
ವಿಜಯಪುರ:ಆ.12: ದುಬಾರಿ ಶಿಕ್ಷಣದ ಇಂದಿನ ದಿನಮಾನಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ದಿಶೆಯಲ್ಲಿ ಹರಿಪ್ರೀಯ ಡೆವಲಪಮೆಂಟ ಅಸೋಶಿಯೆಶನ್ ವತಿಯಿಂದ ಇಲ್ಲಿನ ಉಪ್ಪಲಿ ಬುರಜ ಹತ್ತಿರವಿರುವ ಹನಿ ಕಿಡ್ಜ ಶಾಲೆಯ ಧ್ಯೇಯೊದ್ದೆಶ ಶ್ಲಾಘನೀಯವಾಗಿದೆ ಎಂದು ಸಂಜೀವ ಜೋಶಿ ಹೇಳಿದರು.
ಅವರು ದಿ. 9 ರಂದು ಹರಿಪ್ರೀಯಾ ಅಸೋಶಿಯೆಶನ್ ನ 8 ವಾರ್ಷಿಕ ಮಹಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ ಎಂಟು ವರ್ಷಗಳಿಂದ ಶೈಕ್ಷಣೀಕ ಕಾರ್ಯ ಜತೆ ಜತೆಗೆ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಡ ವಿದ್ಯಾರ್ಥಗಳಿಗೆ ಉಚಿತ ಶೈಕ್ಷಣೀಕ ಪರಿಕರಗಳನ್ನು ಮತ್ತು ಸ್ಕಾಲರ್ಶಿಪ್ ನೀಡುವದು ಸೇರಿದಂತೆ ರಕ್ತದಾನ, ನೇತ್ರದಾನ ಶಿಬಿರ, ಗ್ರಾಮೀಣ ಭಾಗದಲ್ಲಿ ಅನೇಕ ಜನಪರ ಚಟುವಟಿಕೆಗಳನ್ನು ಸಂಸ್ಥೆಯ ವತಿಯಿಂದ ನಡೆಸುವ ಕಾರ್ಯ ನಿಜಕ್ಕೂ ಮೆಚ್ಚತಕ್ಕದಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮÀುುಖ್ಯ ಅತಿಥಿಗಳಾಗಿ ಮಾರುತಿ ಸಾಲಗುಂಡಿ ಆಗಮಿಸಿದ್ದರು. ಅಧ್ಯಕ್ಷತಯನ್ನು ಸಂಸ್ಥೆಯ ಅಧ್ಯಕ್ಷ ಸಚಿನ ಎಚ್ ಹನಗಂಡಿ ವಹಿಸಿದ್ದರು. ಆನಂದ ಹೆಬ್ಬಿ, ಪ್ರಾಣೇಶ ಕುಲಕರ್ಣಿ, ರಾಜು ಕೊಂಡಗೂಳಿ, ಆರ್. ಟಿ. ಪಾಟೀಲ, ಶ್ರೀ ಮತಿ ಸಹನಾ ದೇಶಪಾಂಡೆ, ಶ್ರೀಮತಿ ಸಹನಾ ಹನಗಂಡಿ, ಶ್ರೀ ಮತಿ ವಿನೋದಾ ಜೋಶಿ, ಶ್ರೀ ಮತಿ ಆಫ್ರಿನ್ ತಾಳಿಕೋಟಿ, ವಿಜಯಲಕ್ಷ್ಮೀ ಕೊಂಡಗೂಳಿ ಇನ್ನಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಲಾ ಸಿಬ್ಬಂದಿಗಳಾದ ವಿಲಾಸ ದೇಸಾಯಿ, ಶ್ರೀ ಮತಿ ರೇಷ್ಮಾ ಲಮಾಣಿ, ದೀಪಾಲಿ ಪವಾರ, ಶ್ರೀ ಮತಿ ವೀಣಾ ಮಹಿಂದ್ರಕರ, ಶ್ರೀ ಮತಿ ಸಾವಿತ್ರಿ ಮಹಿಂದ್ರಕರ, ಸುಷ್ಮಿತಾ ಮಹಿಂದ್ರಕರ, ಮಂಜುನಾಥ, ಶ್ರೀ ಮತಿ ಮಮ್ತಾಜ ಗಾಸಮಡ್ಡಿ, ವಿಕ್ಕಿ ನಾಗಠಾಣ ಅವರುಗಳನ್ನು ಸನ್ಮಾನಿಸಲಾಯಿತು.