ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಡಯಟ್ ಪಾತ್ರ ಮುಖ್ಯ

????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಸಂಜೆವಾಣಿ ವಾರ್ತೆ

ಚಿತ್ರದುರ್ಗ.ಮಾ.೧೩: ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಡಯಟ್ ಪಾತ್ರ ಮುಖ್ಯವಾಗಿದೆ ಎಂದು ಡಿ.ಎಸ್.ಇ.ಆರ್.ಟಿ ನಿರ್ದೇಶಕಿ ವಿ.ಸುಮಂಗಲಾ ಹೇಳಿದರು. ಅನುಮೋದಿತ ಕಾರ್ಯಕ್ರಮದಡಿ ಚಿತ್ರದುರ್ಗ ಡಯಟ್‌ನ್ನು ಶೈಕ್ಷಣಿಕ ಉತ್ಕೃಷ್ಠತಾ ಸಂಸ್ಥೆಯಾಗಿ (ಅಇಓಖಿಇಖ ಔಈ ಇಘಿಅಇಐಇಓಅಇ ಆIಇಖಿ) ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ  ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಮಾತನಾಡಿ, ಶೈಕ್ಷಣಿಕ ತಂತ್ರಜ್ಞಾನ, ವಿಜ್ಞಾನ ಪಾರ್ಕ್ ಇವುಗಳನ್ನು ಆರಂಭಿಸಲು ಸೂಚಿಸಿದರು. ಭೇಟಿಯ ಸಮಯದಲ್ಲಿ ಶೈಕ್ಷಣಿಕ ಚಟುವಟಿಕೆಗಳ ಪ್ರಗತಿ ಪರಿಶೀಲನೆ ಮಾಡಿದ ಅವರು ಶಿಕ್ಷಕರ ವೃತ್ತಿಪರ ಸಾಮರ್ಥ್ಯ ಅಭಿವೃದ್ಧಿಪಡಿಸಲು ಡಯಟ್ ಮೂಲಕ ತರಬೇತಿ ನೀಡಲಾಗುತ್ತಿದೆ. ತರಬೇತಿಯ ಆಶಯ ಮತ್ತು ಅನುಷ್ಠಾನ ಕುರಿತು ಶೈಕ್ಷಣಿಕ ಸಂಶೋಧನಾ ಅಧ್ಯಯನ ಕೈಗೊಳ್ಳಬೇಕು. ಸಂಶೋಧನೆಗಳು ಮಕ್ಕಳ ಕಲಿಕಾ ಪ್ರಗತಿ ತಿಳಿದು ಗುಣಮಟ್ಟದ ಶಿಕ್ಷಣ ನೀಡಲು ನೆರವಾಗುತ್ತವೆ ಎಂದು ತಿಳಿಸಿದರು.  ಸಿ.ಟಿ.ಇ ಸಹನಿರ್ದೇಶಕಿ, ಟಿ.ಜಿ.ಲೀಲಾವತಿ, ಪ್ರಾಚಾರ್ಯ ಎಂ.ನಾಸಿರುದ್ದೀನ್, ಪ್ರವಾಚಕರಾದ ಸುಜಾತ, ತಿಪ್ಪೇಶಪ್ಪ, ಡಿ.ಎಸ್.ಇ.ಆರ್.ಟಿಯ ಸೆಂಟರ್ ಫಾರ್ ಎಕ್ಸಲೆನ್ಸ್ ಡಯಟ್ ನೋಡಲ್ ಅಧಿಕಾರಿ ರಾಜಶೇಖರ್, ಹಿರಿಯ ಉಪನ್ಯಾಸಕರಾದ ಅಶ್ವಥ್ ನಾರಾಯಣ, ಎಸ್.ಜ್ಞಾನೇಶ್ವರ, ಪೂರ್ಣಿಮಾ, ಗಿರಿಜಾ, ಉಪನ್ಯಾಸಕರಾದ ಎನ್.ರಾಘವೇಂದ್ರ, ಆರ್.ನಾಗರಾಜು, ಎಸ್.ಬಸವರಾಜು, ಕೆ,ಜಿ.ಪ್ರಶಾಂತ್, ಯು.ಸಿದ್ದೇಶಿ, ಬಿ.ಎಸ್.ನಿತ್ಯಾನಂದ, ಸಿ.ಎಸ್.ಲೀಲಾವತಿ, ವಿ.ಕನಕಮ್ಮ, ಎನ್.ಮಂಜುನಾಥ್, ರೇವಣ್ಣ, ತಾಂತ್ರಿಕ ಸಹಾಯಕರಾದ ಕೆ.ಆರ್.ಲೋಕೇಶ್, ಆರ್.ಲಿಂಗರಾಜು ಮತ್ತು ಕಚೇರಿ ಸಿಬ್ಬಂದಿ ವರ್ಗದವರು ಇದ್ದರು.