ಗುಣಮಟ್ಟದ ಬೀಜ,ಗೊಬ್ಬರಗಳ ನೀಡಲು ಸೂಚನೆ


ಜಗಳೂರು.ನ.೧೦; ಸ್ಕೀಂ ಗಳಿಗೆ ಬಲಿಯಾಗಿ ನಿಮ್ಮ ಸುಖ ಕಳೆದು ಕೊಳ್ಳದೇ ರೈತರಿಗೆ ಬೆನ್ನೆಲುಬಾಗಿ ಗುಣಮಟ್ಟದ ಬೀಜ,ಗೊಬ್ಬರಗಳನ್ನು ನೀಡುವಂತೆ ಪರಿಕರ ಮಾರಾಟಗಾರರಿಗೆ ಶಾಸಕ ಎಸ್.ವಿ.ರಾಮಚಂದ್ರ ಸಲಹೆ ನೀಡಿದರು.
ಕೃಷಿ ಇಲಾಖೆಯಿಂದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸುರಕ್ಷಿತ ಕೀಟನಾಶಕ ಬಳಕೆ ಹಾಗೂ ಬೀಜೋಪಚಾರ ಆಂದೋಲನ ಕುರಿತು ತರಬೇತಿ ಹಾಗೂ ತಾಲ್ಲೂಕಿನ ೬ ಜನ ರೈತರಿಗೆ ೨೦೧೯-೨೦ ನೇ ಸಾಲಿನಲ್ಲಿ ಆತ್ಮ ಯೋಜನೆ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ಕೃಷಿ ಪರಿಕರ ಮಾರಾಟಗಾರರು ರೈತರಿಗಾಗಿ ಉತ್ತಮ ಸೇವೆ ಮಾಡುತ್ತಿದ್ದಾರೆ.ಕೆಲವೊಂದು ಸಂದರ್ಭದಲ್ಲಿ ಉತ್ತಮ ಗುಣ ಮಟ್ಟದ ಬೀಜೋಪಾರ ಕೊಟ್ಟರೂ ಸಹ ಸರಿಯಾಗಿ ಬೀಜಗಳು ಹುಟ್ಟಿಲ್ಲ, ಕಳಪೆಯಾಗಿ ನೀಡಿದ್ದಾರೆ ಎಂಬ ಆರೋಪಗಳು ಬರುತ್ತವೆ. ಡೀಲರ್‌ಗಳು ಜಾಗೃತರಾಗಿ ತಾವು ಲಾಭ ಮಾಡಿಕೊಳ್ಳುವ ಜೊತೆಗೆ ರೈತರಿಗೂ ಅನುಕೂಲ ಮಾಡಿಕೊಡಬೇಕು. ಜಿಲ್ಲಾ ಮಟ್ಟದ ಡೀಲರ್‌ಗಳನ್ನು ಆಯೋಜಿಸಿ ಸಭೆ ಮಾಡಲು ಚಿಂತಿಸಿದ್ದೇನೆ ಎಂದರು. ಕೃಷಿ, ಹೈನುಗಾರಿಕೆ, ತೊಟಗಾರಿಕೆ, ರೇಷ್ಮೆ ಸೇರಿದಂತೆ ೬ ಜನ ಆತ್ಮ ಯೋಜನೆ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ರೈತರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಿದರು.
ದಾವಣಗೆರೆ ಉಪ ಕೃಷಿ ನಿಧೇಶಕರಾದ ಕೆ.ಎಸ್.ಶಿವಕುಮಾರ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಕೇತ್ರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದು ಯೋಜನೆಯ ಬಳಕೆಯನ್ನು , ರೈತರು, ಕೃಷಿ ಪರಿಕರ ಮಾರಾಟಗಾರರು ಬಳಕೆ ಮಾಡಿಕೊಳ್ಳಬೇಕೆಂದು ಅವರು ತಿಳಿಸಿದರು.
ಕೃಷಿ ಪರಿಕರ ಮಾರಾಟಗಾರರು ಹಾಗೂ ಕೃಷಿ ಪತ್ತಿನ ಸಹಕಾರಿ ಬ್ಯಾಂಕುಗಳ ಕಾರ್ಯದರ್ಶಿಗಳಿಗೆ ಕಾನೂನುಗಳ ಬಗ್ಗೆ ಮಾಹಿತಿ, ಸುರಕ್ಷಿತ ಕೀಟನಾಶಕಗಳ ಬಗ್ಗೆ, ಬೀಜೋಪಚಾರಗಳ ಬಗ್ಗೆ ಪ್ರಾತ್ಯಕ್ಷಿತವಾಗಿ ತೋರಿಸಲಾಯಿತು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯರಾದ ಎಸ್.ಕೆ ಮಂಜುನಾಥ್, ಜಗಳೂರು ಕೃಷಿ ಇಲಾಖೆಯ ಸಹಾಯಕ ನಿರ್ಧೇಶಕರಾದ ಶ್ರೀನಿವಾಸಲು, ಕೃಷಿ ಪರಿಕರ ಮಾರಾಟಗಾರ ಸಂಘದ ಅಧ್ಯಕ್ಷ ಪ್ರಸಾದ್, ಸಂಪನ್ಮೂಲ ವ್ಯಕ್ತಿ, ವಿಜೆಲೆನ್ಸ್ ಸುನೀಲ್‌ಕುಮಾರ್, ಜಾಗೃತಿ ಸಮಿತಿ ಸದಸ್ಯರಾದ ತಿಪ್ಪೇಸ್ವಾಮಿ, ಬಯಲರ್ ಕಂಪನಿಯ ವ್ಯವಸ್ಥಾಪಕ ಸಂತೋಷ್, ಹರ್ಷ, ರೇಣುಕುಮಾರ, ಕೃಷಿ ಅಧಿಕಾರಿ ಜೀವಿತ, ಇತರರು ಇದ್ದರು.