‌ ಬಂದು‌‌ ನಿಂತಿದೆ.

ಸಿನಿಮಾ ಮಾಡಬಾರದು ಅಂತ ಏನಿಲ್ಲಾ ತುಂಬಾ ಸೆಲೆಕ್ಟೀವ್‌ . ಇದುವರೆಗೆ ಬಂದಿರುವುದೆಲ್ಲಾ ಚೆನ್ನಾಗಿರುವುದು ಬಂದಿದೆ.ನಾರ್ಮಲ್ ಆಗಿ ಮಾಡಬೇಕು ಎನ್ನುವ ಕಾರಣಕ್ಕೆ ಸಿನಿಮಾದಲ್ಲಿ ಮಾಡುವುದಿಲ್ಲ ಎಂದರು ದಿಲೀಪ್.

ಕೆಲಸ ಹಂಚಿಕೊಂಡಿದ್ದೇವೆ

“ನಮ್ಮ ಪ್ರೊಡಕ್ಷನ್ ನಲ್ಲಿಯ ಕೆಲಸವನ್ನು ಪತ್ನಿ ಮತ್ತು ನಾನು ಹಂಚಿಕೊಂಡಿದ್ದೇವೆ.ಪ್ರೊಡಕ್ಷನ್ ಡಿಸೈನಿಂಗ್, ಖರ್ಚು ವೆಚ್ಚವನ್ನು,ಮನೆಯಾಕೆ ನೋಡಿಕೊಳ್ಳುತ್ತಾರೆ. ಕ್ರಿಯೆಟೀವ್, ಮೇಕಿಂಗ್ ತಾರಾಗಣ ಆಯ್ಕೆ‌‌ ನಾನು ನೋಡಿಕೊಳ್ಳುತ್ತೇನೆ. ಮಿಕ್ಕಿದಲ್ಲಾ ಹೆಂಡತಿಯೇ ನೋಡಿಕೊಳ್ಳುತ್ತಾರೆ ಅವರಿಗೆ ಅಗತ್ಯ‌ವಿದ್ದರೆ ಮಾತ್ರ ಸಲಹೆ ಕೊಡುವುದು ಮಾಡುತ್ತೇನೆ.”

– ದಿಲೀಪ್ ರಾಜ್. ನಿರ್ಮಾಪಕ,‌ನಿರ್ದೇಶಕ