ಗುಣಮಟ್ಟದ ಶಿಕ್ಷಣ ನೀಡಲು ಸಿದ್ದರಾಗಿ;-ಡಿ.ಡಿ.ಪಿ.ಐ

?

ವಿಜಯಪುರ.ನ೨೦_ಈಗಾಗಲೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವತಿಯಿಂದ ಅತ್ಯುತ್ತಮ ಗುಣಮಟ್ಟದ ವಿಶಾಲವಾದ ಕಟ್ಟಡಗಳನ್ನು ನೀಡುವುದರೊಂದಿಗೆ ಶಾಲೆಗೆ ಅವಶ್ಯಕವಾದ ಪೀಠೋಪಕರಣಗಳು ಅವಶ್ಯಕ ಶೈಕ್ಷಣಿಕ ಸಾಮಗ್ರಿಗಳೊಂದಿಗೆ ಉತ್ತಮ ತರಭೇತಾದ ಶಿಕ್ಷಕರುಗಳನ್ನೂ ನೀಡಲಾಗಿದ್ದು, ಅವುಗಳ ಎಲ್ಲಾ ಉಪಯೋಗಗಳನ್ನು ಪಡೆದುಕೊಂಡು, ಸರಕಾರಿ ಶಾಲಾ ಶಿಕ್ಷಕರುಗಳು ಹೆಚ್ಚಿನ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಖಾಸಗಿ ಶಾಲೆಗಳಿಗಿಂತ ಯಾವುದರಲ್ಲಿಯೂ ಕಡಿಮೆಯಿಲ್ಲವೆಂಬುದನ್ನು ತೋರಿಸಿಕೊಡಬೇಕಾಗಿದೆ ಎಂದು ಶಿಕ್ಷಣ ಇಲಾಖೆಯ ಬೆಂ.ಗ್ರಾ.ಜಿಲ್ಲಾ ಉಪನಿರ್ದೇಶಕರಾದ ಗಂಗಮಾರೇಗೌಡ ತಿಳಿಸಿದರು.
ಪಟ್ಟಣದ ಮಾದರಿ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರದಂದು ಆಯೋಜಿಸಿದ್ದ ಮುಖ್ಯಶಿಕ್ಷಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪಟ್ಟಣದ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಬೋಧನಾ ಸಾಮರ್ಥ್ಯ ವೃದ್ದಿ, ವಿದ್ಯಾರ್ಥಿಗಳ ಕಲಿಕಾ ಆಸಕ್ತಿ, ತಂತ್ರಜ್ಞಾನ ಆಧಾರಿತ ಕಲಿಕೆ ಹಾಗೂ ಬೋಧನೆಯ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ತಾಲೂಕಿನ ವಿವಿಧ ಎನ್‌ಜಿಓಗಳ ಸಹಕಾರದೊಂದಿಗೆ ಮುಖ್ಯಶಿಕ್ಷಕರುUಳು ಇನ್ನೂ ಹೆಚ್ಚಿನ ಕಲಿPಗೆ ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಿದರು.
ಬೋಧನೆಗೆ ಅನುಗುಣವಾಗಿ ಪರೀಕ್ಷೆಗಳು;-ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ವಿಷಯವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ಇದರ ಬಗ್ಗೆ ಸರಕಾರದ ತೀರ್ಮಾನಕ್ಕೆ ಕಾಯಬೇಕಾಗಿದ್ದು, ಯಾವುದೇ ಕಾರಣಕ್ಕೂ ಶಾಲೆಗಳು ಪ್ರಾರಂಭವಾಗಿ ಏಪ್ರಿಲ್, ಮೇ, ಜೂನ್ ತಿಂಗಳುಗಳವರೆವಿಗೂ ಶಿಕ್ಷಕರು ಎಷ್ಟು ಭಾಗ ಪಾಠ-ಪ್ರವಚನಗಳನ್ನು ಮಾಡಲು ಸಾಧ್ಯವಾಗುತ್ತದೆಯೋ ಅಷ್ಟಕ್ಕೆ ಮಾತ್ರವೇ ಪರೀಕ್ಷೆ ಮಾಡಲಾಗುತ್ತದೆ. ಇದರ ಬಗ್ಗೆ ವಿದ್ಯಾರ್ಥಿಗಳು ಯಾವುದೇ ಆತಂಕ ಇಟ್ಟುಕೊಳ್ಳಬೇಕಾಗಿಲ್ಲ ಎಂದು ತಿಳಿಸಿದರು.
ಆನ್‌ಲೈನ್ ತರಗತಿ ಹಾಗೂ ಟೆಸ್ಟ್‌ಗಳನ್ನು ಬಳಸಿಕೊಳ್ಳಿ;-ಕೋವಿಡ್-೧೯ ಪ್ರಯುಕ್ತ ಭೌತಿಕ ಶಾಲೆಗಳು ಪ್ರಾರಂಭವಾಗದ ಕಾರಣ ಈಗಾಗಲೇ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಜಿಲ್ಲಾ ಶಿಕ್ಷಣ ಇಲಾಖೆಯಿಂದ ಆನ್‌ಲೈನ್ ತರಗತಿಗಳನ್ನು ನಡೆಸಲಾಗುತ್ತಿದ್ದು, ಪ್ರತಿ ಮಾಸವೂ ಎಲ್ಲಾ ವಿಷಯಗಳ ಬಗ್ಗೆ ಟೆಸ್ಟ್‌ಗಳನ್ನೂ ಸಹ ಮಾಡಲಾಗುತ್ತಿದೆ. ಇದರಲ್ಲಿ ಕೇವಲ ಸರಕಾರಿ ಶಾಲೆ ಮಕ್ಕಳು ಮಾತ್ರವಲ್ಲದೇ, ಖಾಸಗಿ ಮತ್ತಿತರೆ ಎಲ್ಲಾ ರೀತಿಯ ಮಕ್ಕಳು ಇದರ ಸೌಲಭ್ಯಗಳನ್ನು ಬಳಸಿಕೊಳ್ಳಬೇಕೆಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವತ್ ನಾರಾಯಣ್ ಮಾತನಾಡಿ, ತಾಲೂಕಿನ ಎಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿ ವೃಂದ, ಸಿಆರ್.ಪಿ ಅಧಿಕಾರಿಗಳು ಸೇರಿದಂತೆ ಎಲ್ಲರೂ ಒಟ್ಟಾಗಿ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ದಾಖಲಿಸುವ ಮೂಲಕ ಸರಕಾರಿ ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.
ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳಾದ ಹೇಮಂತ್ ಮಾದೇಗೌಡ, ಪ್ರತಿಭಾ ಕುಲಕರ್ಣಿ, ಶಿಕ್ಷಣ ಸಂಯೋಜಕರಾದ ಮಂಜುನಾಥ್, ಬಿ..ಆರ್.ಪಿ. ಪ್ರಸನ್ನ ಕುಮಾರ್, ಸಿ.ಆರ್.ಪಿ.ಗಳಾದ ವಿಜಯ್ ಕುಮಾರ್, ಜಗದೀಶ್, ನಾಗರಾಜ್, ಮತ್ತಿತರೆ ಮುಖ್ಯಶಿಕ್ಷಕ ವೃಂದ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.