ಚಿತ್ರದುರ್ಗ.ಜು.೧; ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುವುದರಿಂದ ನಿರುದ್ಯೋಗದ ಸಮಸ್ಯೆ ಕಡಿಮೆಯಾಗಲಿದೆ ಎಂದು ಸರ್ಕಾರಿ ಕಲಾ ಕಾಲೇಜು ಸ್ನಾತಕೋತ್ತರ ಕನ್ನಡ ವಿಭಾಗದ ಸಹಪ್ರಾಧ್ಯಾಪಕಿ ಡಾ.ಸಿ.ಬಿ.ಪ್ರೇಮ ಪಲ್ಲವಿ ಅಭಿಪ್ರಾಯಪಟ್ಟರು.ನಗರದ ತರಾಸು ರಂಗಮಂದಿರದಲ್ಲಿ ಕಾಲೇಜು ಶಿಕ್ಷಣ ಇಲಾಖೆ, ದಾವಣಗೆರೆ ವಿಶ್ವವಿದ್ಯಾನಿಲಯ, ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ ಆಯೋಜಿಸಲಾಗಿದ್ದ ಅಂತಿಮ ವರ್ಷದ ಬಿ.ಎ ಮತ್ತು ಬಿ.ಕಾಂ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾದರೆ ನಿರುದ್ಯೋಗದ ಸಮಸ್ಯೆಯೂ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರಶ್ನೆ ಮಾಡುವ ಮನೋಭಾವದ ಜೊತೆಗೆ ಮತ್ತು ಸೃಜನಾಶೀಲತೆ ಬೆಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಸಮಾಜವನ್ನು ಬದಲಾವಣೆ ಮಾಡುವ ಶಕ್ತಿ ಯುವ ಜನತೆಗೆ ಇದೆ. ವಿದ್ಯಾರ್ಥಿಗಳು ಹೊಸ ಮನುಷ್ಯರಾಗಿ ಹೊಸತನದಿಂದ ಬದುಕಬೇಕು. ವಿದ್ಯಾರ್ಥಿಗಳಿಗೆ ಕೇಳಿಸಿಕೊಳ್ಳುವ ಆಸಕ್ತಿ ಇರಬೇಕು. ಯಾರು ಜ್ಞಾನ ಹೊಂದಿರುತ್ತಾರೋ ಅವರು ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ. ಹಾಗಾಗಿ ಜ್ಞಾನ ಗಳಿಸುವ ಪ್ರಯತ್ನ ಮಾಡಬೇಕು ಎಂದರು. ಯುವ ಜನತೆಯು ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳವ ಶಕ್ತಿ ಹೊಂದಿರಬೇಕು. ಪ್ಯಾಷನ್, ಮೋಜು, ಮಸ್ತಿ ಎಂದು ಯುವ ಪೀಳಿಗೆಯು ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ. ಯಾವ ವಿದ್ಯಾರ್ಥಿ ಚರಿತ್ರೆ, ಪುರಾಣ, ಸಂಸ್ಕøತಿ ತಿಳಿದುಕೊಂಡಿರುತ್ತಾರೊ ಅವರು ಮಾತ್ರ ಒಳ್ಳೆಯ ವಿದ್ಯಾರ್ಥಿಯಾಗಲು ಸಾಧ್ಯ ಎಂದು ಹೇಳಿದರು.