ಗುಣಮಟ್ಟ,ಮೌಲ್ಯಾಧರಿತ ಶಿಕ್ಷಣ ನೀಡುವಲ್ಲಿ ನೆಹಮಿಯಾ ಶಾಲೆ ಹೆಸರುವಾಸಿ:ಡಾ. ನಾಗರಾಜ

ಬೀದರ: ಫೆ. 19ಃ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ನೆಹಮಿಯಾ ಶಿಕ್ಷಣ ಸಂಸ್ಥೆಯಡಿಯಲ್ಲಿ ಬೀದರ ನಗರದ ನೆಹಮಿಯಾ ಮೆಮೂರಿಯಲ್ ನರ್ಸರಿ ಹಾಗೂ ಪ್ರೌಢ ಶಾಲೆಯ ಸಭಾಂಗಣದಲ್ಲಿ ಕಳೆದ ರಾತ್ರಿ 2024ನೇ ಸಾಲಿನ ವಾರ್ಷಿಕೋತ್ಸವ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಸಂಭ್ರಮದಿಂದ ನಡೆದವು.
ನೆಹಮಿಯಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಮನಮೋಹನ ನೆಹಮಿಯಾ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲೆಯ ಹೆಸರಾಂತ ಇ.ಎನ್.ಟಿ. ತಜ್ಞ ವೈದ್ಯರಾದ ಡಾ. ವಿ.ವಿ. ನಾಗರಾಜ ಅವರು, ನಗರದಲ್ಲಿ ಕಳೆದ 25-30 ವರ್ಷಗಳಿಂದ ನೆಹಮಿಯಾ ಮೆಮೂರಿಯಲ್ ನರ್ಸರಿ ಹಾಗೂ ಪ್ರೌಢ ಇಂಗ್ಲೀಷ ಮಾಧ್ಯಮ ಶಾಲೆಯ ಶಿಕ್ಷಕರು ಗುಣಮಟ್ಟದ ಶಿಕ್ಷಣದ ಜೊತೆ ಜೊತೆಗೆ ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ಈ ಶಾಲೆ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದೆ ಎಂದು ಹೇಳಿದರು.
ಪಾಲಕರು ಮಕ್ಕಳಿಗೆ ಚೆನ್ನಾಗಿ ಓದಿಸಬೇಕು. ಮಕ್ಕಳು ಅಂಕಗಳಿಸುವ ಯಂತ್ರಗಳಲ್ಲ ಎಂಬುವುದು ಪಾಲಕರು ಅರ್ಥಮಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಜೀವನದಲ್ಲಿ ಉನ್ನತ ಹುದ್ದೆ ಪಡೆಯುವ ಗುರಿಯೊಂದಿಗೆ ಮಕ್ಕಳು ಉತ್ತಮ ರೀತಿಯಿಂದ ಓದಬೇಕು. ದೊಡ್ಡ ದೊಡ್ಡ ಕನಸು ಕಾಣುವ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಶಗವಹಿಸಿ ಮಾತನಾಡಿದ ವಾಸು ಆಸ್ಪತ್ರೆಯ ಡಾ. ಶಿಲ್ಪಾ ಬುಳ್ಳಾ ಅವರು, ವಿದ್ಯಾರ್ಥಿಗಳು ಓದಿನೊಂದಿಗೆ ಶಾರೀರಿಕ ಹಾಗೂ ಮಾನಸಿಕವಾಗಿ ಸದೃಢರಾಗಬೇಕು. ಇದರಿಂದ ಮಕ್ಕಳ ಬುದ್ಧಿಮಟ್ಟದ ಹೆಚ್ಚುತ್ತದೆ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಮಿಷೆಲ್ ನೆಹಮಿಯಾ ಅವರು ಮಾತನಾಡುತ್ತ, ನೆಹಮಿಯಾ ಶಿಕ್ಷಣ ಸಂಸ್ಥೆಯಡಿಯಲ್ಲಿ ಇಂಗ್ಲೀಷ ಮಾಧ್ಯಮ ನರ್ಸರಿಯಿಂದ 10ನೇ ತರಗತಿಯವರೆಗೆ ನಡೆಯುತ್ತಿರುವ ಶಾಲೆಯಲ್ಲಿ 1,800 ಕ್ಕೂ ಅಧಿಕ ವಿದ್ಯಾರ್ಥಿಗಳು ಓದುತಿದ್ದಾರೆ. ಈ ಶಾಲೆಯಲ್ಲಿ ಓದಿದ ಹಳೆ ವಿದ್ಯಾರ್ಥಿಗಳು ದೇಶ-ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತ, ದೇಶ, ಜಿಲ್ಲೆಯ ಕೀರ್ತಿ ಪತಾಕೆ ಹಾರಿಸುತ್ತಿದ್ದಾರೆ ಎಂದು ಹೇಳಿದರು.
ನಂತರ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಕನ್ನಡ, ಹಿಂದಿ ಚಲನಚಿತ್ರಗಳ ಪ್ರಸಿದ್ಧ ಹಾಡುಗಳ ಸಂಗೀತದ ತಾಳಕ್ಕೆ ತಕ್ಕಂತೆ ಕುಣಿದು ಸಭಿಕರ ಮನಗೆದ್ದರು.
ಕಮಠಾಣಾ ಗ್ರಾಮದ ನರ್ಸರಿ ಶಾಲೆಯ ಪುಟಾಣಿ ಮಕ್ಕಳ ನೃತ್ಯ ನೋಡುಗರ ಕಣ್ಮಣ ಸೆಳೆಯಿತು.
ಶಿವರಾಂ ರಾಠೋಡರ ನೇತೃತ್ವದಲ್ಲಿ ಶಾಲಾ ಮಕ್ಕಳ ಕರಾಟೆ ಪ್ರದರ್ಶನ ಜನಮನ ಗೆದ್ದಿತ್ತು.
ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಇಂದಿರಾ ನೆಹಮಿಯಾ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಉದ್ಯಮಿ ಪ್ರವೀಣ ಗೋಯಲ್, ಶ್ರೀಮತಿ ಪೂನಂ ಗೋಯಲ್. ಸ್ವರೂಪ ಸುಂದಾಳೆ, ಕುಮಾರಿ ಗಿಯಾಸ್ನಾ ಅವರು ಸೇರಿದಂತೆ ಶಾಲಾ ಮಕ್ಕಳು, ಮಕ್ಕಳ ಪಾಲಕರು, ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಇದ್ದರು.
ಪ್ರಾರಂಭದಲ್ಲಿ ರೇವರೇಂಡ ತುಕಾರಾಮ ಪ್ರಾರ್ಥನೆ ಸಲ್ಲಿಸಿದರು. ಶಾಲಾ ಮಕ್ಕಳು ಸ್ವಾಗತ ಗೀತೆ ಹಾಡಿದರು. ಶಾಲೆಯ ಸಹ ಶಿಕ್ಷಕರಾದ ಶೃತಿ ಗಣೂರೆ ನಿರೂಪಿಸಿದರೆ, ಕೊನೆಯಲ್ಲಿ ದೀಪಾ ವಂದಿಸಿದರು.
ಶಾಲಾ ಮಕ್ಕಳು ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು.