ಗುಣಮಟ್ಟದ ಕಾರ್ಯ ಕೈಗೊಳ್ಳಲು ಸಂಸದ ಖಡಕ್ ಸೂಚನೆ

ರಾಯಚೂರು,ಜು.೧೮- ನಗರದ ರೇಲ್ವೆ ನಿಲ್ದಾಣದಲ್ಲಿ ಅಭಿವೃದ್ದಿ ಕಾರ್ಯಗಳು ತ್ವರಿತ ಗತಿಯಲ್ಲಿ ನಡೆಯಿತ್ತಿದ್ದು, ಇಂದು ಸಂಸದ ರಾಜಾ ಅಮರೇಶ್ವರ ನಾಯಕ ಅವರು ಪರಿಶೀಲನೆ ಮಾಡಿ ಗುಣಮಟ್ಟದ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಎಸ್ಕಾಲೇಟರ ,ಲಿಫ್ಟ್ ಹಾಗೂ ಹೊರಂಗಣ ನಡೆಯುತ್ತಿರುವ ಕೆಲಸದ ಪ್ರಗತಿಯನ್ನು ಸಮಗ್ರವಾಗಿ ವೀಕ್ಷಣೆ ಮಾಡಿ ಗುಣಮಟ್ಡದಲ್ಲಿ ಕಾರ್ಯ ಕೈಗೊಳ್ಳಲು ಖಡಕ್ ಸೂಚನೆ ನೀಡಿದರು. ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನಹರಿಸಿ ಗುಣಮಟ್ಟದ ಕೆಲಸ ಮಾಡಿ ಸ್ವಚ್ಛತೆ ಕಾಪಾಡಬೇಕು ಇಲ್ಲವಾದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು. ರೇಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಹೆಚ್ಚಿನ ಸೌಕರ್ಯಗಳು ಒದಗಿಸಲಾಗಿದೆ. ರೇಲ್ವೆ ನಿಲ್ದಾಣದ ಪ್ಲಾಟ್ ಫಾರಂ ೧ ರನ್ನು ಅಗಳ ಮತ್ತು ಎತ್ತರ ಮಾಡಲಾಗಿದೆ.ಇದರಲ್ಲಿ ಪ್ರಯಾಣಿಕರ ಸುರಕ್ಷತೆ, ಅನುಕೂಲ ಅಡಗಿದೆ ಎಂದರು. ರೇಲ್ವೆ ಬೊರ್ಡ ಸದಸ್ಯರಾದ ಬಾಬುರಾವ್ ಅವರು ಮಾತನಾಡಿ, ಸಂಸದರ ಸಹಕಾರದಿಂದ ಇಲ್ಲಿ ಅಭಿವೃದ್ದಿ ಕಾರ್ಯಗಳು ಭರದಿಂದ ನಡೆದಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳುವ ಆಶಾಭಾವನೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಸ್ಟೇಷನ್ ವ್ಯವಸ್ಥಾಪಕ ಎಸ್.ಕೆ.ಸರ್ಕಾರ,ಸ್ಟೇಷನ್ ಮಾಸ್ತರ ಓಂ ಪ್ರಕಾಶ ಮತ್ತು ಬಿಜೆಪಿ ರಾಯಚೂರ ಎಸ್.ಟಿ ಮೋರ್ಚಾ ಅಧ್ಯಕ್ಷರಾದ ಬಸವರಾಜ ಅಸ್ಕಿಹಾಳ ಸೇರಿದಂತೆ ಉಪಸ್ಥಿತರಿದ್ದರು.