ಗುಣಮಟ್ಟದ ಶಿಕ್ಷಣವೇ ಸವಾರ್ಂಗೀಣ ವಿಕಾಸಕ್ಕೆ ಅಸ್ತ್ರ: ಸಾಗರ ಖಂಡ್ರೆ

(ಸಂಜೆವಾಣಿ ವಾರ್ತೆ)
ಭಾಲ್ಕಿ : ನ.7:ತಾಲೂಕಿನ ಖಟಕ ಚಿಂಚೋಳಿ ಸಿದ್ದಮ್ಮ ಕಲ್ಯಾಣರಾವ್ ಪಾಟೀಲ್ ಗುರುಕುಲ ಪ್ರಾಥಮಿಕ ಶಾಲೆ ನೀಲಮ್ಮ ವೀರಬಸಪ್ಪ ಪ್ರೌಢಶಾಲೆ ಹಾಗೂ ವಿ.ಕೆ ಪಾಟೀಲ್ ಪದವಿಪೂರ್ವ ಕಾಲೇಜಿನಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಸಾಗರ್ ಖಂಡ್ರೆ ಅವರು ಮಾತನಾಡಿದರು.
ಮುಕ್ಕಳ ಸವಾರ್ಂಗೀಣ ವಿಕಾಸಕ್ಕೆ ಶಿಕ್ಷಣ ಪ್ರಮುಖ ಅಸ್ತ್ರವಾಗಿದೆ ಆ ದಿಸೆಯಲ್ಲಿ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಶಿಕ್ಷಣದಿಂದ ಮಕ್ಕಳಲ್ಲಿ ಜೀವನ ಮೌಲ್ಯ ಬೆಳೆಯಲಿದೆ ಜೊತೆಗೆ ಅವರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿಸುತ್ತದೆ ದಿವಂಗತ ವಿ. ಕೆ. ಪಾಟೀಲ್ ಅವರು ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎನ್ನುವ ಉದ್ದೇಶದಿಂದ ಶಾಲಾ-ಕಾಲೇಜು ಆರಂಭಿಸಿದ್ದಾರೆ ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾನ್ನಿಧ್ಯ : ಪರಮಪೂಜ್ಯ ಗುರುಬಸವ ಪಟ್ಟದ್ದೇವರು ವಹಿಸಿಕೊಂಡು ಮಾತನಾಡಿದರು. ಇಂದಿನ ಮಕ್ಕಳಲ್ಲಿ ಯಾವ ಕೊರತೆಯಿಲ್ಲ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಪ್ರತಿಭೆಯ ಇದೆ, ಮಕ್ಕಳಿಗೆ ಶಿಕ್ಷಕರು ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಉನ್ನತ ಮಟ್ಟಕ್ಕೆ ರಾಷ್ಟ್ರ, ರಾಜ್ಯ,ಮಟ್ಟದಲ್ಲಿ ಗುರುತಿಸುವಂತೆ ಮಾಡಬೇಕು. ಅದಕ್ಕೆ ಪಾಲಕರು ಪೆÇ್ರೀತ್ಸಾಹ ನೀಡಬೇಕು ಎಂದು ತಿಳಿಸಿದರು. ಬೀದರ್ ಬಸವ ಸೇವಾ ಪ್ರತಿಷ್ಠಾನದ ಅಕ್ಕ ಗಂಗಾಂಬಿಕೆ ಮಾತನಾಡಿದರು. ಸಂಸ್ಥೆಯ ನೀಲಮ್ಮ ವೀರಬಸಪ್ಪ ಪಾಟೀಲ್ ಅಧ್ಯಕ್ಷತೆ ವಹಿಸಿದರು.ಮುಖಂಡರಾದ ರಾಜಶೇಖರ ಪಾಟೀಲ್ ಗುರುಬಸವ ಪೂಜೆ ನೆರವೇರಿಸಿದರು. ಮುಖಂಡರಾದ ವೈಜಿನಾಥ ರಾಗಾ, ವಿಜಯಕುಮಾರ್ ಶಿವಪ್ಪ, ಶಾಂತಯ್ಯ ಸ್ವಾಮಿ, ಆಡಳಿತಾಧಿಕಾರಿಗಳಾದ ಮೋಹನ್ ರೆಡ್ಡಿ, ಧನರಾಜ ಬೊoಬಳಗೆ , ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್ ಪಾಟೀಲ್ ಮುಗನೂರ ಸ್ವಾಗತಿಸಿದರು, ಶಿವಕುಮಾರ್ ನಿರೂಪಿಸಿದರು. ನಾಗಶೆಟ್ಟಿ ವಂದಿಸಿದರು