ಗುಣಮಟ್ಟದ ಹಾಲನ್ನು ಪೂರೈಸಿ, ಸಂಘಗಳ ಅಭಿವೃದ್ಧಿಗೆ ಸಹಕರಿಸಿ

ಹನೂರು, ಡಿ.23: ಉತ್ಪಾದಕರು ಗುಣಮಟ್ಟದ ಹಾಲನ್ನು ಪೂರೈಸಿ ಸಹಕಾರ ಸಂಘಗಳ ಅಭಿವೃದ್ಧಿಗೆ ಸಹಕರಿಸುವುದರ ಜೊತೆಗೆ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದು ಚಾ.ಜಿಲ್ಲಾ ಹಾಲು ಒಕ್ಕೂಟ ವಿಸ್ತರಣಾಧಿಕಾರಿ ವೆಂಕಟೇಶ್ ತಿಸಿದರು.
ಹನೂರು ತಾಲ್ಲೂಕಿನ ನಾಗನತ್ತ ಗ್ರಾಮದಲ್ಲಿ ನಾಗನತ್ತ ಕ್ರಾಸ್ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ. ವತಿಯಿಂದ ಆಯೋಜಿಸಿದ್ದ 2019-20ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಕೃಷಿ ಚಟುವಟಿಕೆ ಜೊತೆಗೆ ಹೈನುಗಾರಿಕೆಯ ಕಸಬನ್ನು ಮಾಡಲು ರೈತರು ಮುಂದಾಗಬೇಕು. ಸೀಲ್ ಕ್ಯಾನ್ ಬಳಕೆ ಮಾಡಿ ಡೈರಿಗೆ ಹಾಲನ್ನು ಪೂರೈಸಬೇಕು ಇದರಿಂದ ಬ್ಯಾಕ್ಟೀರಿಯಾ ತಡೆಗಟ್ಟಲು ಅನುಕೂಲವಾಗುತ್ತದೆ. ನಿಮ್ಮೆಲ್ಲ ಸಹಕಾರದಿಂದ 1.50 ಕೋಟಿ ಹಣಬಂದಿದ್ದು ಉತ್ತಮವಾಗಿ ಸಂಘ ಸಾಗುತ್ತಿದೆ. ಹಾಗಾಗಿ ಗುಣಮಟ್ಟದ ಹಾಲು ಪೂರೈಸುತ್ತ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಜಯಶೀಲ, ನಿರ್ದೇಶಕರಾದ ರಾಜಮ್ಮ, ಜಯಶೀಲ, ಲೀಲಾವತಿ, ರಾಜಮಣಿ, ಶಿವರುದ್ರಮ್ಮ, ಕೆಂಪಮ್ಮ, ನಾಗಮ್ಮ, ಹೊನ್ನಪ್ಪ, ಪ್ರದೀಪ್ ಇದ್ದರು.