ಗುಣಮಟ್ಟದ ಶಿಕ್ಷಣ ನಮ್ಮದಾಗಬೇಕು:ಚಂದ್ರಕಾಂತರೆಡ್ಡಿ

ಸೈದಾಪುರ:ನ.9:ಕೊವಿಡನಿಂದಾಗಿ ಕಲಿಕೆಯ ಮೇಲೆ ಪರಿಣಾಮ ಬೀರಿದ್ದೂ ಅದನ್ನು ಸರಿದೂಗಿಸಿ ಕಲಿಕಾ ಚೇತರಿಕೆ ಕಾರ್ಯಕ್ರಮದೊಂದಿಗೆ ಗುಣಮಟ್ಟದ ಶಿಕ್ಷಣ ನೀಡುವ ಜವಬ್ದಾರಿ ನಮ್ಮದಾಗಬೇಕು. ಈ ದಿಸೆಯಲ್ಲಿ ದಾಖಲಾತಿಗೆ ತಕ್ಕಂತೆ ಹಾಜರಾತಿಗೆ ಪ್ರಯತ್ನ ಮಾಡಬೇಕು ಎಂದು ಡಯಟ್ ಹಿರಿಯ ಉಪನ್ಯಾಸಕರಾದ ಚಂದ್ರಕಾಂತರೆಡ್ಡಿ ಅಭಿಪ್ರಾಯಪಟ್ಟರು.

ಪಟ್ಟಣದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಹಠಾತ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ನೂತನ ಬೋದನಾ ವಿಧಾನಗಳನ್ನು ಅಳವಡಿಸಿಕೊಂಡು ಕಲಿಕೆ ಸಂತಸ ದಾಯಕವಾಗಿರಬೇಕು. ಇದು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ನೆರವಾಗಲಿದೆ. ಕಾಲ ಕಾಲಕ್ಕೆ ಸರಕಾರದಿಂದ ಬರುವ ಆದೇಶಗಳನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡುವುದರ ಮೂಲಕ ಶೈಕ್ಷಣಿಕ ಅಭಿವೃದ್ದಿಗೆ ಗಮನವಹಿಸಬೇಕು ಎಂದು ಸಲಹೆ ನೀಡಿದರು.

ಇದಕ್ಕೂ ಮುಂಚೆ ವಿವಿಧ ಗ್ರಾಮಗಳ ಸರಕಾರಿ ಶಾಲೆಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಡಯಟ್ ಹಿರಿಯ ಉಪನ್ಯಾಸಕರಾದ ಮಹಾದೇವರೆಡ್ಡಿ, ಮುಖ್ಯಗುರು ಶಿವರಾಜಪ್ಪ, ಸಿಆರ್‍ಪಿ ಮುಕುಂದರಾವ ಸೇರಿದಂತೆ ಇತರರಿದ್ದರು.