ಗುಣಮಟ್ಟದ ಶಿಕ್ಷಣಕ್ಕೆ ನಮ್ಮ ಸರ್ಕಾರ ಬದ್ದ: ಶರಣಪ್ರಕಾಶ ಪಾಟೀಲ

ಬೀದರ್: ಡಿ.3:ಚತಾಯಿ ವಾತ್ಸಲ್ಯ ಮತ್ತು ಮಾತೃಭಾಷೆ ಗಿಂತ ದೊಡ್ಡದು ಯಾವುದೂ ಇಲ್ಲ, ಸರ್ಕಾರ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಹಾಗೂ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಬದ್ಧವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು.

ಅವರು ಹುಲಸೂರಿನಲ್ಲಿ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ “ಕನ್ನಡತ್ವ : ಸಮಸ್ಯೆ ಸವಾಲು” ಗಳ ಕುರಿತ ಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಈಗಾಗಲೇ ಕೆಕೆಆರ್ ಡಿಬಿ ವತಿಯಿಂದ ಮೂಲಭೂತ ಸೌಕರ್ಯಕ್ಕಾಗಿ 25% ಅನುದಾನವನ್ನು ಮೀಸಲಿಟ್ಟಿದ್ದೇವೆ, ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ 4500 ಶಿಕ್ಷಕರ ನೇಮಕಾತಿ ಮಾಡಲಾಗಿದೆ ಎಂದು ಹೇಳಿದರು.

ಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದ ವಿಕಾಸ ಅಕಾಡೆಮಿ ಸಂಚಾಲಕರಾದ ರೇವಣಸಿದ್ದಪ್ಪ ಪಾಟೀಲ ಅವರು ಮಾತನಾಡಿ, ಸರ್ಕಾರದ ವಿಪರೀತ ನೀತಿ ಮತ್ತು ಪಾಲಕರ ಇಂಗ್ಲೀಷ್ ವ್ಯಾಮೋಹ ದಿಂದ ಕನ್ನಡ ಶಾಲೆಗಳು ದುಸ್ಥಿತಿಯಲ್ಲಿವೆ,
ಬೀದರ ಜಿಲ್ಲೆಯಲ್ಲಿ 150 ಕನ್ನಡ ಶಾಲೆಗಳು ಮುಚ್ಚಿವೆ. ಸರ್ಕಾರದ ಅನುದಾನವೂ ಸಿಕ್ಕಿಲ್ಲ, ಕರ್ನಾಟಕ ಉಳಿಯಬೇಕಾದರೆ ಮೊದಲು ಕನ್ನಡ ಉಳಿಯಬೇಕೆಂದು ಹೇಳಿದರು.

ಕನ್ನಡ ಮಾಧ್ಯಮದ ಅವಶ್ಯಕತೆ ಕುರಿತು ಉಪನ್ಯಾಸ ನೀಡಿದ ಉದಯಗಿರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ರಮೇಶ ಮೂಲಗೆ ಮಾತನಾಡಿ, ಜನರು ವಿದೇಶಿ ಭಾಷೆಗಳಿಗೆ ಮಾರು ಹೋಗದೇ ಕನ್ನಡತ್ವವನ್ನು ಉಳಿಸಿ ಬೆಳೆಸಬೇಕೆಂದರು.
ವೇದಿಕೆಯ ಮೇಲೆ ಸರ್ವಾಧ್ಯಕ್ಷರಾದ ಡಾ. ಚನ್ನವೀರ ಶಿವಾಚಾರ್ಯರು, ಹುಲಸೂರಿನ ಡಾ.ಶಿವಾನಂದ ಸ್ವಾಮಿಗಳು, ಡಾ. ಎಸ್. ಎಂ.ಜೋಗದ, ಭೀಮಾಶಂಕರ ಆದೆಪ್ಪ, ಶಿವರಾಜ ಖಪ್ಲೆ, ಆಕಾಶ ಖಂಡಾಳೆ, ಡಾ.ಧಮೇರ್ಂದ್ರ ಭೋಸ್ಲೆ, ಸುರೇಶ ಚನ್ನಶೆಟ್ಟಿ, ಶಿವಕುಮಾರ ಕಟ್ಟೆ, ಶಿವಶಂಕರ ಟೋಕರೆ, ಬಾಬುರಾವ ದಾನಿ, ಗುರುನಾಥ ರಾಜಗಿರ, ವಿಜಯಕುಮಾರ್ ಗೌರೆ,ನಾಗರಾಜ್ ಹಾವಣ್ಣ ಮುಂತಾದವರು ಇದ್ದರು.