ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಸಾಮಾಜಿಕ ಕಾರ್ಯಕರ್ತ ಜಾಬೀನ್, ಶೇಖರ್ ನಾಟಿಕರ್ ಆಗ್ರಹ

ಸೇಡಂ,ಜು,28 : ತಾಲ್ಲೂಕಿನ ಸೇಡಂ – ಚಿಂಚೋಳಿ ಹೆದ್ದಾರಿಯ ರಸ್ತೆಯು ತೀರಾ ಹದಗೆಟ್ಟಿದ್ದು ಮಾರ್ಗ ಮಧ್ಯದಲ್ಲಿ ಮಳೆಗೆ ರಸ್ತೆಯ ಉದ್ದಕ್ಕೂ ಅಲ್ಲಲಿ ಬೃಹತ್ ಗಾತ್ರದ ದೊಡ್ಡ ಗುಂಡಿಗಳು ನಿಡಗುಂದ ಗ್ರಾಮದವರೆಗೂ ನಿರ್ಮಾಣಗೊಂಡಿವೆ ಇದರಿಂದ ವಾಹನ ಸವಾರರಿಗೆ ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತರಾದ, ಸಂತೋಷ ಜಾಬೀನ್,ಶೇಖರ್ ನಾಟಿಕರ್ ಆರೋಪಿಸಿದ್ದಾರೆ.
ಸೇಡಂ ಪಟ್ಟಣದ ಬಸ್ ಘಟಕ ಸಮೀಪದಿಂದ ಕಲಬುರಗಿ ಕ್ರಾಸ್ ವರೆಗೂ ಆರು ತಿಂಗಳ ಹಿಂದೆ ರಸ್ತೆ ನಿರ್ಮವಾಗಿತ್ತು ರಸ್ತೆ ನಿರ್ಮಾಣವಾಗಿ 2 ತಿಂಗಳವಳೇಗೆ ಅಲ್ಲಲ್ಲಿ ಗುಂಡಿಗಳು ಬಿದ್ದು ರಸ್ತೆ ಕೆಟ್ಟಿದರಿಂದ ರಸ್ತೆಯು ಸಂಪೂರ್ಣವಾಗಿ ಕಳಪೆ ಕಾಮಗಾರಿ ನಡೆದ ಪರಿಣಾಮದಿಂದ ಈಗ ಮಳೆಗೆ ದೊಡ್ಡದಾಗಿ ಗುಂಡಿಗಳು ನಿರ್ಮಾಣವಾಗಿದೆ ಎಂದರೂ
ಮಳೆಗಾಲವಾಗಿರುವುದರಿಂದ ಗುಂಡಿಗಳಲ್ಲಿ ನೀರು ತುಂಬಿಕೊಂಡಿದೆ. ರಸ್ತೆ ಎಂದು ತಿಳಿದು ವಾಹನ ಚಲಾಯಿಸಿದರೆ ಅಪಘಾತ ಕಟ್ಟಿಟ್ ಬುತ್ತಿ. ದಿನೇ ದಿನೇ ರಸ್ತೆಯಲ್ಲಿ ಡಾಂಬರು ಕಿತ್ತು ಬರುತ್ತಿದೆ. ಜಲ್ಲಿಕಲ್ಲುಗಳು ಮೇಲೇಳುತ್ತಿವೆ ಇದರಿಂದ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಆಸ್ಪತ್ರೆಗೆ ಹೋಗುವ ರೋಗಿಗಳು ಸಮಯ ಪೆÇೀಲಾಗುವುದಲ್ಲದೆ ಸಂಕಷ್ಟ ಪಡುವಂತಾಗಿದೆ
ನಿತ್ಯ ಈ ಮಾರ್ಗದಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ವಿರುದ್ಧ ದಿಕ್ಕಿನಲ್ಲಿ ವಾಹನಗಳು ಬಂದಾಗ ರಸ್ತೆಯ ಗುಂಡಿಗಳಿಂದ ಚಾಲಕರಿಗೆ ಚಲಾಯಿಸಲು ಕಷ್ಟವಾಗುತ್ತಿದೆ ಆಗಾಗ ವಾಹನಗಳ ನಿಯಂತ್ರಣ ತಪ್ಪುತ್ತಿದೆ ಇದರಿಂದ ಸದಾ ಪ್ರಯಾಣಿಕರು ವಾಹನ ಸವಾರರು ಸದಾ ಜೀವ ಭಯದಲ್ಲಿ ತೆರಳುವಂತಾಗಿದೆ ಅಲ್ಲದೆ ವಿದ್ಯಾರ್ಥಿಗಳಿಗಾಗಿ ಪೆÇೀಷಕರು ಸಹ ಮನೆಯಲ್ಲಿ ಆತಂಕ ಅನುಮಾನದಿಂದ ಇರುವ ಪರಿಸ್ಥಿತಿ ಎದುರಾಗಿದೆ ರಸ್ತೆಯ ದುರಸ್ತಿಯ ಹೆಸರಿನಲ್ಲಿ ಲಕ್ಷ ಲಕ್ಷ ಹಣ ಸುರಿದರೂ ಸಾಕಷ್ಟು ಅನುದಾನ ಬಿಡುಗಡೆ ಆದರೂ ರಸ್ತೆ ಮಾತ್ರ ಸರಿಯಾಗಿ ದುರಸ್ತಿಯಾಗುತ್ತಿಲ್ಲ ಎಂದು ಸಾರ್ವಜನಿಕ ವಲಯದಿಂದ ಆರೋಪ ಕೇಳಿ ಬಂದಿದೆ
ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ ಎಂದರೂ ಇನ್ನಾದರೂ ಶಾಸಕರು ಸಂಭಂದಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಅನುದಾನ ದುರುಪಯೋಗ ಮಾಡಿಕೊಳದೆ ಬಾಳಿಕೆ ಬರುವಂತಹ ಗುಣಮಟ್ಟದ ರಸ್ತೆ ನಿರ್ಮಿಸಬೇಕು , ಇಲ್ಲಿನ ಕಳಪೆ ಕಾಮಗಾರಿ ನಿರ್ಮಿಸಿದ ತಪ್ಪಿಸ್ಥರನ್ನು ಕ್ರಮ ಜರುಗಿಸಬೇಕು, ದುಸ್ತರಗೊಂಡ ರಸ್ತೆ ಸಂಪೂರ್ಣವಾಗಿ ಕಿತ್ತು ಹಾಕಿ ಹೊಸದಾಗಿ ಸುಗಮ ಸಂಚಾರಕ್ಕೆ ಗುಣಮಟ್ಟದ ರಸ್ತೆ ನಿರ್ಮಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.