ಗುಣಮಟ್ಟದ ಶಿಕ್ಷಣ ಶಿಕ್ಷಕರ ಜವಾಬ್ದಾರಿ-ಡಾ.ಮಾರುತಿ

ಗಬ್ಬೂರು.ಜು.೨೫- ಸರಕಾರಿ ಶಾಲೆ-ಕಾಲೇಜುಗಳಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಿಸುವುದರ ಜೊತೆಗೆ ಮಕ್ಕಳ ಆಕರ್ಷಣಾ ಕೇಂದ್ರವನ್ನಾಗಿಸುವ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದು ಸಹಾಯಕ ಪ್ರಾಧ್ಯಾಪಕರಾದ ಡಾ.ಮಾರುತಿ ನಾಯಕ ಮಲದಕಲ್ ಹೇಳಿದರು.
ಗೆಳೆಯರ ಬಳಗ ಮಲದಕಲ್ ಹಾಗೂ ಜ್ಞಾನವೃಕ್ಷ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ ದೇವದುರ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ೭೫ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ನಿಮಿತ್ಯ ದೇವದುರ್ಗ ತಾಲೂಕಿನ ಎಲ್ಲಾ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಕುರಿತಾದ ವಿಶೇಷ ಕಾರ್ಯಾಗಾರ ಭಾನುವಾರ ದೇವದುರ್ಗದ ಎಸ್.ಟಿ. ಬಾಲಕಿಯರ ವಸತಿ ನಿಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಾಗಾರವನ್ನು ಸಹಾಯಕ ಪ್ರಾಧ್ಯಾಪಕರಾದ ಡಾ.ಮಾರುತಿ ಕುಮಾರ್ ಮಲದಕಲ್ ರವರು ಉದ್ಘಾಟಿಸಿ ಮಾತನಾಡಿದ ರವರು, ವಿದ್ಯಾರ್ಥಿನಿಯರು ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನ ಮಾಡಿ ಒಳ್ಳೆಯ ಹುದ್ದೆ ಪಡೆದು ಸಮಾಜದಲ್ಲಿ ಸ್ವಾವಲಂಬಿಯಾಗಿ ಬದುಕಬೇಕೆಂಬ ಹಂಬಲವನ್ನು ವ್ಯಕ್ತಪಡಿಸಿದರು.
ಕಾರ್ಯಗಾರದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದೇವದುರ್ಗ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕ ಅಧಿಕಾರಿಯ ನರಸಿಂಹ ನಾಯಕರು ಮಾತನಾಡುತ್ತಾ ವಿದ್ಯಾರ್ಥಿನಿಯರು ಈ ಕಾರ್ಯಾಗಾರದ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು. ಕಾರ್ಯಕ್ರಮದ ಇನ್ನೊಬ್ಬ ಮುಖ್ಯ ಅತಿಥಿಯಾದ ಮಹಾಲಿಂಗಪ್ಪ ತಾಲೂಕ ಅಧಿಕಾರಿಗಳು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮಾನ್ವಿಯವರು ಮಾತನಾಡಿ ವಿದ್ಯಾರ್ಥಿಗಳು ಈಗಿನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಆರಂಭಿಸಿ ಒಳ್ಳೆಯ ಹುದ್ದೆಯನ್ನು ಪಡೆಯಬೇಕೆಂದು ತಿಳಿಸಿದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ರಮೇಶ್ ಮ್ಯಾಗೇರಿ , ಗಣಿತ ಶಿಕ್ಷಕರು ಮೌಲಾನ ಆಜಾದ್ ಆಂಗ್ಲ ಶಾಲೆ ಲಿಂಗಸಗೂರು ರವರು ವಿದ್ಯಾರ್ಥಿನಿಯರಿಗೆ ಗಣಿತ ಮತ್ತು ಮಾನಸಿಕ ಸಾಮರ್ಥ್ಯದ ವಿಷಯಗಳನ್ನು ತಿಳಿಸಿಕೊಟ್ಟರು ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಗಳಾದ ಶರಣು ಪಾಟೀಲ್ ಹೇರೂರು , ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗೂಗಲ್ ರವರು ಇತಿಹಾಸ ಅರ್ಥಶಾಸ್ತ್ರ ವಿಷಯಗಳನ್ನ ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ವಸತಿ ನಿಲಯದ ಮೇಲ್ವಿಚಾರದ ಕು. ವಿಜಯಲಕ್ಷ್ಮಿ ಮೇಡಂ ರವರು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಅಗತ್ಯತೆಯನ್ನು ವಿವರಿಸಿದರು.. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಕೆ ವಿನೋದ್ ಕುಮಾರ್ ನಾಯಕ್, ನಾಗರಾಜ್ ಪೂಜಾರಿ ಮಾನಸಗಲ್, ವಸತಿ ನಿಲಯಗಳ ಮೇಲ್ವಿಚಾರಕರಾದ ವಿಜಯಲಕ್ಷ್ಮಿ, ಬಸವರಾಜ್ ಬಿರಾದರ್, ಪತ್ರಕರ್ತರಾದ ಗುರು ಇಂಗಳದಾಳ, ಮಲದಕಲ್ ಗೆಳೆಯರ ಬಳಗದ ಎಚ್‌ಎಲ್ ಬಾಲಯ್ಯ ನಾಯಕ್ ಸೇರಿದಂತೆ ವಸತಿ ನಿಲಯಗಳ ವಿದ್ಯಾರ್ಥಿನಿಯರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.