ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರೆಯಲಿ

ಸಂಜೆವಾಣಿ ವಾರ್ತೆ
ಸಂಡೂರು : ಜೂ:23- ಬಡತನದ ನೋವಿನಲ್ಲಿ ಬೆಂದು ಬಸವಳಿದ ವಿದ್ಯಾರ್ಥಿಗಳಿಗೆ ಮಾತ್ರ ತಾಪತ್ರೆಯಗಳನ್ನು ಎದುರಿಸಲು ಸಾಧ್ಯ. ಬಡವರ ಮಕ್ಕಳಿಗೂ ಶ್ರೀಮತರ ಮಕ್ಕಳಿಗೂ ಅಜಾಗಜಾಂತರ ವ್ಯತ್ಯಾಸವಿದ್ದು, ಬಡವರ ಮಕ್ಕಳು ತಾಪತ್ರೆಯದ ನಡುವೆಯೂ ಶಿಕ್ಷಣ ಕಲಿಯಲು ಮುಂಚುಣಿಯಲ್ಲಿರಲು ಸಾಧ್ಯ. ಯಾವ ವಿದ್ಯಾರ್ಥಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಾರೋ ಅಂತಹ ಮಕ್ಕಳು ಉಜ್ವಲ್ ಭವಿಷ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಎಲ್ಲ ರಂಗಗಳಲ್ಲಿ ಮುಂಚಿಣಿಯಲ್ಲಿದ್ದು ಮಹಿಳೆಯರೇ ಶಿಕ್ಷಣದಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ ಎಂದು  ಸಂಜೆವಾಣಿ ವರದಿಗಾರ ಅರಳಿ ಕುಮಾರಸ್ವಾಮಿಯವರು ತಿಳಿಸಿದರು.
ಅವರು ಪಟ್ಟಣದ ಎಲ್.ಬಿ. ಕಾಲೋನಿಯ 11ನೇ ವಾರ್ಡಿನ ಸ್ಕಂದ ಕಂಪ್ಯೂಟರ್‍ನಲ್ಲಿ ಶ್ರೀಶೈಲ ವಿದ್ಯಾಕೇಂದ್ರದ ವಿದ್ಯಾರ್ಥಿನಿಯರಾದ ಎಂ.ಎಲ್. ರಶೀತ ಕೊಡಗು 95.66, ಭಾವನ ಗೊಂದಲಿಗ 84.8 ಶೇಕಡವಾರು ಅಂಕಗಳನ್ನು ಪಡೆದ ವಿದ್ಯಾರ್ಥಿನಿಯರಿಗೆ ಸನ್ಮಾನ ಮಾಡಿದ ಸಂದರ್ಭದಲ್ಲಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು ಅವರು ಮುಂದುವರೆದು ತಂದೆ – ತಾಯಿ ಗುರುಹಿರಿಯರನ್ನು ಗೌರವಿಸಿ ಅವರ ಮಾರ್ಗದರ್ಶನದಂತೆ ನಡೆದರೆ ವಿದ್ಯಾರ್ಥಿಗಳ ಬದುಕಿನ ಜೀವನ ಪ್ರಗತಿಯಲ್ಲಿರಲು ಸಾಧ್ಯ ಸ್ಕಂದ ಸಿರಿ ಕಂಪ್ಯೂಟರ್, ಶ್ರೀಶೈಲೇಶ್ವರ ವಿದ್ಯಾಕೇಂದ್ರ ಆಡಳಿತ ಮಂಡಳಿಯವರು ಬಡ ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚು ಅಂಕ ಗಳಿಸಿದವರಿಗೆ ಉಚಿತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಅದರಂತೆ ಸ್ಕಂದ ಕಂಪ್ಯೂಟರ್ ರವರು ಅಂಗವಿಕಲ ಮಕ್ಕಳಿಗೂ ಸಹ ಹೆಚ್ಚಿನ ಮಟ್ಟದಲ್ಲಿ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಸ್ಕಂದ ಕಂಪ್ಯೂಟರ್ ವ್ಯವಸ್ಥಾಪಕ ದರೂರು ವಿಶ್ವನಾಥ ಗೌಡ್ರು ಮಾತನಾಡಿ, ವಿದ್ಯಾರ್ಥಿಗಳು ದೇವರ ಮೇಲೆ ನಂಬಿಕೆ ಇಟ್ಟು ಪರೀಕ್ಷೆ ಬರೆಯಲು ಹೋದರೆ ಉತ್ತೀರ್ಣರಾಗಲು ಸಾಧ್ಯವೇ ಇಲ್ಲ. ಅರಿವು ಎನ್ನುವುದು ಗುರುವಿನಂದ ಬರಲು ಸಾದ್ಯ ನಮ್ಮ ಸಸತ ಪ್ರಯತ್ನವೇ ಸಾಧನೆಗೆ ಶ್ರೀರಕ್ಷೆ ವಿದ್ಯಾರ್ಥಿಗಳ ಜೀವನ ಬಂಗಾರ ಮಯ. ದೇವರ ಕೊಟ್ಟ ಕೊಡುಗೆಯಿಂದ ಪರಿಶ್ರಮದಿಂದ ಯಶಸ್ಸು ಸಿಗಲು ಸಾಧ್ಯ ದೇವರ ಮೇಲೆ ನಂಬಿಕೆ ಮುಖ್ಯ ಆದರೆ ನಮ್ಮ ಫಲ ಪ್ರಯತ್ನದಿಂದ ಯಶಸ್ಸನ್ನು ಕಾಡಲು ಸಾಧ್ಯ ಎಂದು ತಿಳಿಸಿದರು.
ಬಸವ ಭಾರತಿ ಶಾಲೆ ಶಿಕ್ಷಕ ಅಮರ ಮಾತನಾಡಿ, ವಿದ್ಯಾರ್ಥಿಗಳು ಗುಣ ಮಟ್ಟದ ಶಿಕ್ಷಣ ಕಲಿಯಲು ಇಂತಹ ಕಾರ್ಯಕ್ರಮಗಳು ಪ್ರಮುಖ ಮನುಷ್ಯನ ಜೀವನಕ್ಕೆ ಕೌಶಲ್ಯ ಮುಖ್ಯ ಇಬ್ಬರು ಸನ್ಮಾನಿತರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ವಿಶ್ವನಾಥಗೌಡರ ಧರ್ಮಪತ್ನಿ ಸುಜಾತಮ್ಮ ವಿದ್ಯಾರ್ಥಿನಿಯರನ್ನು ಸನ್ಮಾನಿಸಿದರು ಕಂಪ್ಯೂಟರ್ ಸಂಸ್ಥೆಯ ಶಿಕ್ಷಕಿ ರಶ್ಮೀ ಪ್ರಾರ್ಥಿಸಿ, ಸ್ವಾಗತಿಸಿ, ನಿರೂಪಿಸಿದರೆ ರಜಿಯಾ ಬೇಗಂ ವಂದಿಸಿದರು, ಪತ್ರ ಬರಹಗಾರ ಶಫೀ ಉಪಸ್ಥಿತರಿದ್ದರು.

Attachments area